Rinku Singh: ಈ ಬಾರಿ ನಡೆಯಲಿಲ್ಲ ರಿಂಕು ಆಟ: ಅಜೇಯ 58 ರನ್ ಸಿಡಿಸಿದರೂ ಗೆಲ್ಲದ ಕೆಕೆಆರ್
KKR vs SRH, IPL 2023: ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ರಿಂಕು ಸಿಂಗ್ ಕುಗ್ಗದೆ ಬ್ಯಾಟ್ ಬೀಸಿದರು. ಕೊನೆಯ ಓವರ್ಗೆ 32 ರನ್ಗಳ ಅಗತ್ಯವಿತ್ತು. ಆದರೆ, ಗೆಲವು ತಂದುಕೊಡಲು ಸಾಧ್ಯವಾಗಲಿಲ್ಲ. ತಲಾ ನಾಲ್ಕು ಸಿಕ್ಸರ್ಗಳ ಮತ್ತು ಬೌಂಡರಿಗಳೊಂದಿಗೆ ಅಜೇಯ 58 ಸಿಡಿಸಿದರು.
1 / 9
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗ 200+ ರನ್ ಹೊಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಐಪಿಎಲ್ 2023 ರಲ್ಲಿ ಶುಕ್ರವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯದಲ್ಲಿ ಕೂಡ ಉಭಯ ತಂಡಗಳು 200 ಕ್ಕೂ ಅಧಿಕ ರನ್ ಕಲೆಹಾಕಿದವು.
2 / 9
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಆ್ಯಡಂ ಮರ್ಕ್ರಮ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ 23 ರನ್ಗಳಿಂದ ಜಯ ಸಾಧಿಸಿತು. ಈ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಏಳನೇ ಸ್ಥಾನಕ್ಕೇರಿದೆ.
3 / 9
ಟಾಸ್ ಗೆದ್ದ ಕೆಕೆಆರ್ ತಂಡ, ಹೈದರಾಬಾದ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿತು. ಅದರಂತೆ, ಓಪನರ್ ಬಂದು, ಕೊನೆಯವರೆಗೆ ಬ್ಯಾಟ್ ಮಾಡಿದ ಹ್ಯಾರಿ ಬ್ರೂಕ್ 55 ಎಸೆತಗಳಲ್ಲಿ 12 ಫೋರ್, 3 ಸಿಕ್ಸರ್ನೊಂದಿಗೆ 100 ರನ್ ಗಳಿಸಿ ಮಿಂಚಿದರು.
4 / 9
ಐದನೇ ಕ್ರಮಾಂಕದಲ್ಲಿ ಬಂದ ನಾಯಕ ಆ್ಯಡಂ ಮರ್ಕ್ರಮ್ 26 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಗಳಿಕೆಯಲ್ಲಿ ಬ್ರೂಕ್‌ಗೆ ಜತೆಯಾದರು. ಅಭಿಷೇಕ್ ಶರ್ಮಾ 17 ಎಸೆತಗಳಲ್ಲಿ 32 ರನ್ ಚಚ್ಚಿದರು. ಅಂತಿಮವಾಗಿ ಸನ್‌ರೈಸರ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದೊಂದಿಗೆ 228ರನ್ ಪೇರಿಸಿದೆ.
5 / 9
ಕಠಿಣ ಗುರಿ ಬೆನ್ನಟ್ಟಿದ ಕೆಕೆಆರ್ ಉತ್ತಮ ಆರಂಭ ಪಡೆಯಲಿಲ್ಲ. ರೆಹಮಾನುಲ್ಲಾ ಗುರ್ಬಾಜ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ ಮಾರ್ಕ್ ಜಾನ್ಸೆನ್ ಸತತ ಎರಡು ಎಸತೆಗಳಲ್ಲಿ ವೆಂಕಟೇಶ್ ಅಯ್ಯರ್ (10) ಮತ್ತು ಸುನಿಲ್ ನರೈನ್ (0) ವಿಕೆಟ್ ಉರುಳಿಸಿದರು.
6 / 9
ಜಗದೀಸನ್ ಜೊತೆಗೂಡಿದ ನಾಯಕ ನಿತೀಶ್ ರಾಣಾ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಜಗದೀಸನ್ 21 ಎಸತೆಗಳಲ್ಲಿ 5 ಫೋರ್, 1 ಸಿಕ್ಸರ್ನೊಂದಿಗೆ 36 ಬಾರಿಸಿದರು. ಇಂಜುರಿಗೆ ತುತ್ತಾಗಿದ್ದ ಆಂಡ್ರೆ ರಸೆಲ್ 3 ರನ್ಗಳಿಗೆ ಬ್ಯಾಟ್ ಕೆಳಗಿಟ್ಟರು.
7 / 9
ಬಳಿಕ ರಾಣಾ ಜೊತೆಗೂಡಿದ ರಿಂಕು ಸಿಂಗ್ ತಂಡದ ಗೆಲುವಿಗಾಗಿ ಕೊನೆಯವರೆಗೆ ಹೋರಾಟ ನಡೆಸಿದರು. 6ನೇ ವಿಕೆಟ್ಗೆ ರಾಣಾ ಮತ್ತು ರಿಂಕು 69 ರನ್ಗಳನ್ನು ಬಾರಿಸಿದರು. 41 ಎಸೆತಗಳಲ್ಲಿ ರಾಣಾ 6 ಸಿಕ್ಸರ್ಗಳು ಮತ್ತು 5 ಫೋರ್ ಸಿಡಿಸಿ 75 ರನ್ ಗಳಿಸಿ ನಿರ್ಗಮಿಸಿದರು.
8 / 9
ಇತ್ತ ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ರಿಂಕು ಸಿಂಗ್ ಕುಗ್ಗದೆ ಬ್ಯಾಟ್ ಬೀಸಿದರು. ಕೊನೆಯ ಓವರ್ಗೆ 32 ರನ್ಗಳ ಅಗತ್ಯವಿತ್ತು. ಆದರೆ, ಗೆಲವು ತಂದುಕೊಡಲು ಸಾಧ್ಯವಾಗಲಿಲ್ಲ. ತಲಾ ನಾಲ್ಕು ಸಿಕ್ಸರ್ಗಳ ಮತ್ತು ಬೌಂಡರಿಗಳೊಂದಿಗೆ ಅಜೇಯ 58 ಸಿಡಿಸಿದರು.
9 / 9
ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಸೋಲು ಕಂಡಿತು. ಎಸ್ಆರ್ಹೆಚ್ ಪರ ಮಾರ್ಕ್ ಜಾನ್ಸೆನ್ ಮತ್ತು ಮಯಾಂಕ್ ಮಾರ್ಕಂಡೆ ತಲಾ 2 ವಿಕೆಟ್ ಕಿತ್ತರು.
Published On - 8:03 am, Sat, 15 April 23