Mumbai Indians: 9ನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್..!

Updated on: Jul 31, 2023 | 12:28 PM

MLC 2023: ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಚಾಂಪಿಯನ್​ ಪಟ್ಟಕ್ಕೇರುವುದರೊಂದಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ಒಟ್ಟು 9 ಟಿ20 ಲೀಗ್‌ ಪ್ರಶಸ್ತಿಯನ್ನು ಗೆದ್ದ ದಾಖಲೆ ಬರೆದಿದೆ.

1 / 6
ವಿವಿದ ದೇಶಗಳಲ್ಲಿ ನಡೆಯುವ ಟಿ20 ಲೀಗ್​ಗಳಲ್ಲಿ ತಂಡ ಕಟ್ಟಿರುವ ಅಂಬಾನಿ ಒಡೆತದ ಮುಂಬೈ ಇಂಡಿಯನ್ಸ್ ಫ್ರಾಂಚೈಸ್, ಲೀಗ್​ಗಳಲ್ಲಿ ತನ್ನ ಪ್ರಶಸ್ತಿ ಭೇಟೆಯನ್ನು ಮುಂದುವರೆಸಿದೆ. ಐಪಿಎಲ್​ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ದಾಖಲೆ ಬರೆದಿರುವ ಮುಂಬೈ ಇಂಡಿಯನ್ಸ್ ಇದೀಗ, ಅಮೆರಿಕದ ಲೀಗ್‌ನಲ್ಲೂ ಮೇಲುಗೈ ಸಾಧಿಸಿದೆ.

ವಿವಿದ ದೇಶಗಳಲ್ಲಿ ನಡೆಯುವ ಟಿ20 ಲೀಗ್​ಗಳಲ್ಲಿ ತಂಡ ಕಟ್ಟಿರುವ ಅಂಬಾನಿ ಒಡೆತದ ಮುಂಬೈ ಇಂಡಿಯನ್ಸ್ ಫ್ರಾಂಚೈಸ್, ಲೀಗ್​ಗಳಲ್ಲಿ ತನ್ನ ಪ್ರಶಸ್ತಿ ಭೇಟೆಯನ್ನು ಮುಂದುವರೆಸಿದೆ. ಐಪಿಎಲ್​ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ದಾಖಲೆ ಬರೆದಿರುವ ಮುಂಬೈ ಇಂಡಿಯನ್ಸ್ ಇದೀಗ, ಅಮೆರಿಕದ ಲೀಗ್‌ನಲ್ಲೂ ಮೇಲುಗೈ ಸಾಧಿಸಿದೆ.

2 / 6

ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್, ಇದೀಗ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್‌ನಲ್ಲೂ ತಮ್ಮ ಯಶಸ್ಸಿನ ಪತಾಕೆಯನ್ನು ಹಾರಿಸಿದೆ. ಅಮೇರಿಕದಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಮುಂಬೈ ಇಂಡಿಯನ್ಸ್ ಒಡೆತನದ ಎಂಐ ನ್ಯೂಯಾರ್ಕ್​ ತಂಡ ಯಶಸ್ವಿಯಾಗಿದೆ.

3 / 6

ಐಪಿಎಲ್​ನಲ್ಲಿ ಸತತ ಸೋಲುಗಳನ್ನು ಅನುಭವಿಸಿ, ಆ ಬಳಿಕ ಗೆಲುವಿನ ಟ್ರ್ಯಾಕ್​ಗೆ ಮರಳಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕರಗತವಾಗಿರುವ ಕಲೆ. ಈ ಕಲೆಯನ್ನು ಎಂಎಲ್​ಸಿಯಲ್ಲೂ ಪ್ರದರ್ಶಿಸಿದ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. ಆದರೆ, ಅಲ್ಲಿಂದ ಮತ್ತೆ ಪುಟಿದೆದ್ದು ಚಾಂಪಿಯನ್ ಪಟ್ಟಕ್ಕೇರಿದೆ.

4 / 6

ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಚಾಂಪಿಯನ್​ ಪಟ್ಟಕ್ಕೇರುವುದರೊಂದಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ಒಟ್ಟು 9 ಟಿ20 ಲೀಗ್‌ ಪ್ರಶಸ್ತಿಯನ್ನು ಗೆದ್ದ ದಾಖಲೆ ಬರೆದಿದೆ. 2011ರಲ್ಲಿ ಮೊದಲ ಬಾರಿಗೆ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದಿದ್ದ ಮುಂಬೈ ಇಂಡಿಯನ್ಸ್ ಅಲ್ಲಿಂದ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿತು.

5 / 6

ಎರಡು ವರ್ಷಗಳ ನಂತರ ಅಂದರೆ 2013ರಲ್ಲಿ, ಮೊದಲ ಬಾರಿಗೆ ಐಪಿಎಲ್ ಕಿರೀಟ ತೊಟ್ಟ ಮುಂಬೈ ಫ್ರಾಂಚೈಸಿ, ಅದೇ ವರ್ಷ ಮತ್ತೊಮ್ಮೆ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ನಂತರ 2015 ರಲ್ಲಿ ಎರಡನೇ ಬಾರಿಗೆ ಐಪಿಎಲ್​ ಗೆದ್ದ ಮುಂಬೈ, ಇದಾದ ಬಳಿಕ 2017, 2019 ಮತ್ತು 2020ರಲ್ಲಿ ಐಪಿಎಲ್‌ನಲ್ಲಿ ಟ್ರೋಫಿಯನ್ನು ಗೆದ್ದುಕೊಂಡಿದೆ.

6 / 6

ಆ ಬಳಿಕ2023 ರಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ಮಹಿಳಾ ಪ್ರೀಮಿಯರ್ ಲೀಗ್​ನಲ್ಲೂ ಪ್ರಶಸ್ತಿ ಭೇಟೆ ಮುಂದುವರೆಸಿದ ಮುಂಬೈ ಇಂಡಿಯನ್ಸ್, ಹರ್ಮನ್​ಪ್ರೀತ್ ಕೌರ್ ನಾಯಕತ್ವದಲ್ಲಿ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದೀಗ ಅಮೆರಿಕದಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್‌ನ ಮೊದಲ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಒಡೆತನದ ಎಂಐ ನ್ಯೂಯಾರ್ಕ್​ ತಂಡ ಪ್ರಶಸ್ತಿಗೆ ಮುತ್ತಿಟ್ಟಿದೆ.

Published On - 12:26 pm, Mon, 31 July 23

Loading...
Unable to load recommendations.
Follow Us