
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಟ್ರೋಫಿ ಗೆದ್ದ ದಾಖಲೆ ರೋಹಿತ್ ಶರ್ಮಾ ಹಾಗೂ ಅಂಬಾಟಿ ರಾಯುಡು ಹೆಸರಿನಲ್ಲಿದೆ. ಈ ಇಬ್ಬರು ಆಟಗಾರರು ತಲಾ 6 ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಇದಾಗ್ಯೂ ಇಬ್ಬರಿಗೆ ಹ್ಯಾಟ್ರಿಕ್ ಟ್ರೋಫಿ ಗೆಲ್ಲುವ ಭಾಗ್ಯ ಲಭಿಸಿಲ್ಲ. (PC: IPL)

ಅಂದರೆ ಸತತವಾಗಿ ಮೂರು ಬಾರಿ ಟ್ರೋಫಿ ಗೆದ್ದು "ಹ್ಯಾಟ್ರಿಕ್ ಪ್ರಶಸ್ತಿ" ಮುಡಿಗೇರಿಸಿಕೊಂಡ ಅಪರೂಪದ ಸಾಧನೆ ಮಾಡಲು ರೋಹಿತ್ ಶರ್ಮಾ ಹಾಗೂ ಅಂಬಾಟಿ ರಾಯುಡುಗೆ ಸಾಧ್ಯವಾಗಿಲ್ಲ. ಈ ಸಾಧನೆ ಮಾಡಿರುವುದು ಕೇವಲ ಮೂವರು ಆಟಗಾರರು ಮಾತ್ರ. ಅವರೆಂದರೆ... (PC: IPL)

ಕರ್ಣ್ ಶರ್ಮಾ: ಐಪಿಎಲ್ ಇತಿಹಾಸದಲ್ಲಿ ಸತತವಾಗಿ ಮೂರು ಬಾರಿ ಟ್ರೋಫಿ ಗೆದ್ದ ಮೊದಲ ಆಟಗಾರ ಕರ್ಣ್ ಶರ್ಮಾ. ಸನ್‌ರೈಸರ್ಸ್ ಹೈದರಾಬಾದ್ (2016), ಮುಂಬೈ ಇಂಡಿಯನ್ಸ್ (2017), ಚೆನ್ನೈ ಸೂಪರ್ ಕಿಂಗ್ಸ್ (2018) ಪರ ಕಣಕ್ಕಿಳಿದು ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಹ್ಯಾಟ್ರಿಕ್ ಟ್ರೋಫಿ ಗೆದ್ದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: IPL)

ಫಿಲ್ ಸಾಲ್ಟ್: ಕರ್ಣ್ ಶರ್ಮಾ ಬಳಿಕ ಈ ಸಾಧನೆ ಮಾಡಿದ್ದು ಫಿಲ್ ಸಾಲ್ಟ್. 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದು ಟ್ರೋಫಿ ಎತ್ತಿ ಹಿಡಿದಿದ್ದ ಸಾಲ್ಟ್, ಆ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (2025, 2026) ಪರ ಎರಡು ಟ್ರೋಫಿ ಗೆದ್ದಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಹ್ಯಾಟ್ರಿಕ್ ಟ್ರೋಫಿ ಸಾಧನೆ ಮಾಡಿದ್ದಾರೆ. (PC: IPL)

ಸುಯಶ್ ಶರ್ಮಾ: ಫಿಲ್ ಸಾಲ್ಟ್ ಜೊತೆ ಐಪಿಎಲ್ ಹ್ಯಾಟ್ರಿಕ್ ಟ್ರೋಫಿ ಸಾಧನೆ ಮಾಡಿದ ಮತ್ತೋರ್ವ ಆಟಗಾರ ಸುಯಶ್ ಶರ್ಮಾ. ಕೋಲ್ಕತ್ತಾ ನೈಟ್ ರೈಡರ್ಸ್ (2024) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (2025, 2026) ಪರ ಕಣಕ್ಕಿಳಿದು ಮೂರು ವರ್ಷ ಟ್ರೋಫಿ ಎತ್ತಿ ಹಿಡಿದ ಹೆಗ್ಗಳಿಕೆಯನ್ನು ಸುಯಶ್ ತಮ್ಮದಾಗಿಸಿಕೊಂಡಿದ್ದಾರೆ. (PC: IPL)