Mohammad Rizwan: ರಿಝ್ವಾನ್ ವಿಶ್ವ ದಾಖಲೆ ತಪ್ಪಿಸಿದ ಪಾಕ್ ನಾಯಕ

|

Updated on: Aug 24, 2024 | 11:08 AM

Pakistan vs Bangladesh, 1st Test: ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಪಾಕಿಸ್ತಾನ್ ತಂಡವು 6 ವಿಕೆಟ್ ನಷ್ಟಕ್ಕೆ 448 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶ್ ತಂಡವು ಮೂರನೇ ದಿನದಾಟದ ಅಂತ್ಯದ ವೇಳೆ 5 ವಿಕೆಟ್ ಕಳೆದುಕೊಂಡು 320 ರನ್​ ಕಲೆಹಾಕಿದೆ.

1 / 6
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಝ್ವಾನ್ 229 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ ಅಜೇಯ 171 ರನ್ ಬಾರಿಸಿದ್ದಾರೆ.

2 / 6
ಇತ್ತ ಅಜೇಯ 171 ರನ್​ಗಳೊಂದಿಗೆ ರಿಝ್ವಾನ್ ದ್ವಿಶತಕದತ್ತ ಸಾಗುತ್ತಿದ್ದರೆ, ಅತ್ತ ಪಾಕಿಸ್ತಾನ್ ತಂಡದ ನಾಯಕ ಶಾನ್ ಮಸೂದ್ ಇನಿಂಗ್ಸ್ ಡಿಕ್ಲೇರ್ ಘೋಷಿಸಿದರು. ಅದು ಸಹ 2ನೇ ದಿನದಾಟದ 3ನೇ ಸೆಷನ್​ನಲ್ಲಿ ಎಂಬುದು ವಿಶೇಷ. ಅಂದರೆ ಉತ್ತಮವಾಗಿ ಬ್ಯಾಟಿಂಗ್​ ಮಾಡುತ್ತಿದ್ದ ರಿಝ್ವಾನ್​ಗೆ ದ್ವಿಶತಕ ಬಾರಿಸುವ ಅತ್ಯುತ್ತಮ ಅವಕಾಶವಿತ್ತು.

3 / 6
ಆದರೆ ಪಾಕಿಸ್ತಾನ್ ತಂಡದ ನಾಯಕ ಶಾನ್ ಮಸೂದ್ ಅವರ ನಡೆಯಿಂದಾಗಿ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ಬರೆಯುವ ಅವಕಾಶ ಕೂಡ ಮೊಹಮ್ಮದ್ ರಿಝ್ವಾನ್ ಕೈತಪ್ಪಿದೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...

4 / 6
ಅಜೇಯ 171 ರನ್​ ಬಾರಿಸಿದ್ದ ಮೊಹಮ್ಮದ್ ರಿಝ್ವಾನ್ ಈ ಇನಿಂಗ್ಸ್​ನಲ್ಲಿ ಹೆಚ್ಚುವರಿ 39 ರನ್​ಗಳಿಸಿದ್ದರೆ ಪಾಕಿಸ್ತಾನ್ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ ಗಳಿಸಿದ ವಿಕೆಟ್ ಕೀಪರ್ ಎನಿಸಿಕೊಳ್ಳುತ್ತಿದ್ದರು. ಸದ್ಯ ಈ ದಾಖಲೆ 1980 ರಲ್ಲಿ 210 ರನ್ ಬಾರಿಸಿದ್ದ ಪಾಕ್ ವಿಕೆಟ್ ಕೀಪರ್ ತಸ್ಲೀಮ್ ಆರಿಫ್ ಹೆಸರಿನಲ್ಲಿದೆ.

5 / 6
ಇನ್ನು ಇದೇ ಪಂದ್ಯದ ಮೂಲಕ ಹೆಚ್ಚುವರಿ 61 ರನ್ ಬಾರಿಸಿದ್ದರೆ, ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲೇ ಗರಿಷ್ಠ ಸ್ಕೋರ್​ ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಮೊಹಮ್ಮದ್ ರಿಝ್ವಾನ್ ಪಾಲಾಗುತ್ತಿತ್ತು. ಈ ವಿಶ್ವ ದಾಖಲೆ ಝಿಂಬಾಬ್ವೆಯ ಆ್ಯಂಡಿ ಫ್ಲವರ್ ಹೆಸರಿನಲ್ಲಿದೆ. 2000 ರಲ್ಲಿ ಟೀಮ್ ಇಂಡಿಯಾ ವಿರುದ್ಧ ಆ್ಯಂಡಿ ಫ್ಲವರ್ 232 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ.

6 / 6
ಅಂದರೆ ಅಜೇಯ 171 ರನ್​ಗಳೊಂದಿಗೆ ಅದ್ಭುತ ಬ್ಯಾಟಿಂಗ್ ಮುಂದುವರೆಸಿದ್ದ ಮೊಹಮ್ಮದ್ ರಿಝ್ವಾನ್​ಗೆ ಈ ಎರಡು ದಾಖಲೆಗಳನ್ನು ಮುರಿಯುವ ಉತ್ತಮ ಅವಕಾಶವಿತ್ತು. ಆದರೆ ಪಾಕಿಸ್ತಾನ್ ತಂಡದ ನಾಯಕ ಶಾನ್ ಮಸೂದ್ ದಿಢೀರ್ ಡಿಕ್ಲೇರ್ ಘೋಷಿಸುವ ಮೂಲಕ ರಿಝ್ವಾನ್​ಗೆ ಬಿಗ್ ಶಾಕ್ ನೀಡಿದ್ದರು. ಇದರೊಂದಿಗೆ ಟೆಸ್ಟ್​​ನಲ್ಲಿ ಹೊಸ ಇತಿಹಾಸ ನಿರ್ಮಿಸುವ ಅವಕಾಶ ಕೂಡ ಕೈತಪ್ಪಿತು.