
ಈ ಹಿಂದೆ ಮಹಿಳಾ ಕ್ರಿಕೆಟಿಗರ ಪಂದ್ಯ ಇದ್ದರೆ ಅದನ್ನು ವೀಕ್ಷಿಸುತ್ತಿದ್ದ ಅಭಿಮಾಣಿಗಳ ಸಂಖ್ಯೆ ತೀರಾ ಕಡಿಮೆ ಇರುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಪುರುಷರ ಕ್ರಿಕೆಟ್ ಗೆ ಎಷ್ಟು ಬೇಡಿಕೆ ಇದೆಯೋ ಅದೇರೀತಿ ಮಹಿಳಾ ಕ್ರಿಕೆಟಿಗರಿಗೂ ಅಭಿಮಾನಿಗಳ ದಂಡೇ ಇದೆ. ಮಹಿಳಾ ಕ್ರಿಕೆಟಿಗರ ಆಟದ ಜೊತೆಗೆ ಅವರ ಸೌಂದರ್ಯಕ್ಕೂ ಜನರು ಮನಸೋತಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಈ ಪಟ್ಟಿಯಲ್ಲಿ ಮೊದಲಿಗರು. ಸ್ಮೃತಿ ಸೌಂದರ್ಯಕ್ಕೆ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ.

ಇಮ್ತಿಯಾಜ್ ಪಾಕಿಸ್ತಾನದ ಶ್ರೇಷ್ಠ ಆಲ್ ರೌಂಡರ್. ತನ್ನ ಅತ್ಯುತ್ತಮ ಕ್ರೀಡಾ ಮನೋಭಾವದ ಜೊತೆಗೆ ಕಯಾನಾ ತನ್ನ ಸೌಂದರ್ಯಕ್ಕಾಗಿಯೂ ಸುದ್ದಿಯಾಗದ್ದಾರೆ. ಹಾಗಾಗಿಯೇ ಇವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಇಂಗ್ಲೆಂಡ್ ಮಹಿಳಾ ತಂಡದ ಸಾರಾ ಟೇಲರ್ ಕೂಡ ನೋಡಲು ಸುಂದರವಾಗಿದ್ದಾರೆ. ಇವರು ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರೂ ಕೂಡ ಸಾಕಷ್ಟು ಫ್ಯಾನ್ಸ್ ಹೊಂದಿದ್ದಾರೆ.

ಆಸ್ಟ್ರೇಲಿಯದ ಅಲಿಸ್ಸಾ ಪೆರ್ರಿ ಅವರ ಸೌಂದರ್ಯಕ್ಕೆ ಕ್ಲೀನ್ ಬೌಲ್ಡ್ ಆಗದವರಿಲ್ಲ.

ಐರ್ಲೆಂಡ್ ನ ಸಿಸಿಲಿಯಾ ಜಾಯ್ಸ್ ಕೂಡ ತನ್ನ ಸೌಂದರ್ಯಕ್ಕಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದಾರೆ.
Published On - 10:42 am, Tue, 14 June 22