ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ರೇಸ್​ನಲ್ಲಿ ಇಬ್ಬರು ಭಾರತೀಯರು! ಉಳಿದಿಬ್ಬರು ಯಾರು ಗೊತ್ತಾ?

Updated on: Jan 05, 2024 | 6:17 PM

ICC Cricketer of the Year 2023: 2023ರ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಾಲ್ಕು ಆಟಗಾರರನ್ನು ನಾಮನಿರ್ದೇಶನ ಮಾಡಿದೆ. ಈ ನಾಲ್ಕು ಹೆಸರುಗಳಲ್ಲಿ ಇಬ್ಬರು ಭಾರತೀಯ ಆಟಗಾರರ ಹೆಸರಿರುವುದು ಸಂತಸದ ಸಂಗತಿಯಾಗಿದೆ. ಈ ಪಟ್ಟಿಯಲ್ಲಿ ಉಳಿದಿರುವ ಇಬ್ಬರು ಆಟಗಾರರು ಆಸ್ಟ್ರೇಲಿಯಾ ತಂಡವರಾಗಿದ್ದಾರೆ.

1 / 8
2023ರ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಾಲ್ಕು ಆಟಗಾರರನ್ನು ನಾಮನಿರ್ದೇಶನ ಮಾಡಿದೆ. ಈ ನಾಲ್ಕು ಹೆಸರುಗಳಲ್ಲಿ ಇಬ್ಬರು ಭಾರತೀಯ ಆಟಗಾರರ ಹೆಸರಿರುವುದು ಸಂತಸದ ಸಂಗತಿಯಾಗಿದೆ. ಈ ಪಟ್ಟಿಯಲ್ಲಿ ಉಳಿದಿರುವ ಇಬ್ಬರು ಆಟಗಾರರು ಆಸ್ಟ್ರೇಲಿಯಾ ತಂಡವರಾಗಿದ್ದಾರೆ.

2023ರ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಾಲ್ಕು ಆಟಗಾರರನ್ನು ನಾಮನಿರ್ದೇಶನ ಮಾಡಿದೆ. ಈ ನಾಲ್ಕು ಹೆಸರುಗಳಲ್ಲಿ ಇಬ್ಬರು ಭಾರತೀಯ ಆಟಗಾರರ ಹೆಸರಿರುವುದು ಸಂತಸದ ಸಂಗತಿಯಾಗಿದೆ. ಈ ಪಟ್ಟಿಯಲ್ಲಿ ಉಳಿದಿರುವ ಇಬ್ಬರು ಆಟಗಾರರು ಆಸ್ಟ್ರೇಲಿಯಾ ತಂಡವರಾಗಿದ್ದಾರೆ.

2 / 8

2023ರ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿಶೇಷವಾಗಿತ್ತು. ಈ ವರ್ಷ ಎರಡು ದೊಡ್ಡ ಐಸಿಸಿ ಟೂರ್ನಿಗಳನ್ನು ಆಡಲಾಗಿದೆ. ಇದರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಮತ್ತು ಏಕದಿನ ವಿಶ್ವಕಪ್ ಕೂಡ ಸೇರಿದೆ. 2023 ರಲ್ಲಿ, ಆಯಾ ದೇಶಗಳಿಗಾಗಿ ಅದ್ಭುತ ಪ್ರದರ್ಶನ ನೀಡಿದ ಅನೇಕ ಆಟಗಾರರಿದ್ದರು. ಆ ಆಟಗಾರರ ಪೈಕಿ ಐಸಿಸಿ 4 ಪ್ರಮುಖ ಆಟಗಾರರ ಹೆಸರನ್ನು ನಾಮನಿರ್ದೇಶನ ಮಾಡಿದೆ.

3 / 8

ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹೊರತಾಗಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಹೆಸರೂ ಸೇರಿದೆ. ಇವರಿಬ್ಬರನ್ನು ಹೊರತುಪಡಿಸಿ, ಇಬ್ಬರು ಆಸ್ಟ್ರೇಲಿಯಾದ ಆಟಗಾರರು ಈ ಪಟ್ಟಿಯ ಸ್ಥಾನ ಪಡೆದಿದ್ದಾರೆ. ಅವರಲ್ಲಿ ವಿಶ್ವಕಪ್ ಫೈನಲ್ ಹೀರೋ ಟ್ರಾವಿಸ್ ಹೆಡ್ ಮತ್ತು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಸೇರಿದ್ದಾರೆ.

4 / 8

ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿಗೆ ಈ ವರ್ಷ ಅದ್ಭುತವಾಗಿತ್ತು. 2023 ರಲ್ಲಿ ಅವರು ಏಕದಿನ ಮತ್ತು ಟೆಸ್ಟ್‌ನಲ್ಲಿ ಕೊಹ್ಲಿ ಒಟ್ಟು 35 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 66.06 ಸರಾಸರಿಯಲ್ಲಿ 2048 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ 8 ಶತಕ ಮತ್ತು 10 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

5 / 8

2023 ರ ವಿಶ್ವಕಪ್‌ನಲ್ಲಿ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ ವಿರಾಟ್ ಕೊಹ್ಲಿ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಹಾಗೆಯೇ ಪ್ಲೇಯರ್ ಆಫ್​ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

6 / 8

ವಿರಾಟ್ ಕೊಹ್ಲಿ ಹೊರತಾಗಿ, ರವೀಂದ್ರ ಜಡೇಜಾ ಕೂಡ 2023 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಒಟ್ಟು 35 ಪಂದ್ಯಗಳನ್ನಾಡಿರುವ ಜಡೇಜಾ ಬ್ಯಾಟಿಂಗ್​ನಿಂದ 613 ರನ್ ಕಲೆಹಾಕಿದ್ದರೆ, ಬೌಲಿಂಗ್​ನಲ್ಲಿ 66 ವಿಕೆಟ್ ಪಡೆದಿದ್ದಾರೆ. ಅಲ್ಲದೆ 2023ರಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ.

7 / 8

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಟ್ರಾವಿಸ್ ಹೆಡ್ ಮತ್ತು ನಾಯಕ ಪೀಟ್ ಕಮ್ಮಿನ್ಸ್‌ಗೆ 2023 ವರ್ಷ ಅದ್ಭುತವಾಗಿತ್ತು. ಇಬ್ಬರೂ ಆಟಗಾರರು 2023 ರಲ್ಲಿ ಆಡಿದ ಎರಡೂ ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಎರಡೂ ಟೂರ್ನಿಗಳ ಅಂತಿಮ ಪಂದ್ಯಗಳಲ್ಲಿ ಈ ಇಬ್ಬರು ಆಟಗಾರರ ಪ್ರದರ್ಶನ ಅತ್ಯುತ್ತಮವಾಗಿತ್ತು.

8 / 8

ಟ್ರಾವಿಸ್ ಹೆಡ್ ವಿಶ್ವ ಟೆಸ್ಟ್​ ಚಾಂಪಿಯನ್‌ಶಿಪ್ ಫೈನಲ್ ಮತ್ತು ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಗೆಲುವಿನ ಶತಕ ಸಿಡಿಸಿದ್ದರು. ಇತ್ತ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಈ ಎರಡೂ ಟ್ರೋಫಿಗಳನ್ನು ಗೆದ್ದುಕೊಂಡಿತು. ಈ ಕಾರಣಕ್ಕಾಗಿಯೇ ಐಸಿಸಿ ಈ ಇಬ್ಬರು ಆಟಗಾರರ ಹೆಸರನ್ನು ಈ ಪಟ್ಟಿಯಲ್ಲಿ ಸೇರಿಸಿದೆ.

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us