ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಟ್ರೆಂಟ್ ಬ್ರಿಡ್ಜ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ (ENG vs NZ) ಎರಡನೇ ಟೆಸ್ಟ್‌ನಲ್ಲಿ, ದಂತಕಥೆ ಬಲಗೈ ವೇಗದ ಬೌಲರ್ ಟಾಮ್ ಲ್ಯಾಥಮ್ ಅವರ ವಿಕೆಟ್ ಪಡೆಯುವುದರೊಂದಿಗೆ ಬೃಹತ್ ದಾಖಲೆಯನ್ನು ನಿರ್ಮಿಸಿದರು. ಈ ವಿಕೆಟ್ನೊಂದಿಗೆ ಆಂಡರ್ಸನ್ 650 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಆಂಡರ್ಸನ್ ಟೆಸ್ಟ್‌ನಲ್ಲಿ 650 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೂಲಕ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ.
ಈ ವಿಚಾರದಲ್ಲಿ ಶೇನ್ ವಾರ್ನ್ ಮತ್ತು ಮುತ್ತಯ್ಯ ಮುರಳೀಧರನ್ ಮಾತ್ರ ಆ್ಯಂಡರ್ಸನ್‌ಗಿಂತ ಮುಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮುರಳೀಧರನ್ 800 ಮತ್ತು ಶೇನ್ ವಾರ್ನ್ 708 ವಿಕೆಟ್ ಪಡೆದಿದ್ದಾರೆ.
ಗ್ಲೆನ್ ಮೆಕ್‌ಗ್ರಾತ್ ಜೇಮ್ಸ್ ಆಂಡರ್ಸನ್ ನಂತರ 563 ಟೆಸ್ಟ್ ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದಾರೆ. ಮೆಕ್‌ಗ್ರಾತ್ ಅವರ ದಾಖಲೆಯನ್ನು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ (543 ವಿಕೆಟ್) ಮುರಿದಿದ್ದಾರೆ.
ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಈ ಆಟಗಾರ 171ನೇ ಟೆಸ್ಟ್ ಆಡುತ್ತಿದ್ದಾರೆ. ಆಂಡರ್ಸನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಸುಮಾರು 37,000 ಎಸೆತಗಳನ್ನು ಎಸೆದಿದ್ದಾರೆ. ಅವರು ಇನ್ನಿಂಗ್ಸ್‌ನಲ್ಲಿ 31 ಬಾರಿ ಐದು ವಿಕೆಟ್‌ಗಳನ್ನು ಪಡೆದರೆ, 3 ಬಾರಿ 10 ವಿಕೆಟ್ ಪಡೆದಿದ್ದಾರೆ.
ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ಪರ 400, 500, 600, 650 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. ಇತ್ತೀಚಿನ ಆಶಸ್ ಸರಣಿಯ ನಂತರ ಆಂಡರ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದಾಗ್ಯೂ, ಸ್ಟೋಕ್ಸ್ ಟೆಸ್ಟ್ ತಂಡದ ನಾಯಕತ್ವ ವಹಿಸಿದ ತಕ್ಷಣ, ಆಂಡರ್ಸನ್ ಇಂಗ್ಲಿಷ್ ತಂಡಕ್ಕೆ ಮರಳಿದರು.
Published On - 7:44 pm, Mon, 13 June 22