ನಾನು ಭಾರತೀಯ ಮುಸ್ಲಿಂ: ಪಾಕಿಸ್ತಾನ ಟ್ರೋಲಿಗರ ಮೈಚಳಿ ಬಿಡಿಸಿದ ಮೊಹಮ್ಮದ್ ಶಮಿ
Mohammed Shami Sajda: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಮೊಹಮ್ಮದ್ ಶಮಿ ಅವರ ಪ್ರದರ್ಶನವನ್ನು ಕ್ರಿಕೆಟ್ ಪಂಡಿತರು ಶ್ಲಾಘಿಸಿದರು. ಆದರೆ ಪಾಕಿಸ್ತಾನದಿಂದ ಮಾತ್ರ ಶಮಿ ಬಗ್ಗೆ ದ್ವೇಷಪೂರಿತ ಹೇಳಿಕೆಗಳು ಕೇಳಿಬಂದವು. ಅಂತಹ ಒಂದು ಸುಳ್ಳು ಸುದ್ದಿಗೆ ಇದೀಗ ಶಮಿ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
1 / 6
ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಕಳೆದ ಎರಡು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ 2023 ರ ಮೊದಲ 4 ಪಂದ್ಯಗಳಿಂದ ಹೊರಗುಳಿದ ನಂತರ, ತಂಡಕ್ಕೆ ಮರಳಿದ ಶಮಿ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಫೈನಲ್‌ಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.
2 / 6
ಮೊಹಮ್ಮದ್ ಶಮಿ ಅವರ ಪ್ರದರ್ಶನವನ್ನು ಕ್ರಿಕೆಟ್ ಪಂಡಿತರು ಶ್ಲಾಘಿಸಿದರು. ಆದರೆ ಪಾಕಿಸ್ತಾನದಿಂದ ಮಾತ್ರ ಶಮಿ ಬಗ್ಗೆ ದ್ವೇಷಪೂರಿತ ಹೇಳಿಕೆಗಳು ಮತ್ತು ತಪ್ಪು ಕಲ್ಪನೆಗಳು ಕೇಳಿಬಂದವು. ಅಂತಹ ಒಂದು ಸುಳ್ಳು ಸುದ್ದಿಗೆ ಇದೀಗ ಶಮಿ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
3 / 6
ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶಮಿ 5 ವಿಕೆಟ್ ಪಡೆದರು. 5ನೇ ವಿಕೆಟ್ ಪಡೆದ ಬಳಿಕ ಶಮಿ ಮೈದಾನದಲ್ಲಿ ಮಂಡಿಯೂರಿ ತಲೆಬಾಗಿ ಕುಳಿತರು. ಅವನ ಎರಡೂ ಕೈಗಳು ನೆಲದ ಮೇಲಿದ್ದವು. ನಂತರ ಎದ್ದು ನಿಂತರು. ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಪಾಕಿಸ್ತಾನಿ ಪತ್ರಕರ್ತರು ಮತ್ತು ಅಭಿಮಾನಿಗಳು, ಶಮಿ ಸಜ್ದಾ ಮಾಡಲು ಬಯಸಿದ್ದರು, ಆದರೆ ಅವರು ಭಾರತದಲ್ಲಿದ್ದ ಕಾರಣ ಮಾಡಲಿಲ್ಲ ಎಂದು ಹೇಳಿದ್ದರು.
4 / 6
ಕಳೆದ ಒಂದು ತಿಂಗಳಿಂದ ಈ ವಿಚಾರದ ಬಗ್ಗೆ ಏನನ್ನೂ ಹೇಳದ ಶಮಿ ಇದೀಗ ಸ್ಪಷ್ಟನೆ ನೀಡಿದ್ದಾರೆ. ನಾನು ಭಾರತೀಯ ಮುಸ್ಲಿಂ ಎಂದು ಹೆಮ್ಮೆಪಡುತ್ತೇನೆ. ಭಾರತದ ಯಾವುದೇ ವೇದಿಕೆಗೆ ಯಾವಾಗ ಬೇಕಾದರೂ ತಲೆಬಾಗಬಹುದು ಮತ್ತು ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಶಮಿ ಖಡಕ್ ಹೇಳಿದ್ದಾರೆ.
5 / 6
ಪಾಕಿಸ್ತಾನಿಗಳು ತೊಂದರೆ ಕೊಡುವುದರ ಬಗ್ಗೆ ಮಾತ್ರ ಯೋಚಿಸುತ್ತಾರೆ ಮತ್ತು ಗಾಸಿಪ್ ಮಾಡಲು ಇಷ್ಟಪಡುತ್ತಾರೆ ಎಂದು ಹೇಳುವ ಮೂಲಕ ಸುಳ್ಳು ಸುದ್ದಿ ಹರಿ ಬಿಡುತ್ತಿದ್ದ ಪಾಕಿಸ್ತಾನಿಗಳ ಬಾಯಿ ಮುಚ್ಚಿಸಿದ್ದಾರೆ. ಶಮಿ ಹೇಳಿಕೆ ಈಗ ಸಖತ್ ವೈರಲ್ ಆಗುತ್ತಿದೆ.
6 / 6
ಲಂಕಾ ವಿರುದ್ಧದ ಪಂದ್ಯದಲ್ಲಿ ಶಮಿ ಬೇಗನೆ 3 ವಿಕೆಟ್‌ಗಳನ್ನು ಕಿತ್ತಿದ್ದರಯ. ಅಲ್ಲದೆ ಮುಂದಿನ 2-3 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕೀಳಬೇಕು ಎಂದು ಪಣತೊಟ್ಟಿದ್ದರಂತೆ. ಇದಕ್ಕಾಗಿ ಅವರು ತಮ್ಮ ಮಿತಿಗಿಂತ ಹೆಚ್ಚು ಕಠಿಣವಾಗಿ ಬೌಲ್ ಮಾಡಿದ್ದಾರೆ. 6ನೇ ಓವರ್ನಲ್ಲಿ 5ನೇ ವಿಕೆಟ್ ಕೂಡ ಪಡೆದಿದ್ದಾರೆ. ಆಗ ಸುಸ್ತಾಗಿ ಮಂಡಿಯೂರಿ ಕೆಳಗೆ ಬಿದ್ದೆ ಎಂದು ಶಮಿ ಹೇಳಿದ್ದಾರೆ.
Published On - 10:52 am, Thu, 14 December 23