PAK vs BAN: ಸೋಲಿನಿಂದ ಪಾಠ ಕಲಿತ ಪಾಕ್; ತಂಡಕ್ಕೆ ಮತ್ತೆ ಮೂವರು ಆಟಗಾರರ ಆಗಮನ
PAK vs BAN: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಆಗಸ್ಟ್ 28 ಬುಧವಾರದಂದು ಸ್ಪಿನ್ನರ್ ಅಬ್ರಾರ್ ಅಹ್ಮದ್, ಬ್ಯಾಟ್ಸ್‌ಮನ್ ಕಮ್ರಾನ್ ಗುಲಾಮ್ ಮತ್ತು ವೇಗದ ಬೌಲರ್ ಅಮೀರ್ ಜಮಾಲ್ ಎರಡನೇ ಟೆಸ್ಟ್‌ಗೆ ತಂಡದ ಭಾಗವಾಗಲಿದ್ದಾರೆ ಎಂದು ಪ್ರಕಟಿಸಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ರಾವಲ್ಪಿಂಡಿಯಲ್ಲಿಯೇ ನಡೆಯಲಿದ್ದು, ಆಗಸ್ಟ್ 30 ರಿಂದ ಆರಂಭವಾಗಲಿದೆ.
1 / 6
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲಿ ಕಂಡಿರುವ ಪಾಕ್ ಕ್ರಿಕೆಟ್ ತಂಡ ತವರಿನಲ್ಲೇ ಸಾಕಷ್ಟು ಮುಜುಗರಕ್ಕೆ ಒಳಗಾಗಿದೆ. ಹೀಗಾಗಿ ಮುಂದಿನ ಟೆಸ್ಟ್ ಪಂದ್ಯವನ್ನು ಪಾಕ್ ತಂಡ ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಇಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಯು ಮೂವರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ.
2 / 6
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಆಗಸ್ಟ್ 28 ಬುಧವಾರದಂದು ಸ್ಪಿನ್ನರ್ ಅಬ್ರಾರ್ ಅಹ್ಮದ್, ಬ್ಯಾಟ್ಸ್‌ಮನ್ ಕಮ್ರಾನ್ ಗುಲಾಮ್ ಮತ್ತು ವೇಗದ ಬೌಲರ್ ಅಮೀರ್ ಜಮಾಲ್ ಎರಡನೇ ಟೆಸ್ಟ್‌ಗೆ ತಂಡದ ಭಾಗವಾಗಲಿದ್ದಾರೆ ಎಂದು ಪ್ರಕಟಿಸಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ರಾವಲ್ಪಿಂಡಿಯಲ್ಲಿಯೇ ನಡೆಯಲಿದ್ದು, ಆಗಸ್ಟ್ 30 ರಿಂದ ಆರಂಭವಾಗಲಿದೆ.
3 / 6
ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ ಮೊದಲ ಜಯವಾಗಿದೆ. ತನ್ನ ನೆಲದಲ್ಲಿಯೇ ಇಂತಹ ಹೀನಾಯ ಸೋಲನ್ನು ಎದುರಿಸಬೇಕಾಗಿ ಬಂದಿರುವುದು ಪಾಕಿಸ್ತಾನಕ್ಕೆ ದೊಡ್ಡ ಆಘಾತವಾಗಿತ್ತು. ಇದಕ್ಕೆ ಪ್ರಮುಖ ಕಾರಣ ಪಾಕಿಸ್ತಾನದ ಬೌಲಿಂಗ್.
4 / 6
ಶಾನ್ ಮಸೂದ್ ನಾಯಕತ್ವ ಪಾಕಿಸ್ತಾನ ತಂಡವು ನಾಲ್ವರು ವೇಗದ ಬೌಲರ್‌ಗಳೊಂದಿಗೆ ಆ ಪಂದ್ಯವನ್ನು ಆಡಿತ್ತು. ಅಲ್ಲದೆ ಟೆಸ್ಟ್ ಆರಂಭಕ್ಕೂ ಮುನ್ನವೇ ಸ್ಪಿನ್ನರ್ ಅಬ್ರಾರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಮಂಡಳಿಯ ಈ ನಿರ್ಧಾರದ ವಿರುದ್ಧ ಪ್ರಶ್ನೆಗಳನ್ನು ಎತ್ತಲಾಗಿತ್ತು. ಅಲ್ಲದೆ ಸ್ಪಿನ್ನರ್ಗಳ ಅಲಭ್ಯತೆಯ ಭಾರವನ್ನು ಪಾಕ್ ತಂಡ ಹೊರಬೇಕಾಯಿತು
5 / 6
ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಹಿಂದಿನ ತಪ್ಪಿನಿಂದ ಪಾಠ ಕಲಿತಿರುವ ಪಿಸಿಬಿ ಮತ್ತೊಮ್ಮೆ 25ರ ಹರೆಯದ ಲೆಗ್ ಸ್ಪಿನ್ನರ್ ಅಬ್ರಾರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮುಂದಿನ ಟೆಸ್ಟ್ ಪಂದ್ಯದಲ್ಲಿ ಅಬ್ರಾರ್ ಆಡುವ ಹನ್ನೊಂದರ ಭಾಗವಾಗಲಿದ್ದಾರೆ. ಅಬ್ರಾರ್ ಇದುವರೆಗೆ 6 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಟ್ಟು 38 ವಿಕೆಟ್ ಪಡೆದಿದ್ದಾರೆ.
6 / 6
ಅಬ್ರಾರ್ ಅಲ್ಲದೆ, ಬ್ಯಾಟಿಂಗ್ ಆಲ್‌ರೌಂಡರ್ ಕಮ್ರಾನ್ ಗುಲಾಮ್ ಕೂಡ ಮತ್ತೊಮ್ಮೆ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಮೊದಲ ಟೆಸ್ಟ್‌ನ ಪ್ರದರ್ಶನವನ್ನು ನೋಡಿದರೆ, ಕಮ್ರಾನ್ ಗುಲಾಮ್ ಅವರು ಎರಡನೇ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆಯಬಹುದು ಇವರಲ್ಲದೆ, ವೇಗದ ಬೌಲರ್ ಅಮೀರ್ ಜಮಾಲ್ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರಾದರೂ, ಮುಂದಿನ ಟೆಸ್ಟ್‌ನಲ್ಲಿ ಅವರು ಆಡುವುದು ಇನ್ನೂ ಅವರ ಫಿಟ್‌ನೆಸ್ ಅನ್ನು ಅವಲಂಬಿಸಿರುತ್ತದೆ.