MS Dhoni: ಟೀಮ್ ಇಂಡಿಯಾ ಸೇರಿಕೊಂಡ ಎಂ. ಎಸ್ ಧೋನಿ: ಗ್ರೌಂಡ್ನಲ್ಲಿ ಆಟಗಾರರಿಗೆ ತರಬೇತಿ ಶುರು
TV9 Web | Updated By: Vinay Bhat
Updated on:
Oct 18, 2021 | 11:26 AM
Warm-up Match India vs England: ಟೀಮ್ ಇಂಡಿಯಾ ಮಾಜಿ ನಾಯಕ ಎಂ. ಎಸ್. ಧೋನಿ ಹೊಸ ಮಾರ್ಗದರ್ಶಕರಾಗಿ ಕೋಚ್ ರವಿಶಾಸ್ತ್ರಿ ಮತ್ತು ತಂಡದ ಸಹಾಯಕ ಸಿಬ್ಬಂದಿಯೊಂದಿಗೆ ಸೇರಿ ತಂಡಕ್ಕೆ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.
1 / 7
ಇಂದು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇಂಗ್ಲೆಂಡ್ (India vs England) ವಿರುದ್ಧ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ದುಬೈನ ಐಸಿಸಿ ಕ್ರಿಕೆಟ್ ಅಕಾಡೆಮಿ ಗ್ರೌಂಡ್ನಲ್ಲಿ ಈ ಪಂದ್ಯ ನಡೆಯಲಿದ್ದು ಸಂಜೆ 7:30ಕ್ಕೆ ಶುರುವಾಗಲಿದೆ.
2 / 7
ಎಲ್ಲಕ್ಕಿಂತ ಹೆಚ್ಚಾಗಿ ಟೀಮ್ ಇಂಡಿಯಾ ಮಾಜಿ ನಾಯಕ ಎಂ. ಎಸ್. ಧೋನಿ ಹೊಸ ಮಾರ್ಗದರ್ಶಕರಾಗಿ ಕೋಚ್ ರವಿಶಾಸ್ತ್ರಿ ಮತ್ತು ತಂಡದ ಸಹಾಯಕ ಸಿಬ್ಬಂದಿಯೊಂದಿಗೆ ಸೇರಿ ತಂಡಕ್ಕೆ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.
3 / 7
ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರಗಳಲ್ಲಿ, ಧೋನಿ ಭಾರತ ಸಹಾಯಕ ಸಿಬ್ಬಂದಿಯೊಂದಿಗೆ ಚಾಟ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮುಖ್ಯ ಕೋಚ್ ರವಿ ಶಾಸ್ತ್ರಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ವಿಕ್ರಮ್ ರಾಥೌರ್ ಮತ್ತು ಭರತ್ ಅರುಣ್ ಜೊತೆಗೆ ಧೋನಿ ಮಾತುಕತೆಯಲ್ಲಿ ತೊಡಗಿದ್ದಾರೆ.
4 / 7
ಟೀಮ್ ಇಂಡಿಯಾದ ಎಲ್ಲ ಆಟಗಾರರಿಗೆ ಈ ಅಭ್ಯಾಸ ಪಂದ್ಯ ಅಗ್ನಿಪರೀಕ್ಷೆಯಾಗಿದೆ. ಅಕ್ಟೋಬರ್ 24ರಂದು ಪಾಕಿಸ್ತಾನದ ಎದುರು ತನ್ನ ಅಭಿಯಾನ ಆರಂಭಿಸಲಿರುವ ಭಾರತ ತಂಡವು ಹನ್ನೊಂದರ ಬಳಗವನ್ನು ಈ ಅಭ್ಯಾಸ ಪಂದ್ಯದ ಮೂಲಕ ನಿರ್ಧರಿಸಬೇಕಿದೆ.
5 / 7
ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಹೊಸ ಸಮವಸ್ತ್ರದೊಂದಿಗೆ ಕಣಕ್ಕಿಳಿಯಲಿದೆ. ಹೊಸ ಸಮವಸ್ತ್ರದೊಂದಿಗೆ ಭಾರತ ತಂಡ ಶುಭಾರಂಭ ಮಾಡುವುದೇ ಎಂಬುದನ್ನು ತಿಳಿಯಲು ಕ್ರಿಕೆಟ್ ಪ್ರಿಯರು ಬಹಳಾ ಕಾತುರದಿಂದ ಎದುರು ನೋಡುತ್ತಿದ್ದಾರೆ.
6 / 7
ಭಾರತ ಹಾಗೂ ಇಂಗ್ಲೆಂಡ್ ನಡುವಣ ಅಭ್ಯಾಸ ಪಂದ್ಯ ದುಬೈನಲ್ಲಿರುವ ಐಸಿಸಿ ಅಕಾಡೆಮಿ ಗ್ರೌಂಡ್ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.
7 / 7
ಭಾರತ ಹಾಗೂ ಇಂಗ್ಲೆಂಡ್ ನಡುವಣ ಅಭ್ಯಾಸ ಪಂದ್ಯದ ನೇರಪ್ರಸಾರವನ್ನು ಸ್ಟಾರ್ ಸ್ಫೋರ್ಸ್ಟ್ ನೆಟ್ವರ್ಕ್ ಮತ್ತು ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.