ಹಾರ್ದಿಕ್ ಪಾಂಡ್ಯಗೂ ಮುನ್ನ ವಿಚ್ಛೇದನ ಪಡೆದಿರುವ ಟೀಂ ಇಂಡಿಯಾದ 6 ಕ್ರಿಕೆಟಿಗರಿವರು
ಹಾರ್ದಿಕ್ ಪಾಂಡ್ಯ ಮತ್ತು ಅವರ ಮಡದಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಪಡೆಯುವ ಮೂಲಕ ತಮ್ಮ 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಎಂಬುದು ಭಾರತದಲ್ಲೂ ಸರ್ವೆ ಸಾಮಾನ್ಯವಾಗಿದೆ. ಹೀಗಾಗಿ ಭಾರತ ಕ್ರಿಕೆಟ್ನಲ್ಲಿ ವಿಚ್ಛೇದನ ಪಡೆದ ಮೊದಲ ಕ್ರಿಕೆಟಿಗ ಹಾರ್ದಿಕ್ ಅಲ್ಲ. ಅವರಿಗೂ ಮೊದಲು 6 ಸ್ಟಾರ್ ಕ್ರಿಕೆಟಿಗರು ದಾಂಪತ್ಯ ಜೀವನದಲ್ಲಿ ವಿಚ್ಛೇದನದ ಆಘಾತ ಎದುರಿಸಿದ್ದಾರೆ.
1 / 7
ಟೀಂ ಇಂಡಿಯಾದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಅವರ ಮಡದಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಪಡೆಯುವ ಮೂಲಕ ತಮ್ಮ 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಎಂಬುದು ಭಾರತದಲ್ಲೂ ಸರ್ವೆ ಸಾಮಾನ್ಯವಾಗಿದೆ. ಹೀಗಾಗಿ ಭಾರತ ಕ್ರಿಕೆಟ್ನಲ್ಲಿ ವಿಚ್ಛೇದನ ಪಡೆದ ಮೊದಲ ಕ್ರಿಕೆಟಿಗ ಹಾರ್ದಿಕ್ ಅಲ್ಲ. ಅವರಿಗೂ ಮೊದಲು 6 ಸ್ಟಾರ್ ಕ್ರಿಕೆಟಿಗರು ದಾಂಪತ್ಯ ಜೀವನದಲ್ಲಿ ವಿಚ್ಛೇದನದ ಆಘಾತ ಎದುರಿಸಿದ್ದಾರೆ.
2 / 7
ಒಂದು ಕಾಲದಲ್ಲಿ ಟೀಂ ಇಂಡಿಯಾದ ಆರಂಭಿಕರಾಗಿದ್ದ ಶಿಖರ್ ಧವನ್ ಕೂಡ ವಿಚ್ಛೇದನದ ಪಡೆದಿದ್ದಾರೆ. 2009 ರಲ್ಲಿ ಮೆಲ್ಬೋರ್ನ್‌ನಲ್ಲಿ ಆಯೇಶಾ ಮುಖರ್ಜಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಧವನ್, 2012 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇಬ್ಬರಿಗೂ ಒಬ್ಬ ಮಗನಿದ್ದು, ಇಬ್ಬರೂ ಒಟ್ಟಾಗಿ 11 ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಆದರೆ, ಇಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಿದ್ದು, ಮಾನಸಿಕ ಕಿರುಕುಳದ ಹಿನ್ನೆಲೆಯಲ್ಲಿ 2023ರಲ್ಲಿ ಧವನ್ ಆಯೇಷಾಗೆ ವಿಚ್ಛೇದನ ನೀಡಿದ್ದರು.
