Namibia vs Karnataka: ನಮೀಬಿಯಾ ವಿರುದ್ಧ ಸರಣಿ ಗೆದ್ದು ಬೀಗಿದ ಕರ್ನಾಟಕ

Edited By:

Updated on: Jun 12, 2023 | 6:23 PM

Namibia vs Karnataka: ವಿಂಡ್​ಹೋಕ್​ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಸರಣಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು.

1 / 6
Namibia vs Karnataka: ನಮೀಬಿಯಾ ಹಾಗೂ ಕರ್ನಾಟಕ ನಡುವಣ 5 ಪಂದ್ಯಗಳ ಏಕದಿನ ಸರಣಿಯು ಮುಕ್ತಾಯಗೊಂಡಿದೆ. ಈ ಸರಣಿಯನ್ನು 3-2 ಅಂತರದಿಂದ ಗೆಲ್ಲುವ ಮೂಲಕ ಕರ್ನಾಟಕ ತಂಡವು ಟ್ರೋಫಿಯನ್ನು ಮುಡಿಗೇರಿಕೊಂಡಿದೆ.

Namibia vs Karnataka: ನಮೀಬಿಯಾ ಹಾಗೂ ಕರ್ನಾಟಕ ನಡುವಣ 5 ಪಂದ್ಯಗಳ ಏಕದಿನ ಸರಣಿಯು ಮುಕ್ತಾಯಗೊಂಡಿದೆ. ಈ ಸರಣಿಯನ್ನು 3-2 ಅಂತರದಿಂದ ಗೆಲ್ಲುವ ಮೂಲಕ ಕರ್ನಾಟಕ ತಂಡವು ಟ್ರೋಫಿಯನ್ನು ಮುಡಿಗೇರಿಕೊಂಡಿದೆ.

2 / 6

ವಿಂಡ್​ಹೋಕ್​ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಸರಣಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ 2ನೇ ಏಕದಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 5 ವಿಕೆಟ್​ಗಳಿಂದ ಸೋಲಿಸಿ ನಮೀಬಿಯಾ ಸಮಬಲ ಸಾಧಿಸಿತ್ತು.

3 / 6

ಆದರೆ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕರ್ನಾಟಕ ಮತ್ತೊಮ್ಮೆ 9 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತು. ಹಾಗೆಯೇ 4ನೇ ಏಕದಿನ ಪಂದ್ಯದಲ್ಲಿ ಆತಿಥೇಯರನ್ನು 5 ವಿಕೆಟ್​ಗಳಿಂದ ಬಗ್ಗು ಬಡಿದು 3-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು.

4 / 6

ಇದಾಗ್ಯೂ 5ನೇ ಏಕದಿನ ಪಂದ್ಯದಲ್ಲಿ ನಮೀಬಿಯಾ ತಂಡವು 5 ವಿಕೆಟ್​ಗಳ ಜಯ ಸಾಧಿಸಿದೆ. ಅತ್ತ ಐದು ಪಂದ್ಯಗಳಲ್ಲಿ 3 ಜಯ ಸಾಧಿಸುವ ಮೂಲಕ ರಾಷ್ಟ್ರೀಯ ತಂಡವನ್ನು ಮಣಿಸಿ ಕರ್ನಾಟಕ ತಂಡವು ಸರಣಿಯನ್ನು ತನ್ನದಾಗಿಸಿಕೊಂಡಿದೆ.

5 / 6

ನಮೀಬಿಯಾ ವಿರುದ್ಧ ಸರಣಿ ಆಡಿದ ಕರ್ನಾಟಕ ಏಕದಿನ ತಂಡ: ರವಿಕುಮಾರ್ ಸಮರ್ಥ್ (ನಾಯಕ), ವಿಶಾಲ್ ಓನಾಟ್, ನಿಕಿನ್ ಜೋಸ್, ಕೆವಿ ಸಿದ್ಧಾರ್ಥ್, ಕಿಶನ್ ಬಿದರೆ, ಕೃತಿಕ್ ಕೃಷ್ಣ, ಶುಭಾಂಗ್ ಹೆಗ್ಡೆ, ವೈಶಾಖ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಅನೀಶ್ವರ್ ಗೌತಮ್, ಲೋಚನ್ ಅಪ್ಪಣ್ಣ, ಚೇತನ್ ಎಲ್ಆರ್, ಆದಿತ್ಯ ಗೋಯಲ್, ರಿಷಿ ಬೊಪ್ಪಣ್ಣ.

6 / 6

ನಮೀಬಿಯಾ ಏಕದಿನ ತಂಡ: ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಶಾನ್ ಫೌಚೆ , ನಿಕೋಲಾಸ್ ಡೇವಿನ್ , ಮೈಕೆಲ್ ವ್ಯಾನ್ ಲಿಂಗೆನ್ , ಮಿಚೌ ಡು ಪ್ರೀಜ್ , ಜಾನ್ ಫ್ರಿಲಿಂಕ್, ಗೆರ್ಹಾರ್ಡ್ ಜಾನ್ಸ್ ವ್ಯಾನ್ ರೆನ್ಸ್‌ಬರ್ಗ್ , ಝೇನ್ ಗ್ರೀನ್ (ವಿಕೆಟ್ ಕೀಪರ್) , ಪಿಕ್ಕಿ ಯಾ ಫ್ರಾನ್ಸ್ , ಬರ್ನಾರ್ಡ್ ಸ್ಕೋಲ್ಟ್ಜ್ , ಕಾರ್ಲ್ ಬಿರ್ಕೆನ್‌ಸ್ಟಾಕ್ , ಬೆನ್ ಶಿಕೊಂಗೊ, ಹ್ಯಾಂಡ್ರೆ ಕ್ಲಾಜಿಂಗೆ, ಸ್ಟೀಫನ್ ಬಾರ್ಡ್

Loading...
Unable to load recommendations.
Follow Us