IND vs SA: ಟೀಮ್ ಇಂಡಿಯಾ ಆಟಗಾರರ ಜೊತೆ ಫ್ಲೈಟ್ನಲ್ಲಿದ್ದ ಈ ಹುಡುಗಿ ಯಾರು ಗೊತ್ತೇ?
Mystery girl Rajal Arora: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮಧ್ಯೆ ರಿಂಕು ಸಿಂಗ್ ಶೇರ್ ಮಾಡಿರುವ ಫೋಟೋದಲ್ಲಿ ಓರ್ವ ಮಹಿಳೆಯೂ ಕಾಣಿಸಿದ್ದಾರೆ. ಆ ಫೋಟೋವನ್ನು ನೋಡಿದ ತಕ್ಷಣ ಅವರು ಯಾರು ಎಂದು ಅನೇಕರು ಹುಡುಕುತ್ತಿದ್ದಾರೆ. ಈ ಫೋಟೋದಲ್ಲಿರುವ ಮಹಿಳೆಯ ಹೆಸರು ರಾಜಲ್ ಅರೋರಾ.
1 / 6
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್, ರುತುರಾಜ್, ಅರ್ಷದೀಪ್ ಸಿಂಗ್, ತಿಲಕ್ ವರ್ಮಾ ಸೇರಿದಂತೆ ಯಂಗ್ ಇಂಡಿಯಾ ಈಗಾಗಲೇ ಹರಿಣಗಳ ನಾಡಿಗೆ ತಲುಪಿದೆ. ಡಿಸೆಂಬರ್ 10 ರಿಂದ ಭಾರತ- ದಕ್ಷಿಣ ಆಫ್ರಿಕಾ ಟಿ20 ಸರಣಿ ಆರಂಭವಾಗಲಿದೆ.
2 / 6
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಮ್ ಇಂಡಿಯಾ ಆಟಗಾರ ದಕ್ಷಿಣ ಆಫ್ರಿಕಾಕ್ಕೆ ತಲುಪಿದ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಭಾರತೀಯ ಆಟಗಾರರು ಕೂಡ ತಮ್ಮ ಸಾಮಾಜಿಕ ತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೈಕಿ ರಿಂಕು ಸಿಂಗ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ತಂಡದ ಸಹ ಆಟಗಾರರೊಂದಿಗೆ ವಿಮಾನದಲ್ಲಿರುವ ಚಿತ್ರವನ್ನು ಹಂಚಿಕೊಂಡಿದ್ದು ಭಾರೀ ವೈರಲ್ ಆಗಿದೆ.
3 / 6
ರಿಂಕು ಸಿಂಗ್ ಶೇರ್ ಮಾಡಿರುವ ಫೋಟೋದಲ್ಲಿ ಓರ್ವ ಮಹಿಳೆಯೂ ಕಾಣಿಸಿದ್ದಾರೆ. ಆ ಫೋಟೋವನ್ನು ನೋಡಿದ ತಕ್ಷಣ ಅವರು ಯಾರು ಎಂದು ಅನೇಕರು ಹುಡುಕುತ್ತಿದ್ದಾರೆ. ಈ ಫೋಟೋದಲ್ಲಿ ರಿಂಕು, ಕುಲ್ದದೀಪ್ ಯಾದವ್, ತಿಲಕ್ ವರ್ಮಾ, ಅರ್ಶ್ದೀಪ್ ಸಿಂಗ್, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಇತರ ಇಬ್ಬರು ಸಹಾಯಕ ಸಿಬ್ಬಂದಿ ಇದ್ದಾರೆ.
4 / 6
ಇವರೊಂದಿಗೆ ಮಹಿಳೆಯೂ ಕಾಣಿಸಿಕೊಂಡಿದ್ದಾರೆ. ಇವರು ರಿಂಕುವಿನ ಗೆಳತಿಯೇ? ಎಂದು ನೆಟ್ಟಿಗರು ಪ್ರಶ್ನೆಗಳನ್ನು ಎತ್ತಿದ್ದಾರೆ. ಇದಲ್ಲದೆ, ಅವರು ಏರ್‌ಲೈನ್ಸ್‌ನ ಯಾರಾದರೂ ಇರಬಹುದು ಎಂದು ಹೇಳಿತ್ತಿದ್ದಾರೆ. ಈ ಫೋಟೋದಲ್ಲಿರುವ ಮಹಿಳೆಯ ಹೆಸರು ರಾಜಲ್ ಅರೋರಾ.
5 / 6
ರಾಜಲ್ ಅರೋರಾ ಭಾರತೀಯ ತಂಡ ಮತ್ತು ಐಪಿಎಲ್‌ನ ಡಿಜಿಟಲ್ ಮತ್ತು ಮೀಡಿಯಾ ಮ್ಯಾನೇಜರ್ ಆಗಿದ್ದಾರೆ. ಇವರು ಇನ್ಸ್ಟಾಗ್ರಾಮ್ ಮತ್ತು ಎಕ್ಸ್ನಲ್ಲಿ ಸದಾ ಸಕ್ರಿಯರಾಗಿದ್ದಾರೆ. ರಾಜಲ್ ಕಳೆದ 8 ವರ್ಷಗಳಿಂದ ಬಿಸಿಸಿಐ ಜೊತೆ ಕೆಲಸ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವರ ಫಾಲೋವರ್ಸ್ 60 ಸಾವಿರದ ಸಮೀಪವಿದೆ.
6 / 6
ರಾಜಲ್ ಅರೋರಾ ಪುಣೆಯ ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಮತ್ತು ಕಮ್ಯುನಿಕೇಷನ್‌ನಿಂದ ಪದವಿ ಪಡೆದಿದ್ದಾರೆ. ರಾಜಲ್ ಶಾಲೆಯಲ್ಲಿದ್ದಾಗ ಬಾಸ್ಕೆಟ್ ಬಾಲ್ ಆಡುತ್ತಿದ್ದರು. ಅವರು 2015 ರಿಂದ ಬಿಸಿಸಿಐಗಾಗಿ ಕೆಲಸ ಮಾಡುತ್ತಿದ್ದಾರೆ. ರಾಜಲ್ ಅರೋರಾ ಈ ಹಿಂದೆ ಹಲವಾರು ಪ್ರವಾಸಗಳಲ್ಲಿ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜೊತೆ ಕೂಡ ಕಾಣಿಸಿಕೊಂಡಿದ್ದಾರೆ.