BBL 2024: ಮಾರ್ಕಸ್ ಸ್ಟೊಯಿನಿಸ್​ಗೆ ನಾಯಕತ್ವ

|

Updated on: Dec 11, 2024 | 10:57 AM

Big Bash League 2024-25: ಬಿಗ್ ಬ್ಯಾಷ್ ಟಿ20 ಲೀಗ್ ಡಿಸೆಂಬರ್ 15 ರಿಂದ ಶುರುವಾಗಲಿದೆ. ಫೈನಲ್ ಪಂದ್ಯವು ಮುಂದಿನ ವರ್ಷ ಜನವರಿ 27 ರಂದು ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು, ಅದರಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಆಸ್ಟ್ರೇಲಿಯಾದ ಆಲ್​ರೌಂಡರ್ ಆಟಗಾರ ಮಾರ್ಕಸ್ ಸ್ಟೊಯಿನಿಸ್ ಮುನ್ನಡೆಸಲಿದ್ದಾರೆ.

1 / 6
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಷ್ ಲೀಗ್​ ಸೀಸನ್-14 ರಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ನಾಯಕ ಮಾರ್ಕಸ್ ಸ್ಟೊಯಿನಿಸ್ ಮುನ್ನಡೆಸಲಿದ್ದಾರೆ. ಈ ಟೂರ್ನಿಯು ಡಿಸೆಂಬರ್ 15 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಪರ್ತ್​ ಸ್ಕಾಚರ್ಸ್ ಹಾಗೂ ಮೆಲ್ಬೋರ್ನ್ ಸ್ಟಾರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ಮೂಲಕ ಮಾರ್ಕಸ್ ಸ್ಟೊಯಿನಿಸ್ ಕ್ಯಾಪ್ಟನ್ ಆಗಿ ಪಾದಾರ್ಪಣೆ ಮಾಡಲಿದ್ದಾರೆ.

2 / 6
ಇದಕ್ಕೂ ಮುನ್ನ ಮೆಲ್ಬೋರ್ನ್​ ಸ್ಟಾರ್ಸ್ ತಂಡದ ನಾಯಕನಾಗಿ ಗ್ಲೆನ್ ಮ್ಯಾಕ್ಸ್​ವೆಲ್ ಕಾಣಿಸಿಕೊಂಡಿದ್ದರು. 2018 ರಿಂದ ತಂಡದ ಚುಕ್ಕಾಣಿ ಹಿಡಿದಿದ್ದ ಮ್ಯಾಕ್ಸಿ ಅವರನ್ನು ಈ ಬಾರಿ ನಾಯಕತ್ವದಿಂದ ಕೆಳಗಿಳಿಸಲಾಗಿದ್ದು, ಅವರ ಬದಲಿಗೆ ಸ್ಟೊಯಿನಿಸ್ ಅವರನ್ನು ಕ್ಯಾಪ್ಟನ್ ಎಂದು ಘೋಷಿಸಲಾಗಿದೆ.

3 / 6
ಅದರಂತೆ 15 ಸದಸ್ಯರ ಮೆಲ್ಬೋರ್ನ್​ ಸ್ಟಾರ್ಸ್ ತಂಡದ ನಾಯಕರಾಗಿ ಆಸ್ಟ್ರೇಲಿಯನ್ ಆಲ್​ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಕಾಣಿಸಿಕೊಳ್ಳಲಿದ್ದಾರೆ. ಒಂದು ವೇಳೆ ಸ್ಟೊಯಿನಿಸ್ ನಾಯಕತ್ವದಲ್ಲಿ ಮೆಲ್ಬೋರ್ನ್ ಪಡೆ ಮಿಂಚಿದರೆ, ಐಪಿಎಲ್​ನಲ್ಲಿ ಉಪನಾಯಕನ ಸ್ಥಾನ ಒಲಿಯುವುದು ಖಚಿತ.

4 / 6
ಏಕೆಂದರೆ ಮಾರ್ಕಸ್ ಸ್ಟೊಯಿನಿಸ್ ಈ ಬಾರಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ತಂಡದ ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳುವುದು ಖಚಿತ. ಇದಾಗ್ಯೂ ಉಪನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

5 / 6
ಇದೀಗ ಅತ್ತ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿರುವ ಮಾಕರ್ಸ್ ಸ್ಟೊಯಿನಿಸ್, ಅದ್ಭುತ ಪ್ರದರ್ಶನದೊಂದಿಗೆ ತಂಡವನ್ನು ಮುನ್ನಡೆಸಿದರೆ ಪಂಜಾಬ್ ಕಿಂಗ್ಸ್ ತಂಡದ ಉಪನಾಯಕನಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಬಹುದು.

6 / 6
ಮೆಲ್ಬೋರ್ನ್ ಸ್ಟಾರ್ಸ್ ತಂಡ: ಮಾರ್ಕಸ್ ಸ್ಟೊಯಿನಿಸ್ (ನಾಯಕ), ಗ್ಲೆನ್ ಮ್ಯಾಕ್ಸ್​ವೆಲ್, ಸ್ಕಾಟ್ ಬೋಲ್ಯಾಂಡ್, ಹಿಲ್ಟನ್ ಕಾರ್ಟ್‌ರೈಟ್, ಬ್ರಾಡಿ ಕೌಚ್, ಟಾಮ್ ಕರನ್, ಬೆನ್ ಡಕೆಟ್, ಸ್ಯಾಮ್ ಹಾರ್ಪರ್, ಕ್ಯಾಂಪ್‌ಬೆಲ್ ಕೆಲ್ಲವೇ, ಹ್ಯಾಮಿಶ್ ಮೆಕೆಂಜಿ, ಉಸಾಮಾ ಮಿರ್, ಜೋಯಲ್ ಪ್ಯಾರಿಸ್, ಟಾಮ್ ರೋಜರ್ಸ್, ಮಾರ್ಕ್ ಸ್ಟೆಕ್ಟೀ, ಬ್ಯೂ ವೆಬ್‌ಸ್ಟರ್.

Published On - 10:56 am, Wed, 11 December 24