ಟಿ20 ಇತಿಹಾಸದಲ್ಲೇ ಯಾರೂ ನಿರ್ಮಿಸದ ವಿಶ್ವ ದಾಖಲೆ ಬರೆದ ಕೀರನ್ ಪೊಲಾರ್ಡ್

Updated on: Sep 23, 2025 | 7:53 AM

Kieron Pollard Records: 38 ವರ್ಷದ ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್​ನಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಾ ಸಾಗುತ್ತಿದ್ದಾರೆ. ಈ ದಾಖಲೆಗಳ ಪಟ್ಟಿಗೆ ಇದೀಗ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಅದು ಕೂಡ ಇದುವರೆಗೆ ಯಾವುದೇ ಆಟಗಾರ ನಿರ್ಮಿಸದ ದಾಖಲೆ ಬರೆಯುವ ಮೂಲಕ ಎಂಬುದು ವಿಶೇಷ.

1 / 5
ಟಿ20 ಕ್ರಿಕೆಟ್‌ನಲ್ಲಿ ಕೀರನ್ ಪೊಲಾರ್ಡ್ (Kieron Pollard) ಅವರ ವಿಶ್ವ ದಾಖಲೆಗಳ ಸರಣಿ ಮುಂದುವರೆದಿದೆ. ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಮೂಲಕ 700 ಪಂದ್ಯಗಳ ಹಾಗೂ 14 ಸಾವಿರ ರನ್​ಗಳ ವರ್ಲ್ಡ್ ರೆಕಾರ್ಡ್ ಬರೆದ ಪೊಲಾರ್ಡ್ ಇದೀಗ ಮತ್ತೊಂದು ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

2 / 5
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಗಯಾನಾ ಅಮೆಝಾನ್ ವಾರಿಯರ್ಸ್ ವಿರುದ್ಧದ ಸಿಪಿಎಲ್ ಫೈನಲ್ ಪಂದ್ಯದಲ್ಲಿ ಟ್ರಿನ್​ಬಾಗೊ ನೈಟ್ ರೈಡರ್ಸ್ ಪರ ಕಣಕ್ಕಿಳಿದ ಕೀರನ್ ಪೊಲಾರ್ಡ್ ಒಟ್ಟು 4 ಕ್ಯಾಚ್ ಹಿಡಿದಿದ್ದರು. ಈ ಕ್ಯಾಚ್ ಗಳೊಂದಿಗೆ ಪೊಲಾರ್ಡ್ ಟಿ20 ಕ್ರಿಕೆಟ್ ನಲ್ಲಿ 400 ಕ್ಯಾಚ್ ಗಳ ಮೈಲುಗಲ್ಲು ಮುಟ್ಟಿದ್ದಾರೆ.

3 / 5
ವೆಸ್ಟ್ ಇಂಡೀಸ್ ಹಾಗೂ ವಿಶ್ವದ ಹಲವು ಲೀಗ್ ತಂಡಗಳ ಪರ 720 ಪಂದ್ಯಗಳನ್ನಾಡಿರುವ ಕೀರನ್ ಪೊಲಾರ್ಡ್ ಈವರೆಗೆ 401 ಕ್ಯಾಚ್ ಗಳನ್ನು ಹಿಡಿದಿದಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 400+ ಕ್ಯಾಚ್ ಹಿಡಿದ ವಿಶ್ವದ ಏಕೈಕ ಫೀಲ್ಡರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

4 / 5
ವಿಶೇಷ ಎಂದರೆ ಕೀರನ್ ಪೊಲಾರ್ಡ್ ಅವರನ್ನು ಹೊರತುಪಡಿಸಿ ವಿಶ್ವದ ಯಾವುದೇ ಆಟಗಾರ ಟಿ20 ಕ್ರಿಕೆಟ್‌ನಲ್ಲಿ 350 ಕ್ಕಿಂತ ಹೆಚ್ಚು ಕ್ಯಾಚ್ ಹಿಡಿದಿಲ್ಲ. 320 ಕ್ಯಾಚ್ ಗಳನ್ನು ಹಿಡಿದಿರುವ ಸೌತ್ ಆಫ್ರಿಕಾದ ಡೇವಿಡ್ ಮಿಲ್ಲರ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

5 / 5
ಇದೀಗ 400+ ಕ್ಯಾಚ್ ಗಳೊಂದಿಗೆ ಹೊಸ ಮೈಲುಗಲ್ಲು ದಾಟಿರುವ ಕೀರನ್ ಪೊಲಾರ್ಡ್ ಮುಂಬರುವ ಟಿ20 ಪಂದ್ಯಗಳ ಮೂಲಕ 326 ರನ್​ಗಳಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಪೇರಿಸಿರುವ ಕ್ರಿಸ್ ಗೇಲ್ (14562) ಅವರ ವಿಶ್ವ ದಾಖಲೆ ಮುರಿಯಲು ಕೀರನ್​ ಪೊಲಾರ್ಡ್​ಗೆ (14237) ಬೇಕಿರುವುದು ಕೇವಲ 326 ರನ್​ಗಳು ಮಾತ್ರ. ಹೀಗಾಗಿ ಟಿ20 ರನ್ ಸರದಾರರ ಪಟ್ಟಿಯಲ್ಲೂ ಪೊಲಾರ್ಡ್ ಅಗ್ರಸ್ಥಾನಕ್ಕೇರುವುದನ್ನು ನಿರೀಕ್ಷಿಸಬಹುದು.