ಏಷ್ಯನ್ ಕ್ರಿಕೆಟ್​ನಲ್ಲಿ ಮೊಹ್ಸಿನ್ ನಖ್ವಿ ಅಧಿಕಾರಾವಧಿ ಇನ್ನೇಷ್ಟು ವರ್ಷ?

Updated on: Sep 14, 2026 | 2:46 PM

ಪಾಕಿಸ್ತಾನದ ಮೊಹ್ಸಿನ್ ನಖ್ವಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾಗಿರುವ ನಖ್ವಿ, ಎಸಿಸಿ ರೋಟೇಶನ್ ನಿಯಮದಡಿಯಲ್ಲಿ ಏಪ್ರಿಲ್ 3, 2025 ರಂದು ಈ ಹುದ್ದೆಗೇರಿದ್ದಾರೆ. ಅವರ ಅಧಿಕಾರಾವಧಿ 2 ವರ್ಷ. ಈ ಹಿಂದೆ ಭಾರತದ ಜಯ್ ಶಾ ಅತಿ ಹೆಚ್ಚು ಕಾಲ, ನಾಲ್ಕು ವರ್ಷಗಳವರೆಗೆ ಎಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ದಾಖಲೆ ಮಾಡಿದ್ದರು. ಬಿಸಿಸಿಐ ವಿರೋಧದಿಂದ ನಖ್ವಿ ಅಧಿಕಾರಾವಧಿ ವಿಸ್ತರಣೆಯಾಗದು.

1 / 5
ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಏಷ್ಯಾಕಪ್ ಗೆದ್ದಿದೆ. ಕಳೆದ ವರ್ಷ ಪುರುಷರ ತಂಡ, ಪಾಕಿಸ್ತಾನವನ್ನು ಸೋಲಿಸಿ ಏಷ್ಯಾಕಪ್ ಗೆದ್ದಿತ್ತು. ಆದರೆ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಇದೀಗ ಭಾರತ ಮಹಿಳಾ ತಂಡವೂ ಶ್ರೀಲಂಕಾವನ್ನು ಮಣಿಸಿ ಚಾಂಪಿಯನ್ ಆಯಿತು. ಆದರೆ ಮಹಿಳಾ ತಂಡವೂ ಮೊಹ್ಸಿನ್ ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸಿಲ್ಲ(PC-PTI).

ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಏಷ್ಯಾಕಪ್ ಗೆದ್ದಿದೆ. ಕಳೆದ ವರ್ಷ ಪುರುಷರ ತಂಡ, ಪಾಕಿಸ್ತಾನವನ್ನು ಸೋಲಿಸಿ ಏಷ್ಯಾಕಪ್ ಗೆದ್ದಿತ್ತು. ಆದರೆ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಇದೀಗ ಭಾರತ ಮಹಿಳಾ ತಂಡವೂ ಶ್ರೀಲಂಕಾವನ್ನು ಮಣಿಸಿ ಚಾಂಪಿಯನ್ ಆಯಿತು. ಆದರೆ ಮಹಿಳಾ ತಂಡವೂ ಮೊಹ್ಸಿನ್ ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸಿಲ್ಲ(PC-PTI).

2 / 5

ಹೀಗಾಗಿ ಟೀಂ ಇಂಡಿಯಾ ಚಾಂಪಿಯನ್ ಆಗಿದ್ದರೂ ಟ್ರೋಫಿ ಇಲ್ಲದೆ ಖಾಲಿ ಕೈಯಲ್ಲಿ ತಾಯ್ನಾಡಿಗೆ ಮರಳಬೇಕಿದೆ. ಹಾಗಿದ್ದರೆ ಟೀಂ ಇಂಡಿಯಾ ಇನ್ನೇಷ್ಟು ವರ್ಷ ಇದೇ ರೀತಿ ಚಾಂಪಿಯನ್ ಆದರೂ ಟ್ರೋಫಿ ಇಲ್ಲದೆ ಸಂಭ್ರಮಿಸಬೇಕು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿರಬಹುದು. ಅದಕ್ಕೆಲ್ಲ ಉತ್ತರ ಇಲ್ಲಿದೆ(PC-PTI).

