IND vs AUS 2nd ODI: ಎರಡನೇ ಏಕದಿನ ಬಳಿಕ ಪೋಸ್ಟ್ ಮ್ಯಾಚ್ನಲ್ಲಿ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ
KL Rahul in Post Match Presentation, IND vs AUS 2nd ODI: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 99 ರನ್ಗಳ ಜಯ ಸಾಧಿಸಿ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಈ ಬೊಂಬಾಟ್ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಏನು ಹೇಳಿದ್ದಾರೆ ನೋಡಿ.
1 / 8
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ತಂಡ ವಶಪಡಿಸಿಕೊಂಡಿದೆ. ಭಾನುವಾರ ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಬೊಂಬಾಟ್ ಪ್ರದರ್ಶನ ತೋರಿದ ಭಾರತ 99 ರನ್ಗಳ ಅಮೋಘ ಗೆಲುವು ಕಂಡಿತು. ಈ ಜಯದ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.
2 / 8
ಈ ಪಂದ್ಯದಲ್ಲಿ ಭಾರತ ಪರ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಶತಕ ಸಿಡಿಸಿದರೆ, ರಾಹುಲ್ ಹಾಗೂ ಸೂರ್ಯಕುಮಾರ್ ಅರ್ಧಶತಕ ಚಚ್ಚಿದರು. ಈ ಬೊಂಬಾಟ್ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಭಾರತದ ನಾಯಕ ಕೆಎಲ್ ರಾಹುಲ್ ಏನು ಹೇಳಿದ್ದಾರೆ ನೋಡಿ.
3 / 8
ಬೆಳಿಗ್ಗೆ ವಿಕೆಟ್ ನೋಡಿದಾಗ ಈ ಪಿಚ್ ಇಷ್ಟೊಂದು ಸ್ಪಿನ್ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. 400 ರನ್ಗಳನ್ನು ಕಲೆಹಾಕಿದರೆ ನಿಮಗೆ ಆತ್ಮವಿಶ್ವಾಸ ಬರುತ್ತದೆ. 400 ರನ್ಗಳ ಗಡಿ ತಲುಪುವುದು ನಮ್ಮ ನಿರ್ಧಾರವಾಗಿರಲಿಲ್ಲ. ನಮಗೆ ನಮ್ಮ ಕೆಲಸಗಳ ಬಗ್ಗೆ ಸ್ಪಷ್ಟತೆ ಇದೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
4 / 8
ಪ್ಲೇಯಿಂಗ್ XI ನಲ್ಲಿ ಆಯ್ಕೆಯಾದ ಪ್ರತಿಯೊಬ್ಬರೂ ತಮ್ಮ ಕೆಲಸದ ಮೇಲೆ ಗಮನ ಹರಿಸಬೇಕು. ಪ್ರತಿಯೊಬ್ಬರೂ ಅದೇರೀತಿ ನಡೆದುಕೊಂಡಿದ್ದಾರೆ. ನೀವು ಹೆಚ್ಚು ಕಲಿಯುತ್ತಲೇ ಇರಬೇಕು. ಮತ್ತು ಅವಕಾಶಗಳಿಗಾಗಿ ಕಾಯಬೇಕು ಎಂಬುದು ಕೆಎಲ್ ರಾಹುಲ್ ಮಾತಾಗಿತ್ತು.
5 / 8
ಕಳಪೆ ಫೀಲ್ಡಿಂಗ್ ಬಗ್ಗೆ ಮಾತನಾಡಿದ ರಾಹುಲ್, ನಾವು ಕೆಲವು ಕ್ಯಾಚ್‌ಗಳನ್ನು ಕೈಬಿಟ್ಟಿದ್ದೇವೆ, ಆದರೆ ಬೆಳಕಿನ ಅಡಿಯಲ್ಲಿ ಫೀಲ್ಡಿಂಗ್ ಮಾಡುವುದು ದೈಹಿಕವಾಗಿ ಸವಾಲಿನ ಕೆಲಸವಾಗಿದೆ. ನಮ್ಮ ಆಟಗಾರರನ್ನು ಫಿಟ್ ಆಗಿಡಲು ತರಬೇತುದಾರರು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಕೆಲವೊಮ್ಮೆ ಈ ದೋಷಗಳು ಸಂಭವಿಸುತ್ತವೆ - ಕೆಎಲ್ ರಾಹುಲ್.
6 / 8
ಲೋಪ ಯಾವಾಗಲೂ ಇರುತ್ತದೆ, ನಾವು ಅದರಿಂದ ಕಲಿಯುತ್ತೇವೆ, ಆ ತಪ್ಪುಗಳನ್ನು ಸರಿ ಪಡಿಸಿ ಮತ್ತು ಮುಂದಿನ ಪಂದ್ಯದಲ್ಲಿ ಉತ್ತಮಗೊಳ್ಳುತ್ತೇವೆ. ವಿಶ್ವಕಪ್‌ಗೆ ಕೇವಲ ಒಂದೆರಡು ವಾರಗಳು ಬಾಕಿಯಿರುವುದರಿಂದ, ನಮ್ಮ ಆಟಗಾರರು ಅದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ಆ ಸವಾಲುಗಳಿಗೆ ಒಗ್ಗಿಕೊಳ್ಳಬೇಕು ಎಂದು ರಾಹುಲ್ ಹೇಳಿದ್ದಾರೆ.
7 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 399 ರನ್ ಗಳಿಸಿತು. ಶುಭ್ಮನ್ ಗಿಲ್ 97 ಎಸೆತಗಲ್ಲಿ 104 ರನ್, ಶ್ರೇಯಸ್ ಅಯ್ಯರ್ 90 ಎಸೆತಗಳಲ್ಲಿ 105, ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ ಅಜೇಯ 72, ರಾಹುಲ್ 52 ರನ್ ಸಿಡಿಸಿದರು.
8 / 8
ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ನಡುವಿನಲ್ಲಿ ಮಳೆ ಅಡ್ಡಿ ಪಡಿಸಿತು. ಬಳಿಕ ಡಕ್ವರ್ತ್ ಲೂಯಿಸ್ ನಿಯಮವನ್ನು ಅಳವಡಿಸಲಾಯಿತು. ಆದರೆ, ಭಾರತೀಯ ಬೌಲಿಂಗ್ ದಾಳಿಗೆ ನಲುಗಿದ ಆಸೀಸ್ 217 ರನ್ಗಳಿಗೆ ಆಲೌಟ್ ಆಯಿತು. ವಾರ್ನರ್ 53 ಹಾಗೂ ಅಬಾಟ್ 54 ರನ್ ಗಳಿಸಿದರು. ಭಾರತ ಪರ ರವೀಂದ್ರ ಜಡೇಜಾ ಹಾಗೂ ಅಶ್ವಿನ್ ತಲಾ 3 ವಿಕೆಟ್ ಕಿತ್ತರು.