ICC Awards: ತಿಂಗಳ ಆಟಗಾರ ಪ್ರಶಸ್ತಿ ರೇಸ್​ನಲ್ಲಿ ಮೊಹಮ್ಮದ್ ಶಮಿ; ಉಳಿದ ಇಬ್ಬರು ಯಾರು ಗೊತ್ತಾ?

Updated on: Dec 08, 2023 | 9:03 AM

ICC Men's Player of the Month Award: ಏಕದಿನ ವಿಶ್ವಕಪ್ ಮುಗಿದ ಬಳಿಕ ಇದೀಗ ಐಸಿಸಿ, ನವೆಂಬರ್ ತಿಂಗಳ ಆಟಗಾರ ಪ್ರಶಸ್ತಿಗಾಗಿ ಮೂವರು ಆಟಗಾರರನ್ನು ನಾಮನಿರ್ದೇಶನ ಮಾಡಿದೆ. ಅದರಲ್ಲಿ ಈ ಬಾರಿಯೂ ಟೀಂ ಇಂಡಿಯಾ ಆಟಗಾರನ ಹೆಸರಿನ ಜೊತೆಗೆ ಆಸ್ಟ್ರೇಲಿಯಾದ ಇಬ್ಬರು ಆಟಗಾರರ ಹೆಸರು ಸೇರಿದೆ.

1 / 11
ಏಕದಿನ ವಿಶ್ವಕಪ್ ಮುಗಿದ ಬಳಿಕ ಇದೀಗ ಐಸಿಸಿ, ನವೆಂಬರ್ ತಿಂಗಳ ಆಟಗಾರ ಪ್ರಶಸ್ತಿಗಾಗಿ ಮೂವರು ಆಟಗಾರರನ್ನು ನಾಮನಿರ್ದೇಶನ ಮಾಡಿದೆ. ಅದರಲ್ಲಿ ಈ ಬಾರಿಯೂ ಟೀಂ ಇಂಡಿಯಾ ಆಟಗಾರನ ಹೆಸರಿನ ಜೊತೆಗೆ ಆಸ್ಟ್ರೇಲಿಯಾದ ಇಬ್ಬರು ಆಟಗಾರರ ಹೆಸರು ಸೇರಿದೆ.

ಏಕದಿನ ವಿಶ್ವಕಪ್ ಮುಗಿದ ಬಳಿಕ ಇದೀಗ ಐಸಿಸಿ, ನವೆಂಬರ್ ತಿಂಗಳ ಆಟಗಾರ ಪ್ರಶಸ್ತಿಗಾಗಿ ಮೂವರು ಆಟಗಾರರನ್ನು ನಾಮನಿರ್ದೇಶನ ಮಾಡಿದೆ. ಅದರಲ್ಲಿ ಈ ಬಾರಿಯೂ ಟೀಂ ಇಂಡಿಯಾ ಆಟಗಾರನ ಹೆಸರಿನ ಜೊತೆಗೆ ಆಸ್ಟ್ರೇಲಿಯಾದ ಇಬ್ಬರು ಆಟಗಾರರ ಹೆಸರು ಸೇರಿದೆ.

2 / 11

ಭಾರತದ ಮೊಹಮ್ಮದ್ ಶಮಿಯಲ್ಲದೆ, ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

3 / 11

ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮತ್ತು ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟ್ರಾವಿಸ್ ಹೆಡ್ ಅವರು ತಮ್ಮ ತಂಡವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಈ ವರ್ಷದ ನವೆಂಬರ್‌ನಲ್ಲಿ, ಅವರು ಐದು ಏಕದಿನ ಪಂದ್ಯಗಳಲ್ಲಿ 44 ರ ಸರಾಸರಿಯಲ್ಲಿ 220 ರನ್ ಗಳಿಸಿದರು. ಇದರಲ್ಲಿ ಅರ್ಧಶತಕ ಮತ್ತು ಶತಕ ಎರಡು ಶತಕಗಳು ಸೇರಿವೆ.

4 / 11

ವಿಶ್ವಕಪ್ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಅಮೋಘ ಆಟ ಪ್ರದರ್ಶಿಸಿದ ಹೆಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು. ಸೆಮಿ-ಫೈನಲ್‌ನಲ್ಲಿ, ಅವರು ಹೆನ್ರಿಕ್ ಕ್ಲಾಸೆನ್ ಮತ್ತು ಮಾರ್ಕೊ ಯಾನ್ಸನ್‌ರ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆಯುವ ಮೂಲಕ ದಕ್ಷಿಣ ಆಫ್ರಿಕಾದ ರೈಲನ್ನು ಹಳಿತಪ್ಪಿಸಿದರು.

