
ಐಪಿಎಲ್ನಲ್ಲಿ ತಂಡಗಳಿಗೆ ಮಿಸ್ಟರಿ ಗರ್ಲ್ಗಳು ಸುದ್ದಿಯಾಗೋದು ಸಾಮಾನ್ಯ. ಈ ಬಾರಿಯಂತೂ ಹಲವು ಯುವತಿಯರನ್ನು ಕ್ರಿಕೆಟ್ ಪ್ರೇಮಿಗಳು ನೋಡಿ ಅವರ್ಯಾರು ಎಂದು ತಲೆಕೆಡಿಸಿಕೊಂಡಿದ್ದಿದೆ. ಕಳೆದ ವರ್ಷ ಆರ್ಸಿಬಿಗೆ ಚೀರ್ ಮಾಡಿದ್ದ ದೀಪಿಕಾ ಘೋಸ್, ಎಸ್ಆರ್ಹೆಚ್ನ ಕವಿಯಾ ಮಾರನ್ ಮೊದಲಾದವರು ಕ್ಯಾಮೆರಾ ಕಣ್ಣಿಗೆ ಮೊದಲ ಬಾರಿಗೆ ಬಿದ್ದಾಗ ಸಖತ್ ಸುದ್ದಿಯಾಗಿದ್ದರು. ಈ ಪಟ್ಟಿಗೆ ಹೊಸ ಸೇರ್ಪಡೆ ಚೆನ್ನೈ ಸೂಪರ್ ಕಿಂಗ್ಸ್ಗೆ ಸಪೋರ್ಟ್ ಮಾಡ್ತಿದ್ದ ಈ ಯುವತಿ. IPL 2022 ರಲ್ಲಿ ಚೆನ್ನೈ ತಂಡದ ಪಂದ್ಯಗಳಲ್ಲಿ ಈ ಯುವತಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸಿಎಸ್ಕೆ ಬೆಂಬಲ ನೀಡಿದ್ದಾರೆ. ನೆಟ್ಟಿಗರು ಕುತೂಹಲದಿಂದ ಯುವತಿಯ ಪೂರ್ವಾಪರಗಳನ್ನು ಹುಡುಕಾಡಿದ್ದಾರೆ. ಅವರ ಪರಿಚಯ ಇಲ್ಲಿದೆ. ಅವರ ಹೆಸರು ಶೃತಿ ತುಲಿ. ಮಾಡೆಲ್ ಹಾಗೂ ನಟಿಯಾಗಿ ಅವರು ಗುರುತಿಸಿಕೊಂಡಿದ್ದಾರೆ.

ಹಳದಿ ಬಣ್ಣದ ಟಾಪ್ ಧರಿಸಿ ಮಿಂಚುತ್ತಿದ್ದ ಶ್ರುತಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ಗೆ ಚೀರ್ ಮಾಡುತ್ತಿದ್ದರು.

ಇತ್ತೀಚೆಗೆ ಚೆನ್ನೈ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಶ್ರುತಿ ಎಲ್ಲರ ಗಮನ ಸೆಳೆದಿದ್ದರು. ಅಂಬಾಟಿ ರಾಯುಡು ಸಿಕ್ಸರ್ ಹೊಡೆದಾಗ ಶ್ರುತಿಯವರ ಸಂಭ್ರಮ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.

ಅಮೃತಸರ ಮೂಲದ ಶ್ರುತಿ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ಇನ್ಸ್ಟಾಗ್ರಾಂನಲ್ಲಿ ಸುಮಾರು 1.28 ಲಕ್ಷ ಅಭಿಮಾನಿ ಬಳಗವೂ ಇದೆ. 2013ರಲ್ಲಿ ಮಿಸ್ ಇಂಡಿಯಾ ದಿವಾ ಸೌಂದರ್ಯ ಸ್ಪರ್ಧೆಯಲ್ಲಿ ರೂಪದರ್ಶಿಯಾಗಿ ಮಾಡೆಲಿಂಗ್ ಕ್ಷೇತ್ರಕ್ಕೆ ಅವರು ಕಾಲಿಟ್ಟಿದ್ದರು.

ಶ್ರುತಿ ಬಿಗ್ಬಾಸ್ 13ರ ಸ್ಪರ್ಧಿ ಆಸಿಮ್ ರಿಯಾಜ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ನಟಿ ನಿರಾಕರಿಸಿದ್ದಾರೆ. ಅದಾಗ್ಯೂ ತಮ್ಮ ಸಂಬಂಧ ಸ್ನೇಹಕ್ಕಿಂತ ಉತ್ತಮವಾಗಿದೆ ಎಂದಿರುವ ಶ್ರುತಿ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.

ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದಿದ್ದ ಶ್ರುತಿ ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಬೋಲ್ಡ್ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಅವರು ಸಖತ್ ಸುದ್ದಿಯಲ್ಲಿರುತ್ತಾರೆ. ಇದೀಗ ಐಪಿಎಲ್ ಮೂಲಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.