Jonny Bairstow: ಶೂನ್ಯ ಶೂರ… ಸೊನ್ನೆ ಸುತ್ತಿ ಅನಗತ್ಯ ದಾಖಲೆ ಬರೆದ ಜಾನಿ ಬೈರ್ಸ್ಟೋವ್
TV9 Web | Updated By: ಝಾಹಿರ್ ಯೂಸುಫ್
Updated on:
Feb 17, 2024 | 3:09 PM
India vs England 3rd Test: ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವುದರೊಂದಿಗೆ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜಾನಿ ಬೈರ್ಸ್ಟೋವ್ ಅನಗತ್ಯ ದಾಖಲೆಯೊಂದನ್ನು ಬರೆದಿದ್ದಾರೆ. ಅದು ಕೂಡ ಪಾಕಿಸ್ತಾನ್ ಕ್ರಿಕೆಟಿಗ ದಾನಿಶ್ ಕನೇರಿಯಾ ಹೆಸರಿನಲ್ಲಿದ್ದ ಕಳಪೆ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
1 / 6
ರಾಜ್ಕೋಟ್ನ ನಿರಂಜನ್ ಶಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಜಾನಿ ಬೈರ್ಸ್ಟೋವ್ ಶೂನ್ಯಕ್ಕೆ ಔಟಾಗಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬೈರ್ಸ್ಟೋವ್ (0) ಕುಲ್ದೀಪ್ ಯಾದವ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ನಿರ್ಗಮಿಸಿದ್ದರು.
2 / 6
ಇದರೊಂದಿಗೆ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರ ಎಂಬ ಅನಗತ್ಯ ದಾಖಲೆಯೊಂದು ಜಾನಿ ಬೈರ್ಸ್ಟೋವ್ ಹೆಸರಿಗೆ ಸೇರ್ಪಡೆಯಾಯಿತು. ಇದಕ್ಕೂ ಮುನ್ನ ಈ ಕಳಪೆ ದಾಖಲೆ ಪಾಕ್ ಆಟಗಾರನ ಹೆಸರಿನಲ್ಲಿತ್ತು.
3 / 6
ಭಾರತದ ವಿರುದ್ಧ 15 ಟೆಸ್ಟ್ ಇನಿಂಗ್ಸ್ ಆಡಿರುವ ಪಾಕಿಸ್ತಾನ್ ಆಟಗಾರ ದಾನಿಶ್ ಕನೇರಿಯಾ 7 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಸೊನ್ನೆ ಸುತ್ತಿದ ಬ್ಯಾಟರ್ ಎನಿಸಿಕೊಂಡಿದ್ದರು.
4 / 6
ಇದೀಗ ಈ ಕಳಪೆ ದಾಖಲೆಯನ್ನು ಜಾನಿ ಬೈರ್ಸ್ಟೋವ್ ಮುರಿದಿದ್ದಾರೆ. ಭಾರತದ ವಿರುದ್ಧ ಇದುವರೆಗೆ 37 ಟೆಸ್ಟ್ ಇನಿಂಗ್ಸ್ ಆಡಿರುವ ಬೈರ್ಸ್ಟೋವ್ ಒಟ್ಟು 8 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧದ ಶೂನ್ಯ ಶೂರ ಎನಿಸಿಕೊಂಡಿದ್ದಾರೆ.
5 / 6
ಇನ್ನು ಈ ಬಾರಿಯ ಸರಣಿಯಲ್ಲಿ ಜಾನಿ ಬೈರ್ಸ್ಟೋವ್ ಅವರ ಕಳಪೆ ಬ್ಯಾಟಿಂಗ್ ಮುಂದುವರೆದಿದೆ. ಇದುವರೆಗೆ ಐದು ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಜಾನಿಬಿ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಅಲ್ಲದೆ 5 ಇನಿಂಗ್ಸ್ಗಳಿಂದ ಕಲೆಹಾಕಿರುವುದು ಕೇವಲ 98 ರನ್ಗಳು ಮಾತ್ರ. ಹೀಗಾಗಿ ಮುಂದಿನ ಪಂದ್ಯದಿಂದ ಬೈರ್ಸ್ಟೋವ್ ಅವರನ್ನು ಕೈ ಬಿಡುವ ಸಾಧ್ಯತೆಯಿದೆ.
6 / 6
IND vs ENG 3rd Test: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ (131) ಹಾಗೂ ರವೀಂದ್ರ ಜಡೇಜಾ (112) ಭರ್ಜರಿ ಶತಕ ಬಾರಿಸಿದ್ದರು. ಈ ಶತಕದ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 445 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ನಲ್ಲಿ ಆಡಿರುವ ಇಂಗ್ಲೆಂಡ್ ತಂಡವು ಬೆನ್ ಡಕೆಟ್ (153) ಅವರ ಶತಕದ ನೆರವಿನಿಂದ 319 ರನ್ಗಳಿಸಿ ಆಲೌಟ್ ಆಗಿದೆ. ಇದೀಗ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆಡುತ್ತಿದೆ.
Published On - 3:08 pm, Sat, 17 February 24