ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಜಾರ್ಜ್​ ವರ್ಕರ್

|

Updated on: Aug 14, 2024 | 8:16 AM

George Worker: ಜಾರ್ಜ್​ ವರ್ಕರ್ ನ್ಯೂಝಿಲೆಂಡ್ ಪರ ಒಟ್ಟು 12 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 4 ಅರ್ಧಶತಕಗಳೊಂದಿಗೆ ಒಟ್ಟು 362 ರನ್​ ಕಲೆಹಾಕಿದ್ದಾರೆ. ಇದಾಗ್ಯೂ ಅವರಿಗೆ ನ್ಯೂಝಿಲೆಂಡ್ ಸೀಮಿತ ಓವರ್​ಗಳ ತಂಡದಲ್ಲಿ ಖಾಯಂ ಸ್ಥಾನ ಲಭಿಸಿರಲಿಲ್ಲ. ಮತ್ತೊಂದೆಡೆ ದೇಶೀಯ ಕ್ರಿಕೆಟ್​ನಲ್ಲಿ ಮಿಂಚಿದರೂ ಜಾರ್ಜ್ ವರ್ಕರ್ ಅವರಿಗೆ ರಾಷ್ಟ್ರೀಯ ತಂಡದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅವಕಾಶ ಸಿಕ್ಕಿರಲಿಲ್ಲ.

1 / 6
ನ್ಯೂಝಿಲೆಂಡ್ ಆಟಗಾರ ಜಾರ್ಜ್ ವರ್ಕರ್ (George Worker) ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಅದು ಸಹ ತಮ್ಮ 34ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಕಿವೀಸ್ ಪರ 2015 ರಲ್ಲಿ ಪಾದಾರ್ಪಣೆ ಮಾಡಿದ್ದ ವರ್ಕರ್ ಇದೀಗ ಹೊಸ ಇನಿಂಗ್ಸ್ ಆರಂಭಿಸಲು ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.

2 / 6
"ವೃತ್ತಿಪರ ಕ್ರಿಕೆಟ್‌ನಲ್ಲಿ 17 ವರ್ಷಗಳ ಪೂರ್ಣ ಪ್ರಯಾಣದ ನಂತರ, ನಾನು ಈ ಕ್ರೀಡೆಯಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಈ ನಿರ್ಧಾರವು ನನ್ನ ಜೀವನದ ನಂಬಲಾಗದ ಅಧ್ಯಾಯದ ಅಂತ್ಯವನ್ನು ಮತ್ತು ಹೊಸ ಸಾಹಸದ ಆರಂಭವನ್ನು ಸೂಚಿಸುತ್ತದೆ" ಎಂದು ವರ್ಕರ್ ತಿಳಿಸಿದ್ದಾರೆ. ಈ ಮೂಲಕ ಸುದೀರ್ಘವಧಿಯ ಕ್ರಿಕೆಟ್​ ಬದುಕಿಗೆ ಗುಡ್ ಬೈ ಹೇಳಲು ನ್ಯೂಝಿಲೆಂಡ್​ನ ಎಡಗೈ ದಾಂಡಿಗ ನಿರ್ಧರಿಸಿದ್ದಾರೆ.

3 / 6
ಜಾರ್ಜ್ ವರ್ಕರ್ ನ್ಯೂಝಿಲೆಂಡ್ ಪರ 10 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ ಮೂರು ಅರ್ಧಶತಕಗಳೊಂದಿಗೆ ಒಟ್ಟು 272 ರನ್ ಕಲೆಹಾಕಿದ್ದಾರೆ. ಇನ್ನು 2 ಟಿ20 ಪಂದ್ಯಗಳನ್ನಾಡಿರುವ ವರ್ಕರ್ 1 ಅರ್ಧಶತಕದೊಂದಿಗೆ 90 ರನ್ ಬಾರಿಸಿದ್ದಾರೆ. ಇದಾಗ್ಯೂ ಅವರಿಗೆ ನ್ಯೂಝಿಲೆಂಡ್ ತಂಡದಲ್ಲಿ ಖಾಯಂ ಸ್ಥಾನ ಲಭಿಸಿರಲಿಲ್ಲ.

4 / 6
ಅದಾಗ್ಯೂ ನ್ಯೂಝಿಲೆಂಡ್​ನ ಫಸ್ಟ್​ ಕ್ಲಾಸ್​ ಕ್ರಿಕೆಟ್​ನಲ್ಲಿ ಮುಂದುವರೆದಿದ್ದ ಜಾರ್ಜ್​ ವರ್ಕರ್ 169 ಪಂದ್ಯಗಳಲ್ಲಿ 43.64 ಸರಾಸರಿಯಲ್ಲಿ 6721 ರನ್ ಕಲೆಹಾಕಿದ್ದರು. ಈ ವೇಳೆ 18 ಶತಕಗಳು ಮತ್ತು 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

5 / 6
ಹಾಗೆಯೇ 154 ಟಿ20 ಪಂದ್ಯಗಳನ್ನಾಡಿರುವ ಜಾರ್ಜ್ ವರ್ಕರ್, 123.57 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 3480 ರನ್ ಬಾರಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು 18 ಅರ್ಧ ಶತಕಗಳನ್ನು ಸಿಡಿಸಿದ್ದರು. ಇದರ ಜೊತೆಗೆ 34 ವರ್ಷದ ವರ್ಕರ್ ಅವರು ತಮ್ಮ ಆಟದ ವೃತ್ತಿಜೀವನದಲ್ಲಿ 58 ಪ್ರಥಮ ದರ್ಜೆ, 60 ಲಿಸ್ಟ್ ಎ ಮತ್ತು 42 ಟಿ20 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

6 / 6
ಅಂದರೆ ನ್ಯೂಝಿಲೆಂಡ್ ದೇಶೀಯ ಕ್ರಿಕೆಟ್​ನಲ್ಲಿ ಆಲ್​ರೌಂಡರ್​ ಆಗಿ ಗಮನ ಸೆಳೆದಿದ್ದ ಜಾರ್ಜ್ ವರ್ಕರ್​ಗೆ ರಾಷ್ಟ್ರೀಯ ತಂಡದಲ್ಲಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಇದೀಗ 34 ವರ್ಷದ ವರ್ಕರ್ ಹೂಡಿಕೆ ಸಂಸ್ಥೆಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು, ಹೀಗಾಗಿ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.