ODI World Cup 2023: ‘ಕೊಹ್ಲಿಗಾಗಿ ಭಾರತ ವಿಶ್ವಕಪ್ ಗೆಲ್ಲಬೇಕು’; ಸೆಮಿಫೈನಲ್ ಆಡುವ 4 ತಂಡಗಳನ್ನು ಹೆಸರಿಸಿದ ಸೆಹ್ವಾಗ್
ODI World Cup 2023: ಸೆಮಿಫೈನಲ್‌ಗೆ ಹೋಗುವ ನಾಲ್ಕು ತಂಡಗಳನ್ನು ಹೆಸರಿಸಿರುವ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಈ ಬಾರಿಯ ವಿಶ್ವಕಪ್ ಅನ್ನು ಭಾರತ ಏಕೆ ಗೆಲ್ಲಬೇಕು ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.
1 / 9
12 ವರ್ಷಗಳ ನಂತರ ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2023 ರ ಸೆಮಿಫೈನಲ್‌ಗೆ ಹೋಗುವ ನಾಲ್ಕು ತಂಡಗಳನ್ನು ಹೆಸರಿಸಿರುವ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಈ ಬಾರಿಯ ವಿಶ್ವಕಪ್ ಅನ್ನು ಭಾರತ ಏಕೆ ಗೆಲ್ಲಬೇಕು ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.
2 / 9
ಏಕದಿನ ವಿಶ್ವಕಪ್ 2023 ರ ವೇಳಾಪಟ್ಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸೆಹ್ವಾಗ್, 2011 ರಲ್ಲಿ ಟೀಂ ಇಂಡಿಯಾ ಹೇಗೆ ಸಚಿನ್ ತೆಂಡೂಲ್ಕರ್ ಅವರಿಗಾಗಿ ವಿಶ್ವಕಪ್ನಲ್ಲಿ ಆಡಿತ್ತೋ. ಹಾಗೆಯೇ 2023 ರ ವಿಶ್ವಕಪ್ ಅನ್ನು ಕೊಹ್ಲಿಗಾಗಿ ಆಡಬೇಕು ಎಂದಿದ್ದಾರೆ.
3 / 9
ನಾವು 2011ರ ವಿಶ್ವಕಪ್ ಅನ್ನು ತೆಂಡೂಲ್ಕರ್‌ಗಾಗಿ ಆಡಿದ್ದೇವು. ನಾವು ವಿಶ್ವಕಪ್ ಗೆಲ್ಲುವ ಮೂಲಕ ಸಚಿನ್ ತೆಂಡೂಲ್ಕರ್ ಅವರಿಗೆ ಸ್ಮರಣೀಯ ವಿದಾಯ ಹೇಳಲು ಬಯಸಿದ್ದೇವು. ಪ್ರಸ್ತುತ ವಿರಾಟ್ ಕೊಹ್ಲಿ ಈಗ ಅದೇ ಆಗಿದ್ದಾರೆ. ತಂಡದ ಎಲ್ಲರೂ ಅವರಿಗಾಗಿ ವಿಶ್ವಕಪ್ ಗೆಲ್ಲಲು ಬಯಸುತ್ತಾರೆ ಎಂದಿದ್ದಾರೆ.
4 / 9
ವಿರಾಟ್ ಕೊಹ್ಲಿ ಕೂಡ ಈ ವಿಶ್ವಕಪ್‌ನತ್ತ ನೋಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 100,000 ಜನರು ನಿಮ್ಮನ್ನು ವೀಕ್ಷಿಸುತ್ತಾರೆ. ಪಿಚ್‌ಗಳು ಹೇಗೆ ವರ್ತಿಸುತ್ತವೆ ಎಂದು ವಿರಾಟ್‌ಗೆ ತಿಳಿದಿದೆ. ಹೀಗಾಗಿ ಕೊಹ್ಲಿ ಈ ವಿಶ್ವಕಪ್ನಲ್ಲಿ ಸಾಕಷ್ಟು ರನ್ ಗಳಿಸುತ್ತಾರೆ ಮತ್ತು ಭಾರತ ವಿಶ್ವಕಪ್ ಗೆಲ್ಲುವ ಸಲುವಾಗಿ ಅತ್ಯುತ್ತಮವಾಗಿ ಆಡುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.
5 / 9
ಭಾರತ- ಪಾಕ್ ನಡುವಿನ ಪಂದ್ಯದ ಬಗ್ಗೆ ಮಾತನಾಡಿದ ಸೆಹ್ವಾಗ್, ಆ ದಿನ ಏನಾಗುತ್ತದೆ ಎಂದು ನನಗೆ ಖಚಿತವಿಲ್ಲ. ಆದರೆ ಒತ್ತಡವನ್ನು ಉತ್ತಮವಾಗಿ ನಿಭಾಯಿಸುವ ತಂಡವು ಗೆಲ್ಲುತ್ತದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸೆಹ್ವಾಗ್ ಪ್ರಕಾರ ಈ ಬಾರಿಯ ವಿಶ್ವಕಪ್ನಲ್ಲಿ ಸೆಮಿಫೈನಲ್ ಆಡುವ 4 ತಂಡಗಳು ಯಾವುವು ಎಂಬುದನ್ನು ನೋಡುವುದಾದರೆ..
6 / 9
ಭಾರತ
7 / 9
ಪಾಕಿಸ್ತಾನ
8 / 9
ಇಂಗ್ಲೆಂಡ್
9 / 9
ಆಸ್ಟ್ರೇಲಿಯಾ