ಆಫ್ರಿಕಾ ತಂಡಕ್ಕೆ ಬಿಗ್ ಶಾಕ್; ಭಾರತದಿಂದ ಮತ್ತೆ ತವರಿಗೆ ತೆರಳಿದ ನಾಯಕ ಬವುಮಾ..!
ODI World Cup 2023: ಟೆಂಬಾ ಬವುಮಾ ನಾಯಕತ್ವದ ಆಫ್ರಿಕನ್ ತಂಡ ಅಕ್ಟೋಬರ್ 25 ರಂದು ಭಾರತಕ್ಕೆ ಆಗಮಿಸಿತ್ತು. ಆದರೆ ಭಾರತಕ್ಕೆ ಬಂದಿಳಿದ ಎರಡೇ ಎರಡು ದಿನಗಳಲ್ಲಿ ತಂಡದ ನಾಯಕ ಟೆಂಬಾ ಬವುಮಾ ಮತ್ತೆ ತನ್ನ ತವರಿಗೆ ಮರಳಿದ್ದಾರೆ ಎಂದು ವರದಿಯಾಗಿದೆ. ಕೌಟುಂಬಿಕ ಕಾರಣದಿಂದ ಟೆಂಬಾ ಬವುಮಾ ದಕ್ಷಿಣ ಆಫ್ರಿಕಾಕ್ಕೆ ವಾಪಸ್ಸಾಗಿದ್ದು, ತಂಡದ ಎರಡೂ ಅಭ್ಯಾಸ ಪಂದ್ಯಗಳಿಗೂ ಅವರು ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.
1 / 7
ಅಕ್ಟೋಬರ್ 5ರಿಂದ ಆರಂಭವಾಗಲಿರುವ ವಿಶ್ವಕಪ್‌ಗಾಗಿ ಎಲ್ಲಾ ತಂಡಗಳು ಭಾರತಕ್ಕೆ ಬಂದಿಳಿಯುತ್ತಿವೆ. ವಿಶ್ವಕಪ್‌ನ ಲೀಗ್ ಸುತ್ತು ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿದ್ದು, ಎಲ್ಲಾ ತಂಡಗಳು ಎರಡೆರಡು ಅಭ್ಯಾಸ ಪಂದ್ಯಗಳನ್ನು ಆಡಲಿವೆ.
2 / 7
ಸೆಪ್ಟೆಂಬರ್ 29 ರಿಂದ ಅಭ್ಯಾಸ ಪಂದ್ಯಗಳು ಆರಂಭವಾಗಲಿದ್ದು, ಮೂರು ದಿನಗಳವರೆಗೆ ನಡೆಯಲ್ಲಿವೆ. ಹೀಗಾಗಿ ಅಭ್ಯಾಸ ಪಂದ್ಯಗಳಿಗೂ ಮುನ್ನ ಭಾರತಕ್ಕೆ ಬಂದಿಳಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ.
3 / 7
ಟೆಂಬಾ ಬವುಮಾ ನಾಯಕತ್ವದ ಆಫ್ರಿಕನ್ ತಂಡ ಅಕ್ಟೋಬರ್ 25 ರಂದು ಭಾರತಕ್ಕೆ ಆಗಮಿಸಿತ್ತು. ಆದರೆ ಭಾರತಕ್ಕೆ ಬಂದಿಳಿದ ಎರಡೇ ಎರಡು ದಿನಗಳಲ್ಲಿ ತಂಡದ ನಾಯಕ ಟೆಂಬಾ ಬವುಮಾ ಮತ್ತೆ ತನ್ನ ತವರಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.
4 / 7
ಕೌಟುಂಬಿಕ ಕಾರಣದಿಂದ ಟೆಂಬಾ ಬವುಮಾ ದಕ್ಷಿಣ ಆಫ್ರಿಕಾಕ್ಕೆ ವಾಪಸ್ಸಾಗಿದ್ದು, ತಂಡದ ಎರಡೂ ಅಭ್ಯಾಸ ಪಂದ್ಯಗಳಿಗೂ ಅವರು ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.
5 / 7
ದಕ್ಷಿಣ ಆಫ್ರಿಕಾ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಸೆಪ್ಟೆಂಬರ್ 29 ರಂದು ಮತ್ತು ತನ್ನ ಎರಡನೇ ಅಭ್ಯಾಸ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ 2 ರಂದು ಆಡಲಿದೆ.
6 / 7
ಏತನ್ಮಧ್ಯೆ, ತೆಂಬಾ ಬವುಮಾ ಅನುಪಸ್ಥಿತಿಯಲ್ಲಿ, ದಕ್ಷಿಣ ಆಫ್ರಿಕಾ ತಂಡದ ನಾಯಕತ್ವವನ್ನು ಏಡನ್ ಮಾರ್ಕ್ರಾಮ್‌ಗೆ ಹಸ್ತಾಂತರಿಸಲಾಗಿದೆ.
7 / 7
ದಕ್ಷಿಣ ಆಫ್ರಿಕಾ ವಿಶ್ವಕಪ್ ತಂಡ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆಂಡಿಲ್ ಫೆಹ್ಲುಕ್ವಾಯೊ, ಕಗಿಸೊ ರಬಾಡಾ, ತಬ್ರೈಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಲಿಜಾಡ್ ವಿಲಿಯಮ್ಸ್.