LSG vs SRH, IPL 2023: ನಾಯಕನೇ ಶೂನ್ಯಕ್ಕೆ ಔಟ್: ಸತತ ಎರಡನೇ ಪಂದ್ಯ ಸೋತ ಹೈದರಾಬಾದ್

|

Updated on: Apr 08, 2023 | 7:51 AM

Lucknow vs Hyderabad: ಶುಕ್ರವಾರ ಲಖನೌದ ಎಖಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಸ್​ಆರ್​ಹೆಚ್ ವಿರುದ್ಧ ಲಖನೌ ಸೂಪರ್ ಜೇಂಟ್ಸ್ ಸುಲಭ ಗೆಲುವು ಸಾಧಿಸಿತು. ಅಲ್ಪ ಮೊತ್ತದ ಟಾರ್ಗೆಟ್ ಬೆನ್ನಟ್ಟಿ 5 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿತು.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಎರಡನೇ ಪಂದ್ಯದಲ್ಲೂ ಸೋಲು ಕಾಣುವ ಮೂಲಕ ಗೆಲುವಿನ ಖಾತೆ ತೆರೆಯುವಲ್ಲಿ ಎಡವಿದೆ. ಆ್ಯಡಂ ಮಾರ್ಕ್ರಮ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದರೂ ನಾಯಕನೇ ಸೊನ್ನೆ ಸುತ್ತಿರುವುದು ದೊಡ್ಡ ಹಿನ್ನಡೆ ಆಗಿದೆ.

2 / 6
ಶುಕ್ರವಾರ ಲಖನೌದ ಎಖಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಸ್​ಆರ್​ಹೆಚ್ ವಿರುದ್ಧ ಲಖನೌ ಸೂಪರ್ ಜೇಂಟ್ಸ್ ಸುಲಭ ಗೆಲುವು ಸಾಧಿಸಿತು. ಅಲ್ಪ ಮೊತ್ತದ ಟಾರ್ಗೆಟ್ ಬೆನ್ನಟ್ಟಿ 5 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿತು.

3 / 6
ಕ್ರುನಾಲ್ ಪಾಂಡ್ಯ ಬೌಲಿಂಗ್ ಮುಂದೆ ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 121 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಅನ್ಮೋಲ್‌ಪ್ರೀತ್ ಸಿಂಗ್ ಜೊತೆಗೇ ಇನಿಂಗ್ಸ್ ಆರಂಭಿಸಿದ ಮಯಂಕ್ ಅಗರ್ವಾಲ್ (8) ಬೇಗನೆ ಔಟಾದರು.

4 / 6
ಅನ್ಮೋಲ್‌ಪ್ರೀತ್ 31 ರನ್ ಹಾಗೂ ರಾಹುಲ್ ತ್ರಿಪಾಠಿ 35 ರನ್​ಗಳ ಕೊಡುಗೆ ನೀಡಿದರು. ಈ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ನಾಯಕ ಮಾರ್ಕ್ರಮ್ ಡಕ್​ಗೆ ಔಟಾದರು. ವಾಷಿಂಗ್ಟನ್ ಸುಂದರ್ 16 ರನ್ ಮತ್ತು ಅಬ್ದುಲ್ ಸಮದ್ ಅಜೇಯ 21 ರನ್ ಗಳಿಸಿದ ಪರಿಣಾಮ ತಂಡದ ಮೊತ್ತವು ನೂರರ ಗಡಿ ದಾಟಿತು. ಕ್ರುನಾಲ್ ಎದುರಾಳಿಯ 3 ವಿಕೆಟ್ ಕಿತ್ತರು.

5 / 6
ಟಾರ್ಗೆಟ್ ಬೆನ್ನಟ್ಟಿದ ಎಲ್​ಎಸ್​ಜಿ ಈ ಬಾರಿ ಬೇಗನೆ ಕೈಲ್ ಮೇಯರ್ಸ್ (13) ವಿಕೆಟ್​ ಕಳೆದುಕೊಂಡಿತು. ದೀಪಕ್​ ಹೂಡಾ 7 ರನ್​ ಗಳಿಸಿ ಔಟಾದರು. ನಂತರ ಬಡ್ತಿ ಪಡೆದು ಬಂದ ಕೃನಾಲ್​ ಪಾಂಡ್ಯ ನಾಯಕ ರಾಹುಲ್​ ಸೇರಿ 50 ರನ್ ಜೊತೆಯಾಟ ನೀಡಿದರು.

6 / 6
ಪಾಂಡ್ಯ 34 ರನ್​ ಗಳಿಸಿ ಪೆವಿಲಿಯನ್​ಗೆ ಮರಳಿದರು. ಗೆಲುವಿಗೆ 8 ರನ್​ ದೂರ ಇರುವಾಗ ರಾಹುಲ್​ (35) ಆದಿಲ್​ ರಶೀದ್​​ಗೆ ವಿಕೆಟ್​ ಒಪ್ಪಿಸಿದರು. ಕೊನೆಯಲ್ಲಿ ಅಜೇಯರಾಗುಳಿದ ನಿಕೋಲಸ್ ಪೂರನ್ (10) ಮತ್ತು ಮಾರ್ಕಸ್ ಸ್ಟೊಯಿನಿಸ್ (11) ತಂಡವನ್ನು ಗೆಲ್ಲಿಸಿದರು. ಲಖನೌ 16 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 127 ರನ್ ಬಾರಿಸಿ ಜಯ ಸಾಧಿಸಿತು.

Published On - 7:51 am, Sat, 8 April 23