
ಆಸ್ಟ್ರೇಲಿಯಾದಲ್ಲಿನ ಬಿಗ್ಬ್ಯಾಷ್ ಟಿ20 ಲೀಗ್ ಟೂರ್ನಿ ಭಾರತದಲ್ಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಷ್ಟೇ ಪ್ರಸಿದ್ಧಿ ಪಡೆದಿದೆ. ವಿಶ್ವದ ಅನೇಕ ಸ್ಟಾರ್ ಆಟಗಾರರು ಇದರಲ್ಲಿ ಕಣಕ್ಕಿಳಿಯುತ್ತಾರೆ. ಅದರಂತೆ 2021-22ನೇ ಸಾಲಿನ ಬಿಬಿಎಲ್ ಟೂರ್ನಿ ಸಾಕಷ್ಟು ರೋಚಕತೆಯಿಂದ ಸಾಗುತ್ತಿದೆ. ಸದ್ಯ ಬಿಗ್ಬ್ಯಾಷ್ ಲೀಗ್ ಹೊಸದಾಗಿ ವಿಶೇಷ ವಿಚಾರದಿಂದ ಸುದ್ದಿಯಲ್ಲಿದೆ.

ಇದಕ್ಕೆ ಕಾರಣವಾಗಿದ್ದು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ, ವೀಕ್ಷಕ ವಿವರಣೆಗಾರ್ತಿ ಇಶಾ ಗುಹಾ ಪಂದ್ಯದ ನಡುವೆ ಆಡಿದ ಆ ಒಂದು ಮಾತು.

ನಿವೃತ್ತಿಯ ನಂತರ ಕಾಮೆಂಟೇಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಭಾರತ ಮೂಲದ ಇಶಾ ಗುಹಾ ಸದ್ಯ ಬಿಗ್ಬ್ಯಾಷ್ ಲೀಗ್ನಲ್ಲಿ ಕಾಮೆಂಟರಿ ಮಾಡುವಾಗ ಡಬಲ್ ಮೀನಿಂಗ್ ಮಾತನಾಡಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾನಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಷ್ಟಕ್ಕೂ ಇಶಾ ಗುಹಾ ಆಡಿದ ಡಬಲ್ ಮೀನಿಂಗ್ ಮಾತು ಏನು...?

ಬಿಗ್ಬ್ಯಾಷ್ನಲ್ಲಿ ಪಂದ್ಯವೊಂದು ನಡೆಯುತ್ತಿರುವ ಮಧ್ಯೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್ ಕ್ರಿಸ್ಟ್ ಮತ್ತು ಮತ್ತೋರ್ವ ಮಾಜಿ ಕ್ರಿಕೆಟಿಗರು ಕೆರ್ರಿ ಓ ಕೀಫ್ ಕಾಮೆಂಟರಿ ನೀಡುತ್ತಿದ್ದರು. ಈ ವೇಳೆ ಇಶಾ ಗುಹಾ ಕೂಡ ಜೊತೆಗಿದ್ದರು.

ಮೂವರು ಕಾಮೆಂಟೇಟರ್ ಕ್ಯಾರಂ ಬಾಲ್ ಬಗ್ಗೆ ಚರ್ಚೆ ನಡೆಸಲು ಶುರು ಮಾಡಿದರು. ಆ ವೇಳೆ ಮಾಜಿ ಸ್ಪಿನ್ನರ್ ಆಗಿರುವ ಓ ಕೀಫ್, ಅಕಾಡೆಮಿಗಳಲ್ಲಿ ಕ್ರಿಕೆಟ್ ಕೋಚ್ಗಳು ಹೇಗೆ ಸ್ಪಿನ್ ಬೌಲರ್ಗಳನ್ನು ಆಯ್ಕೆ ಮಾಡುತ್ತಾರೆ ಎಂಬ ಬಗ್ಗೆ ಮಾತನಾಡುತ್ತಿದ್ದರು. ‘ನಮ್ಮಲ್ಲಿ ಅತ್ಯಂತ ಉದ್ದವಾದ ಮಧ್ಯದ ಕೈಬೆರಳು ಇರುವ ಆಟಗಾರನನ್ನು ಕೋಚ್ ಹೆಚ್ಚಾಗಿ ಕ್ಯಾರಂ ಬಾಲ್ ಸ್ಪಿನ್ನರ್ ಆಗಿ ಆರಿಸುತ್ತಿದ್ದರು’ ಎಂಬ ಮಾತುಗಳನ್ನು ಹೇಳಿದರು.

ಇದಕ್ಕೆ ಇಶಾ ಗುಹಾ ಆಡಿದ ಮಾತು ವಿಚಿತ್ರವಾಗಿತ್ತು. ‘ನಿಮ್ಮದು ಎಷ್ಟು ದೊಡ್ಡದಿದೆ, ತೋರಿಸಿ’ ಎಂದು ಇಶಾ ಪ್ರಶ್ನೆ ಹಾಕಿದ್ದಾರೆ. ತಕ್ಷಣವೇ ತಮ್ಮ ಮಾತಿನಲ್ಲಿರುವ ಡಬಲ್ ಮೀನಿಂಗ್ ಅರಿತುಕೊಂಡ ಇಶಾ ಗುಹಾ ನಗು ತಡೆಯಲಾಗದೆ ಜೋರಾಗಿ ನಕ್ಕಿದರು. ಇವರ ಪಕ್ಕದಲ್ಲಿದ್ದ ಗಿಲ್ಕ್ರಿಸ್ಟ್ ಅದೇಗೋ ನಗುವನ್ನು ಕಂಟ್ರೋಲ್ ಮಾಡಿಕೊಂಡು ವೀಕ್ಷಕವಿವರಣೆಯ ವಿಷಯವನ್ನು ತಿರುಗಿಸಿದರು.

ಪಂದ್ಯದ ನಡುವೆ ನಡೆದ ಈ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನುಅರಿತ 36 ವರ್ಷದ ಇಶಾ ಗುಹಾ, ‘ನನ್ನ ಮಾತು ಸಮಂಜಸವಾಗಿದೆ. ಅದು ಕ್ಯಾರಂ ಬಾಲ್ಗೆ ಸಂಬಂಧಿಸಿದ್ದು ಮಾತ್ರವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ವೇಗಿಯಾಗಿರುವ ಇಶಾ ಗುಹಾ ಇಂಗ್ಲೆಂಡ್ ಪರ 8 ಟೆಸ್ಟ್, 83 ಏಕದಿನ ಮತ್ತು 22 ಟಿ20 ಪಂದ್ಯ ಆಡಿದ್ದು, ಕ್ರಮವಾಗಿ 29, 101 ಮತ್ತು 18 ವಿಕೆಟ್ ಕಬಳಿಸಿದ್ದಾರೆ.