IPL Records: ಐಪಿಎಲ್ನಲ್ಲಿ 99 ರನ್ಗೆ ಔಟಾದ 5 ಬ್ಯಾಟರ್ಗಳು ಇವರೇ..!
TV9 Web | Updated By: ಝಾಹಿರ್ ಯೂಸುಫ್
Updated on:
May 01, 2022 | 10:25 PM
IPL 2022: ಐಪಿಎಲ್ ಇತಿಹಾಸದಲ್ಲಿ ಕೇವಲ 5 ಬ್ಯಾಟರ್ಗಳು ಮಾತ್ರ 99 ರನ್ಗೆ ಔಟಾಗಿದ್ದಾರೆ. ಅದರಲ್ಲಿ ಇಬ್ಬರು ಬ್ಯಾಟರ್ಗಳು ಐಪಿಎಲ್ನಲ್ಲಿ ಅತ್ಯಧಿಕ ಶತಕ ಬಾರಿಸಿರುವ ಆಟಗಾರರು ಎಂಬುದು ವಿಶೇಷ.
1 / 7
ಐಪಿಎಲ್ನ 46ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಭರ್ಜರಿ ಪ್ರದರ್ಶನ ನೀಡಿದ ಸಿಎಸ್ಕೆ ತಂಡ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಕೇವಲ 1 ರನ್ನಿಂದ ಶತಕದಿಂದ ವಂಚಿತರಾಗಿದ್ದಾರೆ. ಸ್ಪೋಟಕ ಇನಿಂಗ್ಸ್ ಆಡಿದ ರುತುರಾಜ್ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್ ಬಾರಿಸಿ ಅಬ್ಬರಿಸಿದ್ದರು. 56 ಎಸೆತಗಳಲ್ಲಿ 99 ರನ್ಗಳಿಸಿದ್ದ ರುತುರಾಜ್ ಗಾಯಕ್ವಾಡ್ ಶತಕಕ್ಕೆ ಒಂದು ರನ್ ಬೇಕಿದ್ದ ವೇಳೆ ನಟರಾಜನ್ ಎಸೆತದಲ್ಲಿ ಭುವನೇಶ್ವರ್ ಕುಮಾರ್ಗೆ ಸುಲಭ ಕ್ಯಾಚ್ ನೀಡಿ ಹೊರನಡೆದರು.
2 / 7
ಇದರೊಂದಿಗೆ 1 ರನ್ಗಳಿಂದ ಐಪಿಎಲ್ನಲ್ಲಿ ಶತಕ ವಂಚಿತರಾದ 5ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಇದಕ್ಕೂ ಮುನ್ನ ಕೇವಲ 4 ಬ್ಯಾಟ್ಸ್ಮನ್ಗಳು ಮಾತ್ರ ಐಪಿಎಲ್ನಲ್ಲಿ 1 ರನ್ಗಳಿಂದ ಶತಕ ತಪ್ಪಿಸಿಕೊಂಡಿದ್ದರು. ಅವರೆಂದರೆ...
3 / 7
ವಿರಾಟ್ ಕೊಹ್ಲಿ: 2013 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 99 ರನ್ಗೆ ವಿಕೆಟ್ ಒಪ್ಪಿಸಿ ಐಪಿಎಲ್ನಲ್ಲಿ 1 ರನ್ನಿಂದ ಶತಕ ವಂಚಿರಾದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.
4 / 7
ಪೃಥ್ವಿ ಶಾ: 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪೃಥ್ವಿ ಶಾ ಕೆಕೆಆರ್ ವಿರುದ್ದದ ಪಂದ್ಯದಲ್ಲಿ 99 ರನ್ಗಳಿಸಿದ್ದಾಗ ಔಟಾಗುವ ಮೂಲಕ ಶತಕ ವಂಚಿತರಾಗಿದ್ದರು.
5 / 7
ಇಶಾನ್ ಕಿಶನ್: 2020 ರಲ್ಲಿ ಆರ್ಸಿಬಿ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ ಇಶಾನ್ ಕಿಶನ್ ಕೂಡ 99 ರನ್ಗೆ ಔಟಾಗುವ ಮೂಲಕ ಶತಕ ಪೂರೈಸುವುದನ್ನು ತಪ್ಪಿಸಿಕೊಂಡಿದ್ದರು.
6 / 7
ಕ್ರಿಸ್ ಗೇಲ್: 2020 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಪಂಜಾಬ್ ಕಿಂಗ್ಸ್ ತಂಡದ ಕಣಕ್ಕಿಳಿದಿದ್ದ ಕ್ರಿಸ್ ಗೇಲ್ ಕೂಡ 1 ರನ್ಗಳಿಂದ ಶತಕವನ್ನು ತಪ್ಪಿಸಿಕೊಂಡಿದ್ದರು.
7 / 7
ರುತುರಾಜ್ ಗಾಯಕ್ವಾಡ್: 2022ರ ಐಪಿಎಲ್ನಲ್ಲಿ ಎಸ್ಆರ್ಹೆಚ್ ವಿರುದ್ದದ ಪಂದ್ಯದಲ್ಲಿ 99 ರನ್ಗಳಿಸಿ ಔಟಾಗುವ ಮೂಲಕ ರುತುರಾಜ್ ಗಾಯಕ್ವಾಡ್ ಕೂಡ 1 ರನ್ನಿಂದ ಶತಕ ವಂಚಿತರಾಗಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಕೇವಲ 1 ರನ್ನಿಂದ ಶತಕ ತಪ್ಪಿಸಿಕೊಂಡ ಐದನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.