5 / 11

ಇದರ ನಂತರ, ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಟ್ರಾವಿಸ್ ಹೆಡ್ 48 ರಲ್ಲಿ 62 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಟೀಂ ಇಂಡಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅವರು 120 ಎಸೆತಗಳಲ್ಲಿ 137 ರನ್ ಗಳಿಸಿ ಆಸ್ಟ್ರೇಲಿಯವನ್ನು ಆರು ವಿಕೆಟ್‌ಗಳಿಂದ ಗೆಲ್ಲಲು ನೆರವಾದರು.

6 / 11

ಆಸ್ಟ್ರೇಲಿಯದ ಇನ್ನಿಂಗ್ಸ್ ಒಂದು ಹಂತದಲ್ಲಿ ತತ್ತರಿಸಿದ್ದು, 241 ರನ್‌ಗಳ ಗುರಿ ಬೆನ್ನಟ್ಟಿದ ವೇಳೆ 47 ರನ್‌ಗಳಿಗೆ ಮೂರು ವಿಕೆಟ್‌ಗಳು ಪತನಗೊಂಡಿದ್ದವು. ಇದಾದ ಬಳಿಕ ಹೆಡ್ 15 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ ತಂಡವನ್ನು ಚಾಂಪಿಯನ್ ಮಾಡಿದ್ದರು.

7 / 11

ಐಸಿಸಿಯಿಂದ ನಾಮನಿರ್ದೇಶನಗೊಂಡ ಎರಡನೇ ಆಸ್ಟ್ರೇಲಿಯನ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್. ಅವರು ನವೆಂಬರ್‌ನಲ್ಲಿ ಮೂರು ಏಕದಿನ ಪಂದ್ಯಗಳಲ್ಲಿ 152.23 ಸ್ಟ್ರೈಕ್ ರೇಟ್‌ನೊಂದಿಗೆ 204 ರ ಸರಾಸರಿಯಲ್ಲಿ 204 ರನ್ ಗಳಿಸಿರುವುದಲ್ಲದೆ ಎರಡು ವಿಕೆಟ್‌ಗಳನ್ನು ಪಡೆದರು.

8 / 11

ಭಾರತದ ವಿರುದ್ಧದ ಸರಣಿಯಲ್ಲಿನ ಎರಡು ಟಿ20 ಪಂದ್ಯಗಳಲ್ಲಿ ಅವರು 207.14 ರ ಸ್ಟ್ರೈಕ್ ರೇಟ್‌ನಲ್ಲಿ 116 ರನ್ ಗಳಿಸಿದರು. ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೇವಲ 128 ಎಸೆತಗಳಲ್ಲಿ 21 ಬೌಂಡರಿ ಮತ್ತು 10 ಸಿಕ್ಸರ್‌ಗಳ ನೆರವಿನಿಂದ 201 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

9 / 11

ಭಾರತದ ಮೊಹಮ್ಮದ್ ಶಮಿ ಕೂಡ ಐಸಿಸಿಯಿಂದ ನಾಮನಿರ್ದೇಶನಗೊಂಡಿದ್ದಾರೆ. ಮೊಹಮ್ಮದ್ ಶಮಿ ನವೆಂಬರ್‌ನಲ್ಲಿ ವಿಶ್ವಕಪ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಿದರು. ಅವರು 12.06 ರ ಸರಾಸರಿಯಲ್ಲಿ ಮತ್ತು 5.68 ರ ಎಕಾನಮಿ ದರದಲ್ಲಿ 15 ವಿಕೆಟ್ಗಳನ್ನು ಪಡೆದರು.

10 / 11

2023 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ, ಅವರು ಕೇವಲ ಏಳು ಇನ್ನಿಂಗ್ಸ್‌ಗಳಲ್ಲಿ 24 ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯಾವಳಿಯಲ್ಲಿ ಪ್ರಮುಖ ವಿಕೆಟ್‌ ಟೇಕರ್‌ ಎನಿಸಿಕೊಂಡರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ 18 ರನ್‌ಗಳಿಗೆ ಐದು ವಿಕೆಟ್ ಪಡೆದರು.

11 / 11

ಇದರ ನಂತರ ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 18 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು. ಫೈನಲ್‌ನಲ್ಲೂ ಮೊಹಮ್ಮದ್ ಶಮಿ ಒಂದು ವಿಕೆಟ್ ಪಡೆದಿದ್ದರು. ಈ ಮೂವರಲ್ಲಿ ಯಾರು ಈ ದೊಡ್ಡ ಐಸಿಸಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Loading...
Unable to load recommendations.
Follow Us