IPL 2022: ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ 9 ವರ್ಷಗಳ ಹಳೆಯ ದಾಖಲೆ ಮುರಿದ ಧೋನಿ..!

|

Updated on: May 03, 2022 | 4:09 PM

MS Dhoni: ಐಪಿಎಲ್ 2022 ಪ್ರಾರಂಭವಾಗುವ ಮೊದಲು ಧೋನಿ ಸಿಎಸ್‌ಕೆ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ 8 ಪಂದ್ಯಗಳ ನಂತರ ಧೋನಿ ಮತ್ತೆ ತಂಡದ ನಾಯಕತ್ವ ವಹಿಸಿಕೊಂಡರು.

1 / 4
ಐಪಿಎಲ್‌ ಟೂರ್ನಿ 2008ರಿಂದ ಆರಂಭವಾಗಿದ್ದು, ಧೋನಿ ಆರಂಭವಾದಾಗಿನಿಂದ ತಂಡಗಳ ನಾಯಕರಾಗಿದ್ದಾರೆ. ಆದರೆ ಧೋನಿ 2017 ರ ಆವೃತ್ತಿಯಲ್ಲಿ ಮಾತ್ರ ಪುಣೆಯ ನಾಯಕತ್ವವನ್ನು ವಹಿಸಿಕೊಂಡಿರಲಿಲ್ಲ. ಅವರು ಇದುವರೆಗೆ 205 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, ಇದರಲ್ಲಿ 122 ಗೆಲುವುಗಳು ಸೇರಿವೆ.

2 / 4
ತಂಡ ನಿರೀಕ್ಷಿತ ಪ್ರದರ್ಶನ ನೀಡದೇ ಇದ್ದಾಗ ತಂಡವು ಋತುವಿನ ಮಧ್ಯದಲ್ಲಿ ಮತ್ತೊಮ್ಮೆ ಅಚ್ಚರಿ ಮೂಡಿಸಿತು. ಜಡೇಜಾ ನಾಯಕತ್ವದಿಂದ ಕೆಳಗಿಳಿದ ಕಾರಣ, ಧೋನಿ ಮತ್ತೊಮ್ಮೆ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯಿತು. ಈ ಎರಡನೇ ನಿರ್ಧಾರ ಐಪಿಎಲ್‌ನಲ್ಲೂ ದಾಖಲೆ ನಿರ್ಮಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ನಾಯಕತ್ವವನ್ನು ಎಂಎಸ್ ಧೋನಿ ವಹಿಸಿಕೊಂಡಿದ್ದರು.

3 / 4
ಈ ನಿಟ್ಟಿನಲ್ಲಿ ಮಾಜಿ ಅನುಭವಿ ಬ್ಯಾಟ್ಸ್​ಮನ್ ರಾಹುಲ್ ದ್ರಾವಿಡ್ ಅವರ 9 ವರ್ಷಗಳ ಹಳೆಯ ದಾಖಲೆಯನ್ನು ಧೋನಿ ಮುರಿದಿದ್ದಾರೆ. 2013ರಲ್ಲಿ ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಆಡಿದ್ದ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು. ಕೊನೆಯ ಪಂದ್ಯದ ಸಮಯದಲ್ಲಿ ದ್ರಾವಿಡ್​ಗೆ 40 ವರ್ಷ 268 ದಿನ ವಯಸ್ಸಾಗಿತ್ತು. ಈಗ ಧೋನಿ ವಯಸ್ಸು 40 ವರ್ಷ 298 ದಿನಗಳು.ಈ ಮೂಲಕ ಧೋನಿ ದ್ರಾವಿಡ್​ ದಾಖಲೆಯನ್ನು ಮುರಿದಿದ್ದಾರೆ.

4 / 4
ಧೋನಿ ನಾಯಕತ್ವ ವಹಿಸಿಕೊಂಡ ನಂತರ ಸತತ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಬಲಿಷ್ಠ ಹೈದರಾಬಾದ್ ತಂಡವನ್ನು ಸೋಲಿಸಿತ್ತು. ಈ ಪಂದ್ಯದಲ್ಲಿ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಆರಂಭಿಕ ಆಟಗಾರ ರುತುರಾಜ್ ದಾಖಲೆಯ 99 ರನ್ ಸಿಡಿಸಿದ್ದರು.

Published On - 3:50 pm, Tue, 3 May 22