ಎಂಎಸ್ ಧೋನಿಗೆ 15 ಕೋಟಿ ರೂ. ವಂಚನೆ..! ಎಫ್‌ಐಆರ್ ದಾಖಲಿಸಿದ ಕ್ಯಾಪ್ಟನ್ ಕೂಲ್

|

Updated on: Jan 05, 2024 | 3:32 PM

MS Dhoni: ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗೆ ಅವರ ಮಾಜಿ ಉದ್ಯಮ ಪಾಲುದಾರರಿಂದಲೇ ಕೋಟಿಗಟ್ಟಲೆ ವಂಚನೆಯಾಗಿದೆ ಎಂದು ವರದಿಯಾಗಿದೆ. ಅಲ್ಲದೆ ಧೋನಿ ತಮ್ಮ ಮಾಜಿ ಬ್ಯುಸಿನೆಸ್ ಪಾಲುದಾರರು 15 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪ ಮಾಡಿ ನ್ಯಾಯಾಲಯದ ಮೊರೆ ಹೀಗಿದ್ದಾರೆ.

1 / 7
ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗೆ ಅವರ ಮಾಜಿ ಉದ್ಯಮ ಪಾಲುದಾರರಿಂದಲೇ ಕೋಟಿಗಟ್ಟಲೆ ವಂಚನೆಯಾಗಿದೆ ಎಂದು ವರದಿಯಾಗಿದೆ. ಅಲ್ಲದೆ ಧೋನಿ ತಮ್ಮ ಮಾಜಿ ಬ್ಯುಸಿನೆಸ್ ಪಾಲುದಾರರು 15 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪ ಮಾಡಿ ನ್ಯಾಯಾಲಯದ ಮೊರೆ ಹೀಗಿದ್ದಾರೆ.

2 / 7
ವರದಿಯ ಪ್ರಕಾರ ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಸೌಮ್ಯ ಬಿಸ್ವಾಸ್ ಮತ್ತು ಮಿಹಿರ್ ದಿವಾಕರ್ ವಿರುದ್ಧ ಧೋನಿ ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

3 / 7
ವಿಶ್ವ ಮಟ್ಟದಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಮಾಜಿ ಉದ್ಯಮ ಪಾಲುದಾರರಾದ ದಿವಾಕರ್ ಅವರು ಧೋನಿ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಮಿಹಿರ್ ದಿವಾಕರ್ ಅವರು ಒಪ್ಪಂದದಲ್ಲಿದ್ದ ಷರತ್ತುಗಳನ್ನು ಪಾಲಿಸಿಲ್ಲ ಎಂದು ದೂರಿನಲ್ಲಿ ಧೋನಿ ಉಲ್ಲೇಖಿಸಿದ್ದಾರೆ.

4 / 7
ಹಾಗೆಯೇ ದಿವಾಕರ್ ಅವರು ಅರ್ಕಾ ಸ್ಪೋರ್ಟ್ಸ್ ಫ್ರಾಂಚೈಸಿ ಶುಲ್ಕ ಮತ್ತು ಷೇರು ಲಾಭವನ್ನು ಧೋನಿಯವರಿಗೆ ಪಾವತಿಸಿಲ್ಲ. ಹೀಗಾಗಿ ಧೋನಿ 15 ಆಗಸ್ಟ್ 2021 ರಂದು ಅರ್ಕಾ ಸ್ಪೋರ್ಟ್ಸ್‌ಗೆ ನೋಟಿಸ್ ಕಳುಹಿಸಿದ್ದರು. ಆ ಬಳಿಕ ಅರ್ಕಾ ಸ್ಪೋರ್ಟ್ಸ್‌ಗೆ ನೀಡಲಾಗಿದ್ದ ಹಕ್ಕುಗಳನ್ನು ರದ್ದುಗೊಳಿಸಲಾಗಿತ್ತು.

5 / 7
ಆ ಬಳಿಕ ಧೋನಿ ತಮ್ಮ ಮಾಜಿ ಉದ್ಯಮ ಪಾಲುದಾರರ ವಿರುದ್ಧ ಹಲವಾರು ಬಾರಿ ನೋಟಿಸ್ ಕಳುಹಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ವಿಧಿ ಅಸೋಸಿಯೇಟ್ಸ್ ಮೂಲಕ ಎಂಎಸ್ ಧೋನಿ ಅವರನ್ನು ಪ್ರತಿನಿಧಿಸುತ್ತಿರುವ ದಯಾನಂದ್ ಸಿಂಗ್ ಈ ಮಾಹಿತಿ ನೀಡಿದ್ದಾರೆ.

6 / 7
ಇನ್ನು ಧೋನಿಯ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ಕ್ಯಾಪ್ಟನ್ ಕೂಲ್, ಇತ್ತೀಚೆಗೆ ದುಬೈನಲ್ಲಿ ತಮ್ಮ ಕುಟುಂಬದೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡಿದ್ದರು. ಪ್ರವಾಸದ ವೇಳೆ ಧೋನಿ ಜೊತೆ ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೂಡ ಕಾಣಿಸಿಕೊಂಡಿದ್ದರು.

7 / 7
ಧೋನಿ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ದುಬೈನಲ್ಲಿ ಕ್ರಿಸ್ಮಸ್ ಆಚರಿಸಿದ್ದರು. ಡಿಸೆಂಬರ್ 19 ರಂದು ಯುಎಇಯಲ್ಲಿ ಮೊದಲ ಬಾರಿಗೆ ನಡೆದ ಐಪಿಎಲ್ 2024 ಮಿನಿ ಹರಾಜಿಗಾಗಿ ದುಬೈಗೆ ಆಗಮಿಸಿದ ನಂತರ ಪಂತ್ ಎಂಎಸ್ ಧೋನಿಯೊಂದಿಗೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.