3 / 7
ದಿನೇಶ್ ಕಾರ್ತಿಕ್ ತನ್ನ ಬಾಲ್ಯದ ಗೆಳತಿ ನಿಕಿತಾ ಬಂಜಾರಾ ಅವರನ್ನು 2007 ರಲ್ಲಿ 21 ನೇ ವಯಸ್ಸಿನಲ್ಲಿ ಮದುವೆಯಾಗಿದ್ದರು. ಆದರೆ ಕೇವಲ 5 ವರ್ಷಗಳವರೆಗೆ ಜೊತೆಯಲ್ಲಿದ್ದ ಈ ಜೋಡಿ 2012 ರಲ್ಲಿ ಬೇರೆ ಬೇರೆಯಾಯಿತು. ಕಾರ್ತಿಕ್ ಅವರ ಪತ್ನಿ ನಿಕಿತಾ, ಸಹ ಕ್ರಿಕೆಟಿಗ ಮುರಳಿ ವಿಜಯ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಇದನ್ನು ತಿಳಿದ ಕಾರ್ತಿಕ್ ಆಘಾತಗೊಂಡರು. ಇದಾದ ನಂತರ ಇಬ್ಬರು ವಿಚ್ಛೇದನ ಪಡೆದರು. ನಂತರ ಕಾರ್ತಿಕ್ 2015 ರಲ್ಲಿ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾದರು.
4 / 7
ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ 2014 ರಲ್ಲಿ ಹಸಿನ್ ಜಹಾನ್ ಅವರನ್ನು ವಿವಾಹವಾಗಿದ್ದರು. ಆದರೆ ಮದುವೆಯಾಗಿ 4 ವರ್ಷಗಳಾದ ನಂತರ, ಅಂದರೆ 2018 ರಲ್ಲಿ ಹಸಿನ್ ಜಹಾನ್ ಅವರು ಶಮಿ ಇತರ ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಕೌಟುಂಬಿಕ ಹಿಂಸೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪ ಮಾಡಿದ್ದರು. ಅಂದಿನಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ, ಇಬ್ಬರ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಸಿಲುಕಿಕೊಂಡಿದೆ.
5 / 7
ಭಾರತ ತಂಡದ ನಾಯಕರಾಗಿದ್ದ ಮೊಹಮ್ಮದ್ ಅಜರುದ್ದೀನ್ ಒಂದಲ್ಲ ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಅವರು 1996 ರಲ್ಲಿ ತಮ್ಮ ಮೊದಲ ಪತ್ನಿ ನೌರೀನ್‌ಗೆ ವಿಚ್ಛೇದನ ನೀಡಿ, ಬಾಲಿವುಡ್ ನಟಿ ಸಂಗೀತಾ ಬಿಜಲಾನಿ ಅವರನ್ನು ವಿವಾಹವಾಗಿದ್ದರು. ಕೆಲವು ವರ್ಷಗಳ ನಂತರ, ಅವರು ಸಂಗೀತಾ ಬಿಜಲಾನಿಗೆ ವಿಚ್ಛೇದನ ನೀಡಿ, ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರನ್ನು ವಿವಾಹವಾದರು.
6 / 7
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ತಮ್ಮ ಬಾಲ್ಯದ ಗೆಳತಿ ನೋಯೆಲ್ಲಾ ಲೂಯಿಸ್ ಅವರನ್ನು 1998 ರಲ್ಲಿ ವಿವಾಹವಾಗಿದ್ದರು. ಆ ಬಳಿಕ ಪತ್ನಿಯ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಇದಾದ ಬಳಿಕ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು.
7 / 7
ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಪ್ರಸ್ತುತ ಐಸಿಸಿಯ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು 1999 ರಲ್ಲಿ ಜ್ಯೋಸ್ನಾ ಅವರನ್ನು ವಿವಾಹವಾದರು, ಆದರೆ 8 ವರ್ಷಗಳ ನಂತರ ಅಂದರೆ 2007 ರಲ್ಲಿ ವಿಚ್ಛೇದನ ಪಡೆದರು. ಕೇವಲ ಒಂದು ವರ್ಷದ ನಂತರ ಅವರು ಪತ್ರಕರ್ತೆ ಮಾಧವಿ ಪತ್ರಾವಳಿ ಅವರನ್ನು ವಿವಾಹವಾದರು.