ಅತ್ಯಾಚಾರ ಪ್ರಕರಣದಲ್ಲಿ ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ 8 ವರ್ಷ ಶಿಕ್ಷೆ! ಭಾರೀ ದಂಡ
Sandeep Lamichhane: ಅತ್ಯಾಚಾರ ಪ್ರಕರಣದಲ್ಲಿ ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆ ದೋಷಿ ಎಂದು ಸಾಬೀತಾಗಿದ್ದು, ಅವರಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕಠ್ಮಂಡು ಜಿಲ್ಲಾ ನ್ಯಾಯಾಲಯ ಸಂದೀಪ್ಗೆ ಶಿಕ್ಷೆಯನ್ನು ಪ್ರಕಟಿಸಿದ್ದು, ಶಿಕ್ಷೆಯ ಜೊತೆಗೆ ಸಂದೀಪ್ 3 ಲಕ್ಷ ರೂಪಾಯಿಗಳನ್ನು ದಂಡದ ರೂಪದಲ್ಲಿ ಕೋರ್ಟಿಗೆ ಪಾವತಿಸಬೇಕಾಗುತ್ತದೆ.
1 / 6
ಅತ್ಯಾಚಾರ ಪ್ರಕರಣದಲ್ಲಿ ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆ ದೋಷಿ ಎಂದು ಸಾಬೀತಾಗಿದ್ದು, ಅವರಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕಠ್ಮಂಡು ಜಿಲ್ಲಾ ನ್ಯಾಯಾಲಯ ಸಂದೀಪ್ಗೆ ಶಿಕ್ಷೆಯನ್ನು ಪ್ರಕಟಿಸಿದ್ದು, ಶಿಕ್ಷೆಯ ಜೊತೆಗೆ ಸಂದೀಪ್ 3 ಲಕ್ಷ ರೂಪಾಯಿಗಳನ್ನು ದಂಡದ ರೂಪದಲ್ಲಿ ಕೋರ್ಟಿಗೆ ಪಾವತಿಸಬೇಕಾಗುತ್ತದೆ.
2 / 6
ಹಾಗೆಯೇ ಸಂತ್ರಸ್ತೆಗೆ 2 ಲಕ್ಷ ರೂಪಾಯಿಗಳನ್ನು (1.24 ಲಕ್ಷ ಭಾರತೀಯ ರೂಪಾಯಿ) ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯದ ಅಧಿಕಾರಿ ಚಂದ್ರಪ್ರಸಾದ್ ಪಂಥಿ ಈ ಮಾಹಿತಿ ನೀಡಿದ್ದಾರೆ.
3 / 6
ಶಿಕ್ಷೆ ಪ್ರಕಟಿಸುವ ಸಮಯದಲ್ಲಿ ಲಮಿಚಾನೆ ನ್ಯಾಯಾಲಯದಲ್ಲಿ ಇರದ ಕಾರಣ ಅವರನ್ನು ಇನ್ನೂ ಬಂಧಿಸಿಲ್ಲ. ಈ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತೀರ್ಪು ಹೊರಬಿದ್ದ ಬಳಿಕ ಮಾತನಾಡಿದ ಸಂದೀಪ್ ಪರ ವಕೀಲ ಸರೋಜ್ ಘಿಮಿರೆ ತಿಳಿಸಿದ್ದಾರೆ.
4 / 6
ಆಗಸ್ಟ್ 2022 ರಲ್ಲಿ ಕಠ್ಮಂಡುವಿನ ಹೋಟೆಲ್ ಕೋಣೆಯಲ್ಲಿ ಸಂದೀಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು 17 ವರ್ಷದ ಬಾಲಕಿಯೊಬ್ಬಳು ಆರೋಪಿಸಿದ್ದಳು. ಆ ನಂತರ ಸಂದೀಪ್ರನ್ನು ಬಂಧಿಸಲಾಗಿತ್ತು. ಆದಾಗ್ಯೂ, ಜನವರಿ 2023 ರಲ್ಲಿ, ನ್ಯಾಯಾಲಯವು ಲಮಿಚಾನೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
5 / 6
ನಂತರ ನೇಪಾಳಿ ತಂಡದ ಪರ ಆಡಲು ಸಂದೀಪ್ ಆರಂಭಿಸಿದ್ದರು. ಆದರೆ ಕೆಲವೇ ದಿನಗಳ ನಂತರ ನ್ಯಾಯಾಲಯ ಸಂದೀಪ್ರನ್ನು ಅತ್ಯಾಚಾರದ ಅಪರಾಧಿ ಎಂದು ಘೋಷಿಸಿತು. ಆರೋಪಪಟ್ಟಿ ಸಲ್ಲಿಕೆಯಾದ ಬಳಿಕ ಲಮಿಚಾನೆ ಅವರ ಬ್ಯಾಂಕ್ ಖಾತೆ ಹಾಗೂ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
6 / 6
ಸಂದೀಪ್ 2016 ರಲ್ಲಿ ಮೊದಲ ಬಾರಿಗೆ ಅಂಡರ್-19 ವಿಶ್ವಕಪ್ ತಂಡದಲ್ಲಿ ಆಡಿದ್ದರು. ಇದರ ನಂತರ, 2018 ರಲ್ಲಿ ಅವರನ್ನು ಮೂಲ ಬೆಲೆ 20 ಲಕ್ಷ ರೂಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತ್ತು. ಇದಲ್ಲದೇ ಸಂದೀಪ್ ಬಿಗ್ ಬ್ಯಾಷ್ ಲೀಗ್ ಜಿತೆಗೆ ಸಿಪಿಐಎಲ್‌ನಲ್ಲೂ ಆಡುತ್ತಿದ್ದರು.
Published On - 3:25 pm, Thu, 11 January 24