Ishan Kishan: 7 ಸಿಕ್ಸರ್, 5 ಬೌಂಡರಿ; 64 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಇಶಾನ್ ಕಿಶನ್..!

Edited By:

Updated on: Oct 21, 2022 | 10:30 AM

Syed Mushtaq Ali T20 Trophy: ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 64 ಎಸೆತಗಳನ್ನು ಎದುರಿಸಿದ ಕಿಶನ್ 7 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಿತ 102 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು.

1 / 5
ಐಪಿಎಲ್​ನಿಂದಾಗಿ ಭಾರತದಲ್ಲಿ ಅನೇಕ ಯುವ ಪ್ರತಿಭೆಗಳು ಹುಟ್ಟಿಕೊಂಡಿದ್ದಾರೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಅಬ್ಬರಿಸುವುದರೊಂದಿಗೆ ಟೀಂ ಇಂಡಿಯಾದಲ್ಲಿ ಸ್ಥಾನವನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇಂತಹ ನೂರಾರು ಪ್ರತಿಭೆಗಳಿದ್ದು, ಅಂತಹವರಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ಒಬ್ಬರು. ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿರುವ ಕಿಶನ್​ಗೆ ಸಾಕಷ್ಟು ಪ್ರತಿಭೆಯಿದ್ದರೂ ತಂಡದಲ್ಲಿ ಮಾತ್ರ ಅವಕಾಶ ಸಿಗುತ್ತಿಲ್ಲ. ಆದರೂ ಸಹ ತನ್ನ ಪ್ರಯತ್ನ ಬಿಡದ ಕಿಶನ್ ದೇಶೀ ಟೂರ್ನಿಯಲ್ಲಿ ತನ್ನ ಅಬ್ಬರ ಮುಂದುವರೆಸಿದ್ದಾರೆ.

2 / 5

ಭಾರತದಲ್ಲಿ ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ನಡೆಯುತ್ತಿದ್ದು, ಇದರಲ್ಲಿ ದೇಶೀಯ ಕ್ರಿಕೆಟಿಗರನ್ನು ಹೊರತುಪಡಿಸಿ, ಟೀಂ ಇಂಡಿಯಾದ ಅನೇಕ ಆಟಗಾರರು ಸಹ ಆಡುತ್ತಿದ್ದಾರೆ. ಇವರಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಇಶಾನ್ ಕಿಶನ್ ಕೂಡ ಜಾರ್ಖಂಡ್ ಪರ ಆಡುತ್ತಿದ್ದಾರೆ.

3 / 5

ಅಕ್ಟೋಬರ್ 20, ಗುರುವಾರದಂದು ಒಡಿಶಾ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡಿದ ಕಿಶನ್ ಅಮೋಘ ಶತಕ ಬಾರಿಸಿದ್ದಾರೆ. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 64 ಎಸೆತಗಳನ್ನು ಎದುರಿಸಿದ ಕಿಶನ್ 7 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಿತ 102 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು.

4 / 5

ಇಶಾನ್ ಕಿಶನ್ ಅವರ ಇನ್ನಿಂಗ್ಸ್ ಆಧಾರದ ಮೇಲೆ ಜಾರ್ಖಂಡ್ 188 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ಒಡಿಶಾದ ಇಡೀ ತಂಡವು ಕೇವಲ 117 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಜಾರ್ಖಂಡ್ ತಂಡ ಪಂದ್ಯವನ್ನು 71 ರನ್‌ಗಳಿಂದ ಗೆದ್ದುಕೊಂಡಿತು.

5 / 5

ಕಿಶನ್, ದೇಶೀ ಟೂರ್ನಿಯಲ್ಲಿ ಮಾತ್ರವಲ್ಲದೆ, ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಆದರೆ 93 ರನ್​ಗಳಿಗೆ ತಮ್ಮ ವಿಕೆಟ್ ಒಪ್ಪಿಸಿ ಶತಕದಿಂದ ವಂಚಿತರಾಗಿದ್ದರು.

Published On - 10:29 am, Fri, 21 October 22

Loading...
Unable to load recommendations.
Follow Us