Karun Nair: ಕರುಣ್ ನಾಯರ್ ಮೇಲೆ ಕರುಣೆ ತೋರದ ಬಿಸಿಸಿಐ

Updated on: Jan 18, 2025 | 3:12 PM

Karun Nair: ಈ ಬಾರಿಯ ವಿಜಯ ಹಝಾರೆ ಟೂರ್ನಿಯಲ್ಲಿ ಅತ್ಯಧಿಕ ರನ್ ಪೇರಿಸಿದ ಬ್ಯಾಟರ್​​ಗಳ ಪಟ್ಟಿಯಲ್ಲಿ ಕರುಣ್ ನಾಯರ್ ಅಗ್ರಸ್ಥಾನದಲ್ಲಿದ್ದಾರೆ. 7 ಪಂದ್ಯಗಳ ಮುಕ್ತಾಯದ ವೇಳೆಗೆ 6 ಇನಿಂಗ್ಸ್ ಆಡಿರುವ ಕರುಣ್ ನಾಯರ್ 5 ಭರ್ಜರಿ ಶತಕ ಹಾಗೂ 1 ಅರ್ಧಶತಕ ಸಿಡಿಸುವ ಮೂಲಕ ಒಟ್ಟು 752 ರನ್ ಕಲೆಹಾಕಿದ್ದಾರೆ.

1 / 6
7 ಇನಿಂಗ್ಸ್​... 5 ಶತಕ, 1 ಅರ್ಧಶತಕ... 752	 ರನ್​​ಗಳು. ಇದು ಈ ಬಾರಿಯ ವಿಜಯ ಹಝಾರೆ ಏಕದಿನ ಟೂರ್ನಿಯಲ್ಲಿ ಕರುಣ್ ನಾಯರ್ ಕಲೆಹಾಕಿದ ಸ್ಕೋರ್. ಇದಾಗ್ಯೂ ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಕರುಣ್ ನಾಯರ್​ಗೆ ಅವಕಾಶ ಸಿಕ್ಕಿಲ್ಲ.

7 ಇನಿಂಗ್ಸ್​... 5 ಶತಕ, 1 ಅರ್ಧಶತಕ... 752 ರನ್​​ಗಳು. ಇದು ಈ ಬಾರಿಯ ವಿಜಯ ಹಝಾರೆ ಏಕದಿನ ಟೂರ್ನಿಯಲ್ಲಿ ಕರುಣ್ ನಾಯರ್ ಕಲೆಹಾಕಿದ ಸ್ಕೋರ್. ಇದಾಗ್ಯೂ ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಕರುಣ್ ನಾಯರ್​ಗೆ ಅವಕಾಶ ಸಿಕ್ಕಿಲ್ಲ.

2 / 6

ಇದರೊಂದಿಗೆ 8 ವರ್ಷಗಳ ಬಳಿಕ ಕಂಬ್ಯಾಕ್ ಮಾಡುವ ಕರುಣ್ ನಾಯರ್ ಅವರ ಕನಸು ಕೂಡ ಕಮರಿದೆ. 2016 ರಲ್ಲಿ ಕರುಣ್ ನಾಯರ್ ಕೊನೆಯ ಬಾರಿ ಭಾರತ ಏಕದಿನ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂಬುದೇ ಅಚ್ಚರಿ.

3 / 6

ಇದಕ್ಕೂ ಮುನ್ನ ಕರುಣ್ ನಾಯರ್ ಟೀಮ್ ಇಂಡಿಯಾ ಪರ 6 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ ವೇಳೆ 7 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದ ಅವರು ತ್ರಿಶತಕ ಸಿಡಿಸುವ ಮೂಲಕ ಮಿಂಚಿದ್ದರು. ಆದರೆ ಈ ತ್ರಿಪಲ್ ಸೆಂಚುರಿ ಬಳಿಕ ವಿಫಲರಾದ ಕಾರಣ ಅವರನ್ನು ಆ ಬಳಿಕ ಭಾರತ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ.

4 / 6

ಇನ್ನು 2 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಕರುಣ್ ನಾಯರ್ 46 ರನ್ ಬಾರಿಸಿದ್ದರು. ಅಲ್ಲದೆ 2017 ರಲ್ಲಿ ಕೊನೆಯ ಬಾರಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಕರುಣ್​ಗೆ ಅ ಬಳಿಕ ಒಮ್ಮೆಯೂ ಟೀಮ್ ಇಂಡಿಯಾದ ಬಾಗಿ ತೆರೆದಿರಲಿಲ್ಲ.

5 / 6

ಆದರೆ ಕಳೆದೊಂದು ವರ್ಷದಿಂದ ಕೌಂಟಿ ಕ್ರಿಕೆಟ್ ಹಾಗೂ ದೇಶೀಯ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಕರುಣ್ ನಾಯರ್ ಕಂಬ್ಯಾಕ್ ಸೂಚನೆ ನೀಡಿದ್ದರು. ಅದರಲ್ಲೂ ಈ ಬಾರಿಯ ವಿಜಯ ಹಝಾರೆ ಟೂರ್ನಿಯಲ್ಲಿ ಸತತ ಶತಕಗಳ ಮೂಲಕ ಅಬ್ಬರಿಸಿ ಟೀಮ್ ಇಂಡಿಯಾಗೆ ಪುನರಾಗಮನದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಬಾರಿ ಕೂಡ ಕರುಣ್ ನಾಯರ್ ಮೇಲೆ ಬಿಸಿಸಿಐ ಆಯ್ಕೆ ಸಮಿತಿ ಕರುಣೆ ತೋರಿಲ್ಲ ಎಂಬುದೇ ಸತ್ಯ.

6 / 6

2025ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್​ ಪಂತ್, ರವೀಂದ್ರ ಜಡೇಜಾ.

Published On - 3:03 pm, Sat, 18 January 25

Loading...
Unable to load recommendations.
Follow Us