CSK vs RR, IPL 2023: ಕೊನೆಯ ಬಾಲ್​ನಲ್ಲಿ ಸಿಕ್ಸ್ ಸಿಡಿಸಲು ಧೋನಿ ವಿಫಲ: ಚೆನ್ನೈ-ಆರ್​ಆರ್​ ಪಂದ್ಯದ ರೋಚಕ ಫೋಟೋ ನೋಡಿ

Updated on: Apr 13, 2023 | 7:38 AM

Chennai vs Rajastan: ಸಂದೀಪ್ ಶರ್ಮಾ ಅವರ ಮೊದಲ ಎರಡು ಬಾಲ್ ವೈಡ್ ಆಯಿತು. ನಂತರದ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ದ್ವಿತೀಯ ಎಸೆತದಲ್ಲಿ ಧೋನಿ ಸಿಕ್ಸರ್ ಸಿಡಿಸಿದರು. 3ನೇ ಎಸೆತದಲ್ಲೂ ಮತ್ತೊಂದು ಸಿಕ್ಸ್ ಬಾರಿಸಿ ಪಂದ್ಯವನ್ನು ಮತ್ತಷ್ಟು ರೋಚಕತೆ ಸೃಷ್ಟಿಸಿದರು.

1 / 8
ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಬುಧವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 3 ರನ್​ಗಳ ರೋಚಕ ಜಯ ಸಾಧಿಸಿತು.

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಬುಧವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 3 ರನ್​ಗಳ ರೋಚಕ ಜಯ ಸಾಧಿಸಿತು.

2 / 8

ಕೊನೆಯ 20ನೇ ಓವರ್​ನಲ್ಲಿ ಸಿಎಸ್​ಕೆ ಗೆಲುವಿಗೆ 21 ರನ್​ಗಳ ಅವಶ್ಯಕತೆಯಿತ್ತು. ಆರ್​ಆರ್ ಪರ ಸಂದೀಶ್ ಶರ್ಮಾ ಬೌಲರ್ ಆಗಿದ್ದರು. ಕ್ರೀಸ್​ನಲ್ಲಿ ಫಿನಿಶರ್ ಖ್ಯಾತಿಯ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಇದ್ದರು.

3 / 8

ಸಂದೀಪ್ ಅವರ ಮೊದಲ ಎರಡು ಬಾಲ್ ವೈಡ್ ಆಯಿತು. ನಂತರದ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ದ್ವಿತೀಯ ಎಸೆತದಲ್ಲಿ ಧೋನಿ ಸಿಕ್ಸರ್ ಸಿಡಿಸಿದರು. ಮೂರನೇ ಎಸೆತದಲ್ಲೂ ಮತ್ತೊಂದು ಸಿಕ್ಸ್ ಬಾರಿಸಿ ಪಂದ್ಯವನ್ನು ಮತ್ತಷ್ಟು ರೋಚಕತೆ ಸೃಷ್ಟಿಸಿದರು.

4 / 8

ಕೊನೆಯ 3 ಬಾಲ್​ನಲ್ಲಿ 7 ರನ್​ಗಳು ಬೇಕಾಗಿದ್ದವು. 4ನೇ ಎಸೆತ ಮತ್ತು 5ನೇ ಎಸೆತದಲ್ಲಿ ತಲಾ ಒಂದೊಂದು ರನ್ ಬಂತಷ್ಟೆ. ಕೊನೆಯ ಎಸೆತದಲ್ಲಿ 5 ರನ್ ಬೇಕಿದ್ದಾಗ ಸಂದೀಪ್ ಅದ್ಭುತ ಯಾರ್ಕರ್ ಮೂಲಕ ಧೋನಿ ಸಿಕ್ಸ್ ಸಿಡಿಸುವುದನ್ನು ತಡೆದರು.

5 / 8

ಚೆನ್ನೈ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸೋಲು ಕಂಡಿತು. ಧೋನಿ (ಅಜೇಯ 32)-ಜಡ್ಡು (ಅಜೇಯ 25) ಬರುವುದಕ್ಕೂ ಮುನ್ನ ಸಿಎಸ್​ಕೆ ಪರ ಡೆವೋನ್ ಕಾನ್ವೇ 50 ಹಾಗೂ ಅಜಿಂಕ್ಯಾ ರಹಾನೆ 31 ರನ್​ಗಳ ಕೊಡುಗೆ ನೀಡಿದ್ದರು.

6 / 8

ಚೆನ್ನೈ ಸೂಪರ್ ಕಿಂಗ್ಸ್ ಮಧ್ಯಮ ಓವರ್​ನಲ್ಲಿ ಕೊಂಚ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದರಿಂದ ಜಯ ಕೈತಪ್ಪಿತು. ರಾಜಸ್ಥಾನ್ ಪರ ಅಶ್ವಿನ್ ಹಾಗೂ ಚಹಲ್ 2 ವಿಕೆಟ್ ಪಡೆದರೆ, ಸಂದೀಪ್ ಶರ್ಮಾ ಹಾಗೂ ಝಂಪಾ ತಲಾ 1 ವಿಕೆಟ್ ಕಿತ್ತರು.

7 / 8

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. ಜೋಸ್ ಬಟ್ಲರ್ 52 ರನ್, ದೇವದತ್ ಪಡಿಕ್ಕಲ್ 38, ಆರ್. ಅಶ್ವಿನ್ ಹಾಗೂ ಹೆಟ್ಮೇರ್ ತಲಾ 30 ರನ್ ಸಿಡಿಸಿದರು.

8 / 8

ಸಿಎಸ್​ಕೆ ಪರ ಆಕಾಶ್ ಸಿಂಗ್, ತುಷಾರ್ ದೇಶ್​​ಪಾಂಡೆ ಹಾಗೂ ರವೀಂದ್ರ ಜಡೇಜಾ 2 ವಿಕೆಟ್ ಪಡೆದರು.

Published On - 7:38 am, Thu, 13 April 23

Loading...
Unable to load recommendations.
Follow Us