
ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂಬುದಕ್ಕೆ ಭುವನೇಶ್ವರ್ ಕುಮಾರ್ ತಾಜಾ ಉದಾಹರಣೆಯಾಗಿದ್ದಾರೆ. ಟೀಂ ಇಂಡಿಯಾದಿಂದ ಹೊರಬಿದ್ದರೂ ಛಲ ಬಿಡದ ಭುವಿ 4 ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ಭುವನೇಶ್ವರ್ ಆಗಮನದ ಬಳಿಕ ಅಭಿಮಾನಿಗಳಿಂದ ಮತ್ತೊಂದು ಕೂಗು ಜೋರಾಗಿದೆ. ಅದೇನೆಂದರೆ ಮೊಹಮ್ಮದ್ ಶಮಿಗೆ ಮತ್ತೊಂದು ಅವಕಾಶ ಯಾವಾಗ ಎಂಬುದು(PC-PTI).
ಭುವನೇಶ್ವರ್ ಕುಮಾರ್ ಅವರಂತೆಯೇ ಮೊಹಮ್ಮದ್ ಶಮಿ ಕೂಡ ಮತ್ತೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದಾಗ್ಯೂ ಅವರ ಮೇಲೆ ಬಿಸಿಸಿಐ ಕರುಣೆ ತೋರುತ್ತಿಲ್ಲ. ಆದರೀಗ ಭುವನೇಶ್ವರ್ಗೆ ಅವಕಾಶ ಸಿಕ್ಕ ಬಳಿಕ, ಮೊಹಮ್ಮದ್ ಶಮಿ ಕೂಡ ತಂಡದಲ್ಲಿ ಆಡುವ ದಿನಗಳು ದೂರವಿಲ್ಲ ಎಂಬ ಅಭಿಪ್ರಾಯವನ್ನು ಬಂಗಾಳದ ತಂಡದ ಕೋಚ್ ಲಕ್ಷ್ಮಿ ರತ್ನ ಶುಕ್ಲಾ ಹಂಚಿಕೊಂಡಿದ್ದಾರೆ(PC-PTI).
ಈ ಬಗ್ಗೆ ಮಾತನಾಡಿರುವ ಬಂಗಾಳದ ತಂಡದ ಕೋಚ್ ಲಕ್ಷ್ಮಿ ರತ್ನ ಶುಕ್ಲಾ,‘ ಶಮಿ ಒಬ್ಬ ಅತ್ಯುತ್ತಮ ಆಟಗಾರ. ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಎಲ್ಲರಿಗೂ ಪ್ರೇರಣೆ ನೀಡುತ್ತಾರೆ. ಮುಂಬರುವ ರಣಜಿ ಟ್ರೋಫಿಯಲ್ಲಿ ಶಮಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಬಲವಾದ ಪುನರಾಗಮನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ(PC-PTI).
ಆದಾಗ್ಯೂ, ಕಳೆದ ಎರಡು ವರ್ಷಗಳಲ್ಲಿ ಐಪಿಎಲ್‌ನಲ್ಲಿ ಅವರ ಪ್ರದರ್ಶನ ಕಳಪೆಯಾಗಿರುವುದರಿಂದ ಶಮಿ ಅವರ ಪುನರಾಗಮನದ ಸಾಧ್ಯತೆಗಳು ಕಡಿಮೆ ಎಂಬುದು ನಿಜ. ಆದರೆ ದೇಶೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಶಮಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2025-26ರ ರಣಜಿಯಲ್ಲಿ ಬಂಗಾಳ ತಂಡ ಸೆಮಿಫೈನಲ್ ತಲುಪುವಲ್ಲಿ ಶಮಿ ಪ್ರಮುಖ ಪಾತ್ರವಹಿಸಿದ್ದರು(PC-PTI).
ಆ ಸೀಸನ್ನಲ್ಲಿ ಶಮಿ ಆಡಿದ ಏಳು ಪಂದ್ಯಗಳಲ್ಲಿ 37 ವಿಕೆಟ್‌ಗಳನ್ನು ಪಡೆದಿದ್ದರು. ಹಾಗೆಯೇ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ಐಪಿಎಲ್‌ನಲ್ಲಿ ಅವರ ಪ್ರದರ್ಶನ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಅವರ ಆಯ್ಕೆಯ ಸಾಧ್ಯತೆಗಳು ದಟ್ಟವಾಗಿವೆ(PC-PTI).