Ranji Trophy: 10 ಸಿಕ್ಸರ್, 11 ಬೌಂಡರಿ, 150 ರನ್; ರಣಜಿಯಲ್ಲಿ ಕನ್ನಡಿಗ ಮನೀಶ್ ಪಾಂಡೆ ಆರ್ಭಟ!

| Updated By: ಪೃಥ್ವಿಶಂಕರ

Updated on: Feb 17, 2022 | 5:27 PM

Manish Pandey: ಮನೀಷ್ ಪಾಂಡೆ 115 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 11 ಬೌಂಡರಿಗಳ ಮೂಲಕ ಸುದ್ದಿ ಬರೆಯುವವರೆಗೆ 150 ರನ್ ಗಳಿಸಿದರು.

1 / 5
ಮನೀಶ್ ಪಾಂಡೆ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲೇ ಸಂಚಲನ ಮೂಡಿಸಿದ್ದಾರೆ. ಮನೀಶ್ ಪಾಂಡೆ ರೈಲ್ವೇ ಬೌಲರ್​ಗಳ ಮೇಲೆ ಸವಾರಿ ನಡೆಸಿದ್ದಾರೆ. ಚೆನ್ನೈನ ಐಜಿ ಗುರುನಾನಕ್ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕದ ನಾಯಕ ಮನೀಶ್ ಪಾಂಡೆ ಕೇವಲ 83 ಎಸೆತಗಳಲ್ಲಿ ಶತಕ ಬಾರಿಸಿದರು.

2 / 5
ಅದ್ಭುತ ಸಂಗತಿಯೆಂದರೆ ಮನೀಶ್ ಪಾಂಡೆ ತಮ್ಮ ಶೈಲಿಯಿಂದ ಬ್ಯಾಟಿಂಗ್ ಮಾಡಿ ತುಂಬಾ ಆಕ್ರಮಣಕಾರಿ ನಿಲುವು ತಳೆದು ರೈಲ್ವೇ ಬೌಲರ್‌ಗಳನ್ನು ದಂಡಿಸಿದರು. ಮನೀಷ್ ಪಾಂಡೆ 115 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 11 ಬೌಂಡರಿಗಳ ಮೂಲಕ ಸುದ್ದಿ ಬರೆಯುವವರೆಗೆ 150 ರನ್ ಗಳಿಸಿದರು.

3 / 5
ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ವೈಯಕ್ತಿಕ ಸ್ಕೋರ್ 16 ರಲ್ಲಿ ರನೌಟ್ ಆದರು ಮತ್ತು ದೇವದತ್ ಪಡಿಕ್ಕಲ್ ಕೂಡ 21 ರನ್ ಗಳಿಸಿ ತಮ್ಮ ವಿಕೆಟ್ ಕಳೆದುಕೊಂಡರು. ಇದಾದ ಬಳಿಕ ಸಮರ್ಥ್ ಮತ್ತು ಸಿದ್ಧಾರ್ಥ್ ಉತ್ತಮ ಜೊತೆಯಾಟದೊಂದಿಗೆ ತಂಡವನ್ನು ಕೈವಶ ಮಾಡಿಕೊಂಡರೂ ಈ ಜೋಡಿಯನ್ನು ಅವಿನಾಶ್ ಯಾದವ್ ಮುರಿದರು. ಇದಾದ ಬಳಿಕ ಕ್ರೀಸ್ ಗೆ ಬಂದ ಪಾಂಡೆ ಬೌಂಡರಿ ಹಾಗೂ ಸಿಕ್ಸರ್ ಗಳ ಸುರಿಮಳೆಗೈದರು.

4 / 5
 ಮನೀಶ್ ಪಾಂಡೆ ಕೇವಲ 46 ಎಸೆತಗಳಲ್ಲಿ 4 ಸಿಕ್ಸರ್‌ಗಳನ್ನು ಒಳಗೊಂಡ ಅರ್ಧ ಶತಕವನ್ನು ಪೂರ್ಣಗೊಳಿಸಿದರು. ಅರ್ಧಶತಕ ಗಳಿಸಿದ ನಂತರ ಪಾಂಡೆ ಹೆಚ್ಚು ಅಪಾಯಕಾರಿಯಾದರು. ಮುಂದಿನ 37 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

5 / 5
ಮನೀಷ್ ಪಾಂಡೆ ಅವರ ನಿಧಾನಗತಿಯ ಬ್ಯಾಟಿಂಗ್‌ಗಾಗಿ ಆಗಾಗ್ಗೆ ಟ್ರೋಲ್‌ಗೆ ಒಳಗಾಗುತ್ತಾರೆ. ಐಪಿಎಲ್‌ನಲ್ಲೂ ಅವರ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆದರೆ ಐಪಿಎಲ್‌ಗೂ ಮುನ್ನ ನಡೆದ ರಣಜಿ ಟ್ರೋಫಿಯಲ್ಲಿ ಈ ಬ್ಯಾಟ್ಸ್‌ಮನ್ ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಐಪಿಎಲ್ 2022 ರ ಹರಾಜಿನಲ್ಲಿ ಮನೀಶ್ ಪಾಂಡೆಯನ್ನು ಲಕ್ನೋ ಸೂಪರ್‌ಜೈಂಟ್ಸ್ 4.60 ಕೋಟಿಗೆ ಖರೀದಿಸಿದೆ. ಮನೀಶ್ ಪಾಂಡೆ ಲಕ್ನೋದ ನಂಬಿಕೆಯನ್ನು ಉಳಿಸುವ ಪ್ರಯತ್ನದಲ್ಲಿದ್ದಾರೆ.