ಐಪಿಎಲ್​ನಲ್ಲಿ ‘ದುರಾದೃಷ್ಟ’ದ ದಾಖಲೆ ಬರೆದ ಇಶಾನ್ ಕಿಶನ್

Updated on: Apr 19, 2026 | 2:16 PM

IPL 2026 SRH vs CSK: ಹೈದರಾಬಾದ್​ನಲ್ಲಿ ನಡೆದ ಐಪಿಎಲ್​ನ 27ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 194 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 184 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಎಸ್​ಆರ್​ಹೆಚ್ ತಂಡ 10 ರನ್​ಗಳ ಜಯ ಸಾಧಿಸಿದೆ. ಈ ಗೆಲುವಿನ ನಡುವೆ ಇಶಾನ್ ಕಿಶನ್ ನತದೃಷ್ಟದ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

1 / 5
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಈವರೆಗೆ 73 ಹೆಚ್ಚು ನಾಯಕರುಗಳು ಕಣಕ್ಕಿಳಿದಿದ್ದಾರೆ. ಈ 73 ನಾಯಕರುಗಳ ಪೈಕಿ ನತದೃಷ್ಟದ ದಾಖಲೆ ಬರೆದಿರುವುದು ಇಶಾನ್ ಕಿಶನ್ (Ishan Kishan) ಮಾತ್ರ. ಅಂದರೆ ಐಪಿಎಲ್ ಇತಿಹಾಸದಲ್ಲೇ ಮೊದಲ ಆರು ಪಂದ್ಯಗಳಲ್ಲೂ ಟಾಸ್ ಸೋತ ಏಕೈಕ ಕ್ಯಾಪ್ಟನ್ ಎಂಬ ಅಪಕೀರ್ತಿಯೊಂದು ಇಶಾನ್ ಕಿಶನ್ ಪಾಲಾಗಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಈವರೆಗೆ 73 ಹೆಚ್ಚು ನಾಯಕರುಗಳು ಕಣಕ್ಕಿಳಿದಿದ್ದಾರೆ. ಈ 73 ನಾಯಕರುಗಳ ಪೈಕಿ ನತದೃಷ್ಟದ ದಾಖಲೆ ಬರೆದಿರುವುದು ಇಶಾನ್ ಕಿಶನ್ (Ishan Kishan) ಮಾತ್ರ. ಅಂದರೆ ಐಪಿಎಲ್ ಇತಿಹಾಸದಲ್ಲೇ ಮೊದಲ ಆರು ಪಂದ್ಯಗಳಲ್ಲೂ ಟಾಸ್ ಸೋತ ಏಕೈಕ ಕ್ಯಾಪ್ಟನ್ ಎಂಬ ಅಪಕೀರ್ತಿಯೊಂದು ಇಶಾನ್ ಕಿಶನ್ ಪಾಲಾಗಿದೆ.

2 / 5

ಏಪ್ರಿಲ್ 18 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ನಾಯಕರಾಗಿ ತಮ್ಮ ಸತತ ಆರನೇ ಟಾಸ್ ಸೋಲುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಹೊಸದೊಂದು 'ದುರಾದೃಷ್ಟದ' ದಾಖಲೆ ಬರೆದಿದ್ದಾರೆ.

3 / 5

ಇದಕ್ಕೂ ಮುನ್ನ ಇಂತಹದೊಂದು ನತದೃಷ್ಟದ ದಾಖಲೆ ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಡೇವಿಡ್ ಮಿಲ್ಲರ್ ಹೆಸರಿನಲ್ಲಿತ್ತು. 2016 ರ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ತಂಡದ ನಾಯಕರಾಗಿದ್ದ ಡೇವಿಡ್ ಮಿಲ್ಲರ್, ತಮ್ಮ ನಾಯಕತ್ವದ ಮೊದಲ 5 ಪಂದ್ಯಗಳಲ್ಲಿ ಸತತವಾಗಿ ಟಾಸ್ ಸೋತಿದ್ದರು.

4 / 5

ಇದೀಗ ಸನ್​ರೈಸರ್ಸ್ ಹೈದರಾಬಾದ್ ಪರ ಹಂಗಾಮಿ ನಾಯಕನಾಗಿ ಕಣಕ್ಕಿಳಿಯುತ್ತಿರುವ ಇಶಾನ್ ಕಿಶನ್ ಸತತ 6 ಮ್ಯಾಚ್​ಗಳಲ್ಲೂ ಟಾಸ್ ಸೋತಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಮೊದಲ ಆರು ಮ್ಯಾಚ್​ಗಳಲ್ಲೂ ಟಾಸ್ ಸೋತ ಮೊದಲ ಕ್ಯಾಪ್ಟನ್ ಎಂಬ 'ದುರಾದೃಷ್ಟ'ದ ದಾಖಲೆ ಬರೆದಿದ್ದಾರೆ.

5 / 5

ಇನ್ನು ಇಶಾನ್ ಕಿಶನ್ 6 ಪಂದ್ಯಗಳಲ್ಲಿ ಟಾಸ್ ಸೋತರೂ ಸನ್​ರೈಸರ್ಸ್ ಹೈದರಾಬಾದ್ ತಂಡವು ಮೂರು ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಹೀಗಾಗಿ ನತದೃಷ್ಟದ ನಡುವೆ ಇಶಾನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಈ ಗೆಲುವುಗಳೊಂದಿಗೆ ಇದೀಗ ಸನ್​ರೈಸರ್ಸ್ ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Loading...
Unable to load recommendations.
Follow Us