
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈವರೆಗೆ 15 ತಂಡಗಳು ಕಣಕ್ಕಿಳಿದಿವೆ. ಈ ಹದಿನೈದು ತಂಡಗಳಲ್ಲಿ 14 ತಂಡಗಳಿಗೆ ಸಾಧ್ಯವಾಗದೇ ಇರುವುದನ್ನು ಪಂಜಾಬ್ ಕಿಂಗ್ಸ್ (Punjab Kings) ಸಾಧಿಸಿ ತೋರಿಸಿದೆ. ಅದು ಸಹ ಮೊದಲ 5 ಮ್ಯಾಚ್ಗಳಲ್ಲಿ ಸೋಲು ಕಾಣದೆ ವಿಶೇಷ ದಾಖಲೆ ಬರೆದಿದ್ದಾರೆ.

ಅಂದರೆ ಐಪಿಎಲ್ ಇತಿಹಾಸದಲ್ಲೇ ಮೊದಲ ಐದು ಪಂದ್ಯಗಳಲ್ಲಿ ಸೋಲು ಕಾಣದೇ ಟೂರ್ನಿ ಆರಂಭಿಸಿರುವುದು ಕೇವಲ 2 ತಂಡಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ತಂಡ ಪಂಜಾಬ್ ಕಿಂಗ್ಸ್. ಇದಾದ ಬಳಿಕ ಈ ದಾಖಲೆಯನ್ನು ರಾಜಸ್ಥಾನ್ ರಾಯಲ್ಸ್ ಸರಿಗಟ್ಟಿದ್ದರು.

ಐಪಿಎಲ್ 2014 ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಆರಂಭಿಕ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಸೋಲು ಕಾಣದೇ ಮೊದಲ ಐದು ಪಂದ್ಯಗಳನ್ನಾಡಿದ ವಿಶೇಷ ದಾಖಲೆಯನ್ನು ಪಂಜಾಬ್ ಕಿಂಗ್ಸ್ ನಿರ್ಮಿಸಿತ್ತು.

ಐಪಿಎಲ್ 2015 ರಲ್ಲಿ ಈ ದಾಖಲೆಯನ್ನು ರಾಜಸ್ಥಾನ್ ರಾಯಲ್ಸ್ ಸರಿಗಟ್ಟಿದ್ದರು. ಅಂದಿನ ಸೀಸನ್ನಲ್ಲಿ ಆರ್ಆರ್ ಪಡೆಯು ಸತತ 5 ಪಂದ್ಯಗಳಲ್ಲೂ ಗೆಲುವು ದಾಖಲಿಸಿ, ಸೋಲಿಲ್ಲದ ಸರದಾರರಾಗಿ ಟೂರ್ನಿಯನ್ನು ಆರಂಭಿಸಿತ್ತು. ಈ ಮೂಲಕ ಪಂಜಾಬ್ ಕಿಂಗ್ಸ್ ನಂತರ ಈ ಸಾಧನೆ ಮಾಡಿದ ತಂಡವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಇದೀಗ ಪಂಜಾಬ್ ಕಿಂಗ್ಸ್ ತಂಡವು ಮತ್ತೊಮ್ಮೆ ಸೋಲಿಲ್ಲದೇ ಮೊದಲ ಐದು ಪಂದ್ಯಗಳನ್ನು ಮುಗಿಸಿದೆ. ಪಂಜಾಬ್ ಕಿಂಗ್ಸ್ ಈ ಬಾರಿ ಆಡಿದ 5 ಪಂದ್ಯಗಳಲ್ಲಿ 4 ರಲ್ಲಿ ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಸೋಲಿಲ್ಲದೇ 2 ಬಾರಿ ಮೊದಲ ಐದು ಪಂದ್ಯಗಳನ್ನು ಮುಗಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ಪಂಜಾಬ್ ಕಿಂಗ್ಸ್ ತಮ್ಮದಾಗಿಸಿಕೊಂಡಿದ್ದಾರೆ.

ಅಂದರೆ ಐಪಿಎಲ್ ಯಾವುದೇ ತಂಡ 2 ಬಾರಿ ಮೊದಲ ಐದು ಪಂದ್ಯಗಳಲ್ಲಿ ಸೋಲು ಕಾಣದೇ ಟೂರ್ನಿ ಆರಂಭಿಸಿದ ಚರಿತ್ರೆ ಇಲ್ಲ. ಇದೀಗ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್ರೈಸರ್ಸ್ ಹೈದರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಡೆಕ್ಕನ್ ಚಾರ್ಜರ್ಸ್, ಕೊಚ್ಚಿನ ಟಸ್ಕರ್ಸ್ ಕೇರಳ, ಪುಣೆ ವಾರಿಯರ್ಸ್ ಇಂಡಿಯಾ, ಗುಜರಾತ್ ಲಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡಗಳಿಗೆ ಸಾಧ್ಯವಾಗದೇ ಇರುವುದನ್ನು ಪಂಜಾಬ್ ಕಿಂಗ್ಸ್ ಸಾಧಿಸಿ ತೋರಿಸಿದೆ.