3 / 5

ಪಾಕಿಸ್ತಾನ ಸರ್ಕಾರದಲ್ಲಿ ಸಚಿವರಾಗಿರುವ ಮೊಹ್ಸಿನ್ ನಖ್ವಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿರುವುದರ ಜೊತೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಅಧ್ಯಕ್ಷರೂ ಆಗಿದ್ದಾರೆ. 2025 ರ ಏಪ್ರಿಲ್ 3 ರಂದು ನಖ್ವಿ ಈ ಹುದ್ದೆಗೇರಿದ್ದಾರೆ. ಎಸಿಸಿಯ ರೋಟೇಶನ್ ನಿಯಮದಡಿಯಲ್ಲಿ ಈ ಹುದ್ದೆಗೇರಿರುವ ಮೊಹ್ಸಿನ್ ನಖ್ವಿಯ ಅಧಿಕಾರಾವಧಿ 2 ವರ್ಷಗಳವರೆಗೆ ಇರಲಿದೆ. ಅಂದರೆ 2025 ರಲ್ಲಿ ಈ ಹುದ್ದೆಗೇರಿರುವ ನಖ್ವಿ 2027 ರ ಏಪ್ರಿಲ್​ವರೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಅಧ್ಯಕ್ಷರಾಗಿ ಇರಲಿದ್ದಾರೆ(PC-PTI).

4 / 5

ಅದಾದ ಬಳಿಕ ಅವರು ಈ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಆ ನಂತರ ಕೌನ್ಸಿಲ್ ಸರದಿ ಪದ್ಧತಿಯನ್ನು ಅನುಸರಿಸಿ ಹೊಸಬರನ್ನು ಈ ಹುದ್ದೆಗೆ ನಾಮನಿರ್ದೇಶನ ಮಾಡುತ್ತದೆ. ಮೊಹ್ಸಿನ್​ ನಖ್ವಿ ಅವರಿಗಿಂತ ಮೊದಲು, ಪ್ರಸ್ತುತ ಐಸಿಸಿ ಅಧ್ಯಕ್ಷರಾಗಿರುವ ಭಾರತದ ಜಯ್ ಶಾ ಅವರು ನಾಲ್ಕು ವರ್ಷಗಳ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದರು. ಈ ಮೂಲಕ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನಲ್ಲಿ ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಸ್ಥರೆಂಬ ದಾಖಲೆ ಬರೆದಿದ್ದರು(PC-PTI).

5 / 5

ಸಾಮಾನ್ಯವಾಗಿ ಎಸಿಸಿ ಅಧ್ಯಕ್ಷರ ಅಧಿಕಾರಾವಧಿ ಎರಡು ವರ್ಷಗಳಾಗಿರುತ್ತದೆ. ಆದಾಗ್ಯೂ ಎಸಿಸಿಯ ಇತರ ಸದಸ್ಯರು ಸರ್ವಾನುಮತದ ಬೆಂಬಲ ನೀಡಿದ್ದರಿಂದ, ಜಯ್​ ಶಾ ಅವರ ಅಧಿಕಾರಾವಧಿಯನ್ನು 2024ರವರೆಗೆ ವಿಸ್ತರಿಸಲಾಗಿತ್ತು. ನಂತರ ಈ ಹುದ್ದೆಯು ಪಾಕಿಸ್ತಾನದ ನಖ್ವಿ ಅವರಿಗೆ ಲಭಿಸಿತ್ತು. ನಖ್ವಿ, ಬಿಸಿಸಿಐ ವಿರೋಧ ಕಟ್ಟಿಕೊಂಡಿರುವುದರಿಂದ ಅವರ ಅಧಿಕಾರಾವಧಿ ಮತ್ತಷ್ಟು ವಿಸ್ತರಿಸುವ ಸಾಧ್ಯತೆಗಳಿಲ್ಲ. ಏಕೆಂದರೆ ಬಿಸಿಸಿಐ ವಿರುದ್ಧವಾಗಿ ಯಾವ ಸದಸ್ಯರು ನಖ್ವಿ ಬೆಂಬಲಕ್ಕೆ ನಿಲ್ಲುವ ಧೈರ್ಯ ಮಾಡುವುದಿಲ್ಲ (PC-PTI).

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us