
ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆಯಲಿರುವ ಭಾರತ-ಪಾಕ್ ನಡುವಣ ಪಂದ್ಯದಲ್ಲಿ ಯುವ ವೇಗಿ ಪದಾರ್ಪಣೆ ಮಾಡಲಿದ್ದಾರೆ.

19 ವರ್ಷದ ಯುವ ವೇಗಿ ನಸೀಮ್ ಶಾ ಟೀಮ್ ಇಂಡಿಯಾ ವಿರುದ್ದದ ಪಂದ್ಯದಲ್ಲಿ ಪಾಕ್ ಪರ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬುದನ್ನು ಪಾಕ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.

ಇದರೊಂದಿಗೆ ಪಾಕಿಸ್ತಾನ್ ಹೊಸ ಅಸ್ತ್ರದೊಂದಿಗೆ ಟೀಮ್ ಇಂಡಿಯಾ ವಿರುದ್ದ ಆಡಲಿರುವುದು ಖಚಿತವಾಗಿದೆ. ಏಕೆಂದರೆ ತಂಡದಲ್ಲಿದ್ದ ಪ್ರಮುಖ ವೇಗಿಗಳಾದ ಶಾಹೀನ್ ಅಫ್ರಿದಿ ಹಾಗೂ ವಾಸಿಂ ಜೂನಿಯರ್ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಹೀಗಾಗಿ ಯುವ ವೇಗಿಯನ್ನು ಪ್ಲೇಯಿಂಗ್ ಇಲೆವೆನ್ಗೆ ಸೇರಿಸಲು ಪಾಕ್ ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಅದರಂತೆ ಟೀಮ್ ಇಂಡಿಯಾ ಪರ ನಸೀಂ ಶಾ ಕಣಕ್ಕಿಳಿಯಲಿದ್ದಾರೆ.

ಈಗಾಗಲೇ ಪಾಕಿಸ್ತಾನ್ ಪರ 13 ಟೆಸ್ಟ್ ಪಂದ್ಯವಾಡಿರುವ ನಸೀಂ 33 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 3 ಏಕದಿನ ಪಂದ್ಯಗಳಿಂದ 10 ವಿಕೆಟ್ ಉರುಳಿಸಿದ್ದಾರೆ. ಇದೀಗ ಮಹತ್ವದ ಪಂದ್ಯದ ಮೂಲಕ ಎಂಟ್ರಿ ಕೊಡುತ್ತಿರುವ ನಸೀಂ ಶಾ ಟೀಮ್ ಇಂಡಿಯಾ ಪಾಲಿಗೆ ಕಂಟಕವಾಗಲಿದ್ದಾರಾ ಕಾದು ನೋಡಬೇಕಿದೆ.
Published On - 6:47 pm, Sun, 28 August 22