ಪಾಕಿಸ್ತಾನದಲ್ಲಿ ಒಂದೇ ತಂಡದ ಪರ ಕಣಕ್ಕಿಳಿಯಲಿದ್ದಾರೆ ವಿಲಿಯಮ್ಸನ್, ವಾರ್ನರ್

|

Updated on: Jan 14, 2025 | 7:53 AM

Kane Williamson and David Warner: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರಲ್ಲಿ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿದರೆ, ಕೇನ್ ವಿಲಿಯಮ್ಸನ್ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದರು. ಆದರೆ ಈ ಬಾರಿಯ ಮೆಗಾ ಹರಾಜಿನಲ್ಲಿ ಇಬ್ಬರು ಆಟಗಾರರು ಹರಾಜಾಗದೇ ಉಳಿದಿದ್ದರು. ಇದೀಗ ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ ಐಪಿಎಲ್​ಗೆ ಆಯ್ಕೆಯಾಗಿದ್ದಾರೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2025) ಅವಕಾಶವಂಚಿತರಾಗಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹಾಗೂ ನ್ಯೂಝಿಲೆಂಡ್​ನ ಕೇನ್ ವಿಲಿಯಮ್ಸನ್ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಅದು ಸಹ ಒಂದೇ ತಂಡದ ಪರ ಎಂಬುದು ವಿಶೇಷ.

2 / 5
ಪಿಎಸ್​ಎಲ್ 2025ರ ಡ್ರಾಫ್ಟ್ ಪ್ರಕ್ರಿಯೆ ಮುಗಿದಿದ್ದು, ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ ಅವರನ್ನು ಕರಾಚಿ ಕಿಂಗ್ಸ್ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ. ಇಲ್ಲಿ ವಾರ್ನರ್ ಪ್ಲಾಟಿನಂ ವಿಭಾಗದಲ್ಲಿ ಕಾಣಿಸಿಕೊಂಡರೆ, ವಿಲಿಯಮ್ಸನ್ ಅವರನ್ನು ಪೂರಕ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ.

3 / 5
ವಿಶೇಷ ಎಂದರೆ ಈ ಹಿಂದೆ ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ ಐಪಿಎಲ್​ನಲ್ಲಿ ಜೊತೆಯಾಗಿ ಆಡಿದ್ದರು. 2015 ರಿಂದ 2020 ರವರೆಗೆ ಸನ್​ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದ ಈ ಜೋಡಿಯನ್ನು ಇದೀಗ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಕರಾಚಿ ಕಿಂಗ್ಸ್ ಫ್ರಾಂಚೈಸಿ ಖರೀದಿಸಿದೆ.

4 / 5
ಅದರಂತೆ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹಾಗೂ ನ್ಯೂಝಿಲೆಂಡ್​ನ ಕೇನ್ ವಿಲಿಯಮ್ಸನ್ ಅವರು ಜೊತೆಯಾಗಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

5 / 5
ಕರಾಚಿ ಕಿಂಗ್ಸ್ ತಂಡ:  ಡೇವಿಡ್ ವಾರ್ನರ್, ಆ್ಯಡಂ ಮಿಲ್ನ್ ಮತ್ತು ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಹಸನ್ ಅಲಿ, ಜೇಮ್ಸ್ ವಿನ್ಸ್, ಖುಶ್ದಿಲ್ ಶಾ, ಅಮೀರ್ ಜಮಾಲ್, ಮುಹಮ್ಮದ್ ಇರ್ಫಾನ್ ಖಾನ್, ಶಾನ್ ಮಸೂದ್, ಅರಾಫತ್ ಮಿನ್ಹಾಸ್, ಲಿಟ್ಟನ್ ದಾಸ್, ಮೀರ್ ಹಮ್ಝ, ಟಿಮ್ ಸೀಫರ್ಟ್, ಝಾಹಿದ್ ಮೆಹಮೂದ್, ಫವಾದ್ ಅಲಿ, ರಿಯಾಜುಲ್ಲಾ. ಪೂರಕ ಆಟಗಾರರು: ಕೇನ್ ವಿಲಿಯಮ್ಸನ್, ಮೊಹಮ್ಮದ್ ನಬಿ, ಒಮೈರ್ ಬಿನ್ ಯೂಸುಫ್, ಮಿರ್ಝ ಮಾಮೂನ್.