IND vs PAK: ಪಾಕಿಸ್ತಾನ್ ತಂಡ ಭಾರತದ ವಿರುದ್ಧ ಆಡಬಾರದು: ಜಾವೇದ್ ಮಿಯಾಂದಾದ್

Edited By:

Updated on: Jun 19, 2023 | 10:08 PM

India vs Pakistan: ಈ ಬಾರಿಯ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗುವುದು ಖಚಿತ.

1 / 7
ಏಷ್ಯಾಕಪ್ (Asia Cup 2023) ಆಯೋಜನಾ ಸಮಸ್ಯೆ ಬಗೆಹರಿದಿದೆ. ಈ ಬಾರಿಯ ಏಷ್ಯಾಕಪ್​ ಅನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (PCB) ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಿದೆ. ಅದರಂತೆ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಟೂರ್ನಿ ನಡೆಯಲಿದೆ. ಇಲ್ಲಿ ಭಾರತ ತಂಡವು (Team India) ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.

ಏಷ್ಯಾಕಪ್ (Asia Cup 2023) ಆಯೋಜನಾ ಸಮಸ್ಯೆ ಬಗೆಹರಿದಿದೆ. ಈ ಬಾರಿಯ ಏಷ್ಯಾಕಪ್​ ಅನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (PCB) ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಿದೆ. ಅದರಂತೆ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಟೂರ್ನಿ ನಡೆಯಲಿದೆ. ಇಲ್ಲಿ ಭಾರತ ತಂಡವು (Team India) ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.

2 / 7

ಇತ್ತ ಭಾರತಕ್ಕಾಗಿ ಹೈಬ್ರಿಡ್ ಮಾದರಿಯನ್ನು ಮುಂದಿಟ್ಟು ಟೂರ್ನಿ ಆಯೋಜಿಸಲು ಮುಂದಾಗಿರುವ ಪಿಸಿಬಿ ನಡೆಯನ್ನು ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಕಟುವಾಗಿ ಟೀಕಿಸಿದ್ದಾರೆ.

3 / 7

ಈ ಬಗ್ಗೆ ಮಾತನಾಡಿರುವ ಮಿಯಾಂದಾದ್ಮ, ಬಿಸಿಸಿಐ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಒಪ್ಪುವವರೆಗೂ ಪಾಕ್ ತಂಡ ಭಾರತಕ್ಕೆ ಪ್ರವಾಸ ಮಾಡಬಾರದು. ಅಲ್ಲದೆ ಇದರಿಂದ ಪಾಕಿಸ್ತಾನಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದಿದ್ದಾರೆ.

4 / 7

ನಾನು ಇಂತಹ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ಇದ್ದಿದ್ದರೆ, ಖಂಡಿತವಾಗಿಯೂ ಪಾಕಿಸ್ತಾನ್ ತಂಡವನ್ನು ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ಕಳುಹಿಸುತ್ತಿರಲಿಲ್ಲ. ನಾವು ಅವರೊಂದಿಗೆ ಆಡಲು ಯಾವಾಗಲೂ ಸಿದ್ಧರಿರುತ್ತೇವೆ. ಇದೇ ಕಾರಣದಿಂದಾಗಿ ಅವರು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಮಿಯಾಂದಾದ್ ಆಕ್ರೋಶ ಹೊರಹಾಕಿದ್ದಾರೆ.

5 / 7

ಪಾಕಿಸ್ತಾನ್ ಕ್ರಿಕೆಟ್ ಬಹಳ ದೊಡ್ಡದಿದೆ. ನಾವು ಅತ್ಯುತ್ತಮ ಆಟಗಾರರನ್ನು ವಿಶ್ವ ಕ್ರಿಕೆಟ್​ಗೆ ನೀಡುತ್ತಿದ್ದೇವೆ. ಹೀಗಾಗಿ ಏಕದಿನ ವಿಶ್ವಕಪ್​ಗಾಗಿ ಭಾರತಕ್ಕೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದು ಜಾವೇದ್ ಮಿಯಾಂದಾದ್ ಅಭಿಪ್ರಾಯಪಟ್ಟಿದ್ದಾರೆ.

6 / 7

ಇದಾಗ್ಯೂ ಈ ಬಾರಿಯ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗುವುದು ಖಚಿತ. ಏಷ್ಯಾಕಪ್​ನ ಲೀಗ್​ನಲ್ಲಿ ಮೊದಲ ಮುಖಾಮುಖಿಯಾದರೆ, ಆ ಬಳಿಕ ಸೂಪರ್​-4 ನಲ್ಲಿ 2ನೇ ಬಾರಿ ಮುಖಾಮುಖಿಯಾಗಬಹುದು. ಇನ್ನು ಉಭಯ ತಂಡಗಳು ಫೈನಲ್​ ಪ್ರವೇಶಿಸಿದರೆ ಮೂರನೇ ಬಾರಿ ಸೆಣಸಲಿದೆ.

7 / 7

ಹಾಗೆಯೇ ಐಸಿಸಿ ಸಿದ್ಧಪಡಿಸಿರುವ ODI ವಿಶ್ವಕಪ್‌ನ ಕರಡು ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಆದರೆ ಈ ಮಹತ್ವದ ಟೂರ್ನಿಯಲ್ಲೂ ಭಾಗವಹಿಸಬಾರದೆಂಬ ಹೇಳಿಕೆ ನೀಡಿ ಇದೀಗ ಜಾವೇದ್ ಮಿಯಾಂದಾದ್ ಹೊಸ ವಿವಾದ ಹುಟ್ಟುಹಾಕಲು ಯತ್ನಿಸಿದ್ದಾರೆ.

Loading...
Unable to load recommendations.
Follow Us