ODI World Cup 2023: ಈ 4 ತಂಡಗಳು ಸೆಮಿಫೈನಲ್​ ಪ್ರವೇಶಿಸುವುದು ಖಚಿತ: ಸೆಹ್ವಾಗ್

Edited By:

Updated on: Aug 12, 2023 | 3:59 PM

ODI World Cup 2023: ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಹಾಗೆಯೇ ಫೈನಲ್ ಪಂದ್ಯ ನವೆಂಬರ್ 19 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ.

1 / 7
ಅಕ್ಟೋಬರ್-ನವೆಂಬರ್​ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗಾಗಿ (ODI World Cup 2023) ದಿನಗಣನೆ ಶುರುವಾಗಿದೆ. ಈ ದಿನಗಣನೆ ಬೆನ್ನಲ್ಲೇ ಈ ಬಾರಿ ಚಾಂಪಿಯನ್ ಪಟ್ಟಕ್ಕೇರುವ ತಂಡ ಯಾವುದೆಂಬ ಚರ್ಚೆಗಳು ಕೂಡ ಮುನ್ನಲೆಗೆ ಬರುತ್ತಿವೆ. ಈ ಚರ್ಚೆಗಳ ನಡುವೆ ಈ ಬಾರಿ ಸೆಮಿಫೈನಲ್ ಆಡಲಿರುವ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್.

ಅಕ್ಟೋಬರ್-ನವೆಂಬರ್​ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗಾಗಿ (ODI World Cup 2023) ದಿನಗಣನೆ ಶುರುವಾಗಿದೆ. ಈ ದಿನಗಣನೆ ಬೆನ್ನಲ್ಲೇ ಈ ಬಾರಿ ಚಾಂಪಿಯನ್ ಪಟ್ಟಕ್ಕೇರುವ ತಂಡ ಯಾವುದೆಂಬ ಚರ್ಚೆಗಳು ಕೂಡ ಮುನ್ನಲೆಗೆ ಬರುತ್ತಿವೆ. ಈ ಚರ್ಚೆಗಳ ನಡುವೆ ಈ ಬಾರಿ ಸೆಮಿಫೈನಲ್ ಆಡಲಿರುವ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್.

2 / 7

ಏಕದಿನ ವಿಶ್ವಕಪ್ ಚರ್ಚೆವೊಂದರಲ್ಲಿ ಮಾತನಾಡಿದ ಸೆಹ್ವಾಗ್, ಈ ಬಾರಿಯ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರು ನೋಡಬಹುದು. ಏಕೆಂದರೆ ಆಸೀಸ್ ಪಡೆಯು ಯಾವತ್ತೂ ಸಾಂಪ್ರದಾಯಿಕ ಕ್ರಿಕೆಟ್ ಆಡುತ್ತಾ ಬಂದಿಲ್ಲ. ಉಪಖಂಡಗಳಲ್ಲೂ ಅವರು ಉತ್ತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಸೆಮಿಫೈನಲ್​ ಹಂತಕ್ಕೇರುವುದು ಖಚಿತ ಎಂದಿದ್ದಾರೆ.

3 / 7

ಇನ್ನು ಇಂಗ್ಲೆಂಡ್ ತಂಡವನ್ನು ಕೂಡ ಸೆಮಿಫೈನಲ್​ನಲ್ಲಿ ಕಾಣಬಹುದು. ಏಕೆಂದರೆ ಇಂಗ್ಲೆಂಡ್ ಕೂಡ ಉಪಖಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತದೆ. ಅದರಲ್ಲೂ ಭಾರತದಲ್ಲಿ ಅತ್ಯುತ್ತವಾಗಿ ಆಡುವ ವಿದೇಶಿ ತಂಡಗಳಲ್ಲಿ ಇಂಗ್ಲೆಂಡ್ ಕೂಡ ಒಂದು. ಹಾಗಾಗಿ ಆಂಗ್ಲ ಪಡೆ ಕೂಡ ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಲಿದೆ ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.

4 / 7

ಹಾಗೆಯೇ ಐಸಿಸಿ ಟೂರ್ನಿಗಳಲ್ಲಿ ಡಾರ್ಕ್​ ಹೋರ್ಸ್ ಎಂದೇ ಗುರುತಿಸಿಕೊಂಡಿರುವ ಪಾಕಿಸ್ತಾನ್ ತಂಡ ಕೂಡ ಸೆಮಿಫೈನಲ್ ಪ್ರವೇಶಿಸಲಿದೆ. ಭಾರತದಲ್ಲಿ ವಿಶ್ವಕಪ್​ ಆಡುತ್ತಿರುವುದರಿಂದ ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳುವುದು ಅವರಿಗೆ ತುಂಬಾ ಸುಲಭ. ಹೀಗಾಗಿ ಪಾಕ್ ತಂಡವನ್ನು ಕೂಡ ಸೆಮಿಫೈನಲ್​ಗೆ ಎದುರು ನೋಡಬಹುದು ಎಂದು ಸೆಹ್ವಾಗ್ ತಿಳಿಸಿದ್ದಾರೆ.

5 / 7

ಇನ್ನು ಆತಿಥೇಯ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸುವ ನೆಚ್ಚಿನ ತಂಡವಾಗಿದೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಉತ್ತಮ ಸಮತೋಲಿತ ಬಳಗವನ್ನು ಹೊಂದಿದೆ. ಅದರಲ್ಲೂ ತವರು ಮೈದಾನಗಳಲ್ಲಿ ಪಂದ್ಯಗಳು ನಡೆಯುತ್ತಿರುವುದು ಭಾರತದ ಪಾಲಿಗೆ ಪ್ಲಸ್ ಪಾಯಿಂಟ್. ಹೀಗಾಗಿ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಪ್ರವೇಶಿಸುವುದು ಖಚಿತ ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.

6 / 7

ಅದರಂತೆ ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಸೆಮಿಫೈನಲ್​ಗೆ ಎಂಟ್ರಿ ಕೊಡಲಿದೆ ಎಂದು ಸೆಹ್ವಾಗ್ ತಿಳಿಸಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರ ಈ ಭವಿಷ್ಯವಾಣಿ ನಿಜವಾಗಲಿದೆಯಾ ಎಂದು ತಿಳಿಯಲು ವಿಶ್ವಕಪ್​ನ ಲೀಗ್​ ಹಂತದ ಪಂದ್ಯಗಳ ಮುಕ್ತಾಯದವರೆಗೂ ​ ಕಾಯಲೇಬೇಕು.

7 / 7

ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಹಾಗೆಯೇ ಫೈನಲ್ ಪಂದ್ಯ ನವೆಂಬರ್ 19 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ.

Loading...
Unable to load recommendations.
Follow Us