Mohammad Shami Retirement: ನಿವೃತ್ತಿ ಬಗ್ಗೆ ಬಹುದೊಡ್ಡ ಘೋಷಣೆ ಮಾಡಿದ ಮೊಹಮ್ಮದ್ ಶಮಿ

|

Updated on: Feb 08, 2024 | 8:00 AM

Mohammad Shami Retirement News: ಟೀಮ್ ಇಂಡಿಯಾ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಇಂಜುರಿಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡುತ್ತಿಲ್ಲ. ಇದರ ನಡುವೆ ಸಂದರ್ಶನವೊಂದರಲ್ಲಿ ಶಮಿ ತಮ್ಮ ನಿವೃತ್ತಿ ಕುರಿತು ಮಾತನಾಡಿದ್ದಾರೆ. ಕ್ರಿಕೆಟ್​ಗೆ ತಾನು ಯಾವಾಗ ವಿದಾಯ ಘೋಷಿಸುತ್ತೇನೆ ಎಂದು ಹೇಳಿದ್ದಾರೆ.

1 / 7
ಭಾರತ ಕ್ರಿಕೆಟ್ ತಂಡ ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಲೀಗ್ ಅಡಿಯಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯ ಮುಕ್ತಾಯಗೊಂಡಿದ್ದು, ಉಭಯ ತಂಡಗಳು 1-1 ಅಂತರದ ಸಮಬಲ ಸಾಧಿಸಿದೆ. ಈ ಸರಣಿಯಲ್ಲಿ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಆಟ ಆಡುತ್ತಿಲ್ಲ.

2 / 7
ಮೊಹಮ್ಮದ್ ಶಮಿ ಅವರಿಗೆ ಈಗ 33 ವರ್ಷ ವಯಸ್ಸಾಗಿದ್ದು, ಅವರ ನಿವೃತ್ತಿಯೂ ಬಗ್ಗೆ ಹಲವು ವದಂತಿಗಳಿವೆ. ಇದಕ್ಕೀಗ ಶಮಿ ನೀಡಿರುವ ಹೇಳಿಕೆಯೊಂದು ಮತ್ತಷ್ಟು ಪುಷ್ಟಿ ನೀಡಿದೆ. ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಮೊಹಮ್ಮದ್ ಶಮಿ, ತಮ್ಮ ನಿವೃತ್ತಿಯ ಬಗ್ಗೆ ಮನದಾಳದ ಮಾತುಗಳನ್ನು ತೆರೆದಿಟ್ಟಿದ್ದಾರೆ.

3 / 7
"ನನಗೆ ಕ್ರಿಕೆಟ್ ಬೇಡ ಎಂದು ಬೇಸರವಾದಾಗ ಬೆಳಿಗ್ಗೆ ಎದ್ದು ನನ್ನ ನಿವೃತ್ತಿಯನ್ನು ಘೋಷಿಸುತ್ತೇನೆ. ಏಕೆಂದರೆ ನಾನು ಯಾವುದಕ್ಕೂ ಹೊರೆಯಾಗಲು ಬಯಸುವುದಿಲ್ಲ," ಎಂದು ಮೊಹಮ್ಮದ್ ಶಮಿ ವಿದಾಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಆದರೆ, ಇದು ಯಾವಾಗ ಸಂಭವಿಸಬಹುದು ಎಂದು ಹೇಳಿಲ್ಲ.

4 / 7
"ನನಗೆ ವೃತ್ತಿ ಅಥವಾ ಇನ್ನಾವುದರ ಬಗ್ಗೆ ವಿವರಿಸಲು ನನ್ನ ಜೊತೆ ಕುಟುಂಬದಲ್ಲಿ ಯಾರೂ ಇಲ್ಲ, ನಾನು ಬೆಳಿಗ್ಗೆ ಎದ್ದು ಮೈದಾನಕ್ಕೆ ಹೋಗಲು ಬಯಸುವುದಿಲ್ಲ ಎಂದು ಅನಿಸಿದಾಗ, ನಿವೃತ್ತಿಯಾಗುತ್ತಿದ್ದೇನೆ ಎಂದು ಟ್ವೀಟ್ ಮಾಡುತ್ತೇನೆ," ಎಂದು ಶಮಿ ನೇರವಾಗಿ ಹೇಳಿದ್ದಾರೆ. ಶಮಿ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

5 / 7
ಇದರ ನಡುವೆ ಶಮಿ ಜೀವನಾಧಾರಿತ ಚಿತ್ರ ಬರಲಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಆ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಬಯೋಪಿಕ್ ಕುರಿತ ಪ್ರಶ್ನೆಗೆ ಉತ್ತರಿಸಿದ ಶಮಿ, ''ಹೌದು, ನನ್ನ ಬಯೋಪಿಕ್ ಕೂಡ ಬರುತ್ತಿದೆ. ನಟ ಸಿಗದಿದ್ದರೆ ಕ್ರಿಕೆಟ್ ಬಿಟ್ಟು ನನ್ನದೇ ಬಯೋಪಿಕ್​ನಲ್ಲಿ ಕೆಲಸ ಮಾಡುತ್ತೇನೆ,'' ಎಂದು ಹೇಳಿದ್ದಾರೆ.

6 / 7
ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಅತ್ಯುತ್ತಮ ಬೌಲರ್ ಎಂದು ಸಾಬೀತುಪಡಿಸಿದ್ದರು. ವಿಶ್ವಕಪ್​ನಲ್ಲಿ ಶಮಿ ಮೊದಲ ಕೆಲವು ಪಂದ್ಯಗಳಲ್ಲಿ ಆಡಲಿಲ್ಲ, ಆದರೆ ನಂತರ ಅವರು ಏಕಾಂಗಿಯಾಗಿ ತಮ್ಮ ಸೂಕ್ಷ್ಮ ಬೌಲಿಂಗ್‌ನಿಂದ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ವಿಶ್ವಕಪ್‌ನಲ್ಲಿ ಇವರು 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

7 / 7
ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿ ಮೊಹಮ್ಮದ್ ಶಮಿ ಅಲಭ್ಯತೆ ಎದ್ದು ಕಾಣುತ್ತಿದೆ.