IPL 2026: ಬಿಗ್ ಶಾಕ್… ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ಹೆಸರು ಕೂಗಲೇ ಇಲ್ಲ..!

Updated on: Dec 17, 2025 | 8:34 AM

Mayank Agarwal:  ಐಪಿಎಲ್ 2026 ರಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 4 ಪಂದ್ಯಗಳನ್ನಾಡಿದ್ದ ಮಯಾಂಕ್ ಅಗರ್ವಾಲ್ ಒಟ್ಟು 95 ರನ್ ಕಲೆಹಾಕಿದ್ದರು. ಈ ಮೂಲಕ ಆರ್​ಸಿಬಿ ತಂಡವು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮಯಾಂಕ್ ತನ್ನದೇಯಾದ ಕೊಡುಗೆಯನ್ನು ನೀಡಿದ್ದರು.

1 / 5
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜು ಮುಗಿದಿದೆ. ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 369 ಆಟಗಾರರ ಹೆಸರು ಕಾಣಿಸಿಕೊಂಡಿತ್ತು. ಇದಾಗ್ಯೂ ಈ ಪಟ್ಟಿಯಲ್ಲಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank agarwal) ಹೆಸರು ಕೂಗಲೇ ಇಲ್ಲ ಎಂದರೆ ನಂಬಲೇಬೇಕು.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜು ಮುಗಿದಿದೆ. ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 369 ಆಟಗಾರರ ಹೆಸರು ಕಾಣಿಸಿಕೊಂಡಿತ್ತು. ಇದಾಗ್ಯೂ ಈ ಪಟ್ಟಿಯಲ್ಲಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank agarwal) ಹೆಸರು ಕೂಗಲೇ ಇಲ್ಲ ಎಂದರೆ ನಂಬಲೇಬೇಕು.

2 / 5

ಮಯಾಂಕ್ ಅಗರ್ವಾಲ್ ಈ ಬಾರಿಯ ಐಪಿಎಲ್​ಗಾಗಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿದ್ದರು. ಅದರಂತೆ ಹರಾಜಿಗಾಗಿ ಫೈನಲ್ ಮಾಡಿದ 369 ಆಟಗಾರರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. ಆದರೆ ಮಂಗಳವಾರ ನಡೆದ ಹರಾಜಿನಲ್ಲಿ ಮಯಾಂಕ್ ಹೆಸರು ಕಾಣಿಸಿಕೊಂಡಿರಲಿಲ್ಲ.

3 / 5

ಇದಕ್ಕೆ ಮುಖ್ಯ ಕಾರಣ, ಯಾವುದೇ ಫ್ರಾಂಚೈಸಿ ಆಸಕ್ತಿ ತೋರದಿರುವುದು. ಆಕ್ಷನ್ ಪಟ್ಟಿಯಲ್ಲಿ 71ನೇ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಹೆಸರು ರಿಜಿಸ್ಟರ್ ಆಗಿತ್ತು. ಆದರೆ 8ನೇ ಸುತ್ತಿನ ಬಳಿಕ ಹರಾಜು ಪಟ್ಟಿಯನ್ನು ಮತ್ತೊಮ್ಮೆ ಶಾರ್ಟ್ ಲಿಸ್ಟ್ ಮಾಡಲಾಗಿದೆ.

4 / 5

ಅಂದರೆ ಹರಾಜಿ ನಡುವೆಯೂ ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಈ ವೇಳೆ 10 ಫ್ರಾಂಚೈಸಿಗಳು ಖರೀದಿಸಲು ಆಸಕ್ತಿ ಹೊಂದಿರುವ ಆಟಗಾರರ ಪಟ್ಟಿಯನ್ನು ಟಿಕ್ ಮಾಡುತ್ತಾರೆ. ಹೀಗೆ ಟಿಕ್ ಮಾಡಲಾದ ಪಟ್ಟಿಯಲ್ಲಿ ಮಯಾಂಕ್ ಅಗರ್ವಾಲ್ ಹೆಸರು ಇರಲಿಲ್ಲ. ಇದರಿಂದಾಗಿ ಕನ್ನಡಿಗನ ಹೆಸರು ಹರಾಜಿನಲ್ಲಿ ಕೂಗಲಿಲ್ಲ.

5 / 5

ಅಂದಹಾಗೆ ಕಳೆದ ಬಾರಿ ಕೂಡ ಮಯಾಂಕ್ ಅಗರ್ವಾಲ್ ಅನ್​ಸೋಲ್ಡ್ ಆಗಿದ್ದರು. ಇದಾಗ್ಯೂ ದೇವದತ್ ಪಡಿಕ್ಕಲ್ ಗಾಯಗೊಂಡಾಗ ಆರ್​ಸಿಬಿ ತಂಡಕ್ಕೆ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟಿದ್ದ ಮಯಾಂಕ್ 4 ಮ್ಯಾಚ್​ಗಳಲ್ಲಿ 95 ರನ್​ ಬಾರಿಸಿದ್ದರು. ಈ ಮೂಲಕ ಆರ್​ಸಿಬಿ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ತಮ್ಮದೆಯಾದ ಕೊಡುಗೆ ನೀಡಿದ್ದರು. ಇದಾಗ್ಯೂ ಈ ಬಾರಿ ಯಾವುದೇ ಫ್ರಾಂಚೈಸಿ ಅನುಭವಿ ಆಟಗಾರನನ್ನು ಖರೀದಿಸದೇ ಇರುವುದು ಅಚ್ಚರಿಯೇ ಸರಿ.

Loading...
Unable to load recommendations.
Follow Us