PAK vs BAN: ಟೆಸ್ಟ್ ಸರಣಿಯಿಂದ ಹೊರಬಿದ್ದ ಪಾಕ್ ಸ್ಟಾರ್ ಆಲ್‌ರೌಂಡರ್..!
PAK vs BAN: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 21 ರಂದು ರಾವಲ್ಪಿಂಡಿ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಸರಣಿ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ತಂಡದ ಸ್ಟಾರ್ ಆಟಗಾರ ಅಮೀರ್ ಜಮಾಲ್ ಇಂಜುರಿಯಿಂದಾಗಿ ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ.
1 / 6
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 21 ರಂದು ರಾವಲ್ಪಿಂಡಿ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಸರಣಿ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ತಂಡದ ಸ್ಟಾರ್ ಆಟಗಾರ ಅಮೀರ್ ಜಮಾಲ್ ಇಂಜುರಿಯಿಂದಾಗಿ ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ.
2 / 6
ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ತಂಡವನ್ನು ಪ್ರಕಟಿಸಿದಾಗ, ಅಮೀರ್ ಜಮಾಲ್ ಅವರ ಫಿಟ್ನೆಸ್ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಂಡಳಿಯು ತಿಳಿಸಿತ್ತು. ಈ ಮೊದಲು ಜಮಾಲ್ ಎರಡನೇ ಟೆಸ್ಟ್ ಪಂದ್ಯದ ಹೊತ್ತಿಗೆ ಪೂರ್ಣ ಫಿಟ್ ಆಗಿ ತಂಡಕ್ಕೆ ಮರಳಬಹುದು ಎಂಬ ವಿಶ್ವಾಸವಿತ್ತು.
3 / 6
ಆದರೆ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಅಮೀರ್ ಜಮಾಲ್ ಇದೀಗ ಈ ಸರಣಿಯಿಂದ ಹೊರಗುಳಿದಿದ್ದಾರೆ. ಮೇ ತಿಂಗಳಿನಿಂದ ಗಾಯದಿಂದ ಬಳಲುತ್ತಿದ್ದ ಅಮೀರ್ ಜಮಾಲ್ ತಂಡದಲ್ಲಿದ್ದ ಏಕೈಕ ಆಲ್ ರೌಂಡರ್ ಆಟಗಾರರಾಗಿದ್ದರು. ಹೀಗಾಗಿ ಅವರ ಅಲಭ್ಯತೆ ತಂಡಕ್ಕೆ ಕಾಡಲಿದೆ. ಇನ್ನು ಅಮೀರ್ ಬದಲಿ ಆಟಗಾರನನ್ನು ಪಿಸಿಬಿ ಇನ್ನೂ ಪ್ರಕಟಿಸಿಲ್ಲ.
4 / 6
ಅಮೀರ್ ಜಮಾಲ್ ಈ ವರ್ಷದ ಮೇ ತಿಂಗಳಿನಿಂದ ಕೆಳ ಬೆನ್ನಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲು ಫಿಟ್‌ನೆಸ್ ಅನ್ನು ಮರಳಿ ಪಡೆಯುವ ದೃಷ್ಟಿಯಿಂದ ಜಮಾಲ್ ಪ್ರಸ್ತುತ ಲಾಹೋರ್‌ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಫಿಟ್‌ನೆಸ್ ಮೇಲೆ ಕೆಲಸ ಮಾಡುತ್ತಿದ್ದಾರೆ.
5 / 6
ಪಾಕಿಸ್ತಾನ ತಂಡ: ಶಾನ್ ಮಸೂದ್ (ನಾಯಕ), ಅಬ್ದುಲ್ಲಾ ಶಫೀಕ