KL Rahul: ವಿಶೇಷ ಮೈಲುಗಲ್ಲು ದಾಟಿದ ಕೆಎಲ್ ರಾಹುಲ್

|

Updated on: Sep 22, 2024 | 7:12 AM

India vs Bangladesh 1st Test: ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 376 ರನ್ ಕಲೆಹಾಕಿದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ 287 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ. ಈ ಮೂಲಕ ಬಾಂಗ್ಲಾದೇಶ್ ತಂಡಕ್ಕೆ ದ್ವಿತೀಯ ಇನಿಂಗ್ಸ್​ನಲ್ಲಿ 515 ರನ್​ಗಳ ಗುರಿ ನೀಡಿದೆ.

1 / 5
ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 38 ರನ್​ ಕಲೆಹಾಕುವ ಮೂಲಕ ಕೆಎಲ್ ರಾಹುಲ್ ವಿಶೇಷ ಮೈಲುಗಲ್ಲು ದಾಟಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 16 ರನ್​ ಬಾರಿಸಿದ್ದ ರಾಹುಲ್, ದ್ವಿತೀಯ ಇನಿಂಗ್ಸ್​ನಲ್ಲಿ ಅಜೇಯ 22 ರನ್ ಕಲೆಹಾಕಿದರು.

2 / 5
ಈ 22 ರನ್​ಗಳೊಂದಿಗೆ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 8000 ರನ್ ಪೂರೈಸಿದ್ದಾರೆ. ಈ ಮೂಲಕ ಇಂಟರ್​ನ್ಯಾಷನಲ್ ಕ್ರಿಕೆಟ್​ನಲ್ಲಿ 8 ಸಾವಿರ ರನ್ ಕಲೆಹಾಕಿದ ಭಾರತದ 17ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

3 / 5
ಟೀಮ್ ಇಂಡಿಯಾ ಪರ 50 ಟೆಸ್ಟ್ ಪಂದ್ಯಗಳಲ್ಲಿ 86 ಇನಿಂಗ್ಸ್ ಆಡಿರುವ ಕೆಎಲ್ ರಾಹುಲ್ 8 ಶತಕ ಹಾಗೂ 16 ಅರ್ಧಶತಕಗಳೊಂದಿಗೆ ಒಟ್ಟು 2863 ರನ್ ಕಲೆಹಾಕಿದ್ದಾರೆ. ಹಾಗೆಯೇ 72 ಏಕದಿನ ಇನಿಂಗ್ಸ್​ಗಳಿಂದ 7 ಶತಕ ಹಾಗೂ 18 ಅರ್ಧಶತಕಗಳೊಂದಿಗೆ 2851 ರನ್ ಬಾರಿಸಿದ್ದಾರೆ.

4 / 5
ಇನ್ನು ಟೀಮ್ ಇಂಡಿಯಾ 72 ಟಿ20 ಪಂದ್ಯಗಳಲ್ಲಿ 68 ಇನಿಂಗ್ಸ್ ಆಡಿರುವ ಕೆಎಲ್ ರಾಹುಲ್ 2 ಶತಕ ಹಾಗೂ 22 ಅರ್ಧಶತಕಗಳೊಂದಿಗೆ ಒಟ್ಟು 2265 ರನ್ ಕಲೆಹಾಕಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 8 ಸಾವಿರ ರನ್ ಕಲೆಹಾಕಿದ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

5 / 5
ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 376 ರನ್ ಕಲೆಹಾಕಿದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ 287 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ. ಅತ್ತ ಮೊದಲ ಇನಿಂಗ್ಸ್​ನಲ್ಲಿ ಕೇವಲ 149 ರನ್​ಗಳಿಗೆ ಆಲೌಟ್ ಆಗಿದ್ದ ಬಾಂಗ್ಲಾದೇಶ್ ತಂಡವು ಇದೀಗ ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 515 ರನ್​ಗಳ ಕಠಿಣ ಗುರಿ ಪಡೆದುಕೊಂಡಿದೆ.