IPL 2026: 15 ರನ್ ಬಾರಿಸಲು 13 ಕೋಟಿ ಸಂಬಳ ಪಡೆದ ಸನ್‌ರೈಸರ್ಸ್ ಬ್ಯಾಟರ್

Updated on: Jun 03, 2026 | 9:14 PM

Liam Livingstone IPL 2026: ಐಪಿಎಲ್ 2026ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಲಿಯಾಮ್ ಲಿವಿಂಗ್‌ಸ್ಟನ್ ಕಳಪೆ ಪ್ರದರ್ಶನ ನೀಡಿದರು. 13 ಕೋಟಿ ರೂ.ಗಳಿಗೆ ಖರೀದಿಸಿದರೂ, ಕೇವಲ 2 ಪಂದ್ಯಗಳಲ್ಲಿ 15 ರನ್ ಗಳಿಸಿ ದುಬಾರಿ ವೈಫಲ್ಯ ಅನುಭವಿಸಿದರು. ಈ ಹಿಂದೆ ಸಹ ಅವರು ಅಸ್ಥಿರ ಪ್ರದರ್ಶನ ನೀಡಿದ್ದರು. ಹೆಚ್ಚಿನ ಹಣ ಖರ್ಚು ಮಾಡಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ, ಹೈದರಾಬಾದ್ ಫ್ರಾಂಚೈಸಿ ಅವರನ್ನು ಮುಂದಿನ ಆವೃತ್ತಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

1 / 5
2026 ರ ಐಪಿಎಲ್ ಅದ್ಧೂರಿಯಾಗಿ ಕೊನೆಗೊಂಡಿದೆ. ಪ್ರತಿ ಬಾರಿಯಂತೆ ಈ ಸೀಸನ್​ನಲ್ಲಿ ಕೆಲವು ಆಟಗಾರರು ತಮ್ಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಇನ್ನು ಕೆಲವು ಸ್ಟಾರ್ ಆಟಗಾರರ ಹರಾಜಿನಲ್ಲಿ ಕೋಟಿ ಕೋಟಿ ಹಣ ಪಡೆದರೂ ಅವರ ಪ್ರದರ್ಶನ ಮಾತ್ರ ತೀರ ಕಳಪೆಯಾಗಿತ್ತು. ಅಂತಹ ಆಟಗಾರರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ ಲಿಯಾಮ್ ಲಿವಿಂಗ್‌ಸ್ಟನ್ ಕೂಡ ಒಬ್ಬರು (PC- PTI).

2 / 5
ಐಪಿಎಲ್ 2026 ರ ಹರಾಜಿನಲ್ಲಿ, ಸನ್‌ರೈಸರ್ಸ್ ಹೈದರಾಬಾದ್, ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಅವರನ್ನು 13 ಕೋಟಿ ರೂ.ಗಳಿಗೆ ಖರೀದಿಸುವ ಮೂಲಕ ತಂಡವನ್ನು ಬಲಪಡಿಸುವ ಕೆಲಸ ಮಾಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಲಿವಿಂಗ್‌ಸ್ಟನ್ ಸಿಕ್ಸರ್‌ಗಳ ಮಳೆಗರೆಯುತ್ತಾರೆ ಎಂದು ಮ್ಯಾನೇಜ್‌ಮೆಂಟ್ ಹೆಚ್ಚಿನ ಭರವಸೆ ಹೊಂದಿತ್ತು. ಆದರೆ ಅವಕಾಶ ಸಿಕ್ಕಾಗಲೆಲ್ಲ ಲಿವಿಂಗ್‌ಸ್ಟನ್ ನೀಡಿದ ಪ್ರದರ್ಶನ ಕಳಪೆಯಾಗಿತ್ತು (PC- PTI).

3 / 5
ಈ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಲಿಯಾಮ್ ಲಿವಿಂಗ್‌ಸ್ಟನ್ ಅವರನ್ನು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಸಿತ್ತು. ಆ ಎರಡು ಇನ್ನಿಂಗ್ಸ್‌ಗಳಲ್ಲಿ ಲಿವಿಂಗ್‌ಸ್ಟನ್ ಕೇವಲ 15 ರನ್‌ ಮಾತ್ರ ಕಲೆಹಾಕಿದರು. ಇದರರ್ಥ ಲಿವಿಂಗ್‌ಸ್ಟನ್ 1 ರನ್ ಬಾರಿಸಲು ಸನ್‌ರೈಸರ್ಸ್ ತಂಡದ ಪಡೆದ ಸಂಭಾವನೆ ಹತ್ತಿರಹತ್ತಿರ 80 ಲಕ್ಷ ರೂ.ಗೂ ಅಧಿಕವಾಗಿದೆ (PC- PTI).

4 / 5
ಲಿವಿಂಗ್‌ಸ್ಟನ್ ಈ ಹಿಂದೆ ಆರ್‌ಸಿಬಿ ಪರ ಆಡಿದಾಗ ನಿರೀಕ್ಷೆಯಂತೆ ಪ್ರದರ್ಶನ ನೀಡಲಿಲ್ಲ. 8.75 ಕೋಟಿ ರೂ.ಗಳಿಗೆ ಆರ್​​ಸಿಬಿ ಸೇರಿಕೊಂಡಿದ್ದ ಲಿವಿಂಗ್‌ಸ್ಟನ್ ಆಡಿದ 10 ಪಂದ್ಯಗಳಲ್ಲಿ ಕೇವಲ 112 ರನ್ ಗಳಿಸಿದ್ದರು. ಆದಾಗ್ಯೂ 2022 ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಮಿಂಚಿದ್ದ ಲಿವಿಂಗ್‌ಸ್ಟನ್ 437 ರನ್ ಗಳಿಸಿದ್ದರು. 2024 ರಲ್ಲಿ ಆಡಿದ್ದ 7 ಪಂದ್ಯಗಳಲ್ಲಿ 111 ರನ್‌ ಮಾತ್ರ ಕಲೆಹಾಕಿದ್ದರು (PC- PTI).

5 / 5
ಲಿವಿಂಗ್‌ಸ್ಟನ್ ಅವರ ಸತತ ವೈಫಲ್ಯಗಳ ಹೊರತಾಗಿಯೂ ಕಾವ್ಯ ಮಾರನ್, ಅವರ ಮೇಲೆ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದ್ದು ಇದೀಗ ಟೀಕೆಗೆ ಗುರಿಯಾಗಿದೆ. ಹೀಗಾಗಿ ಲಿವಿಂಗ್‌ಸ್ಟನ್ ಅವರನ್ನು ತಂಡದಲ್ಲಿ ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಹೀಗಾಗಿ ಹೈದರಾಬಾದ್ ಫ್ರಾಂಚೈಸಿ ಮುಂದಿನ ಆವೃತ್ತಿಗೂ ಮುನ್ನ ಲಿವಿಂಗ್​ಸ್ಟನ್ ಅವರನ್ನು ಕೈಬಿಡುವ ಸಾಧ್ಯತೆಗಳಿವೆ (PC- PTI).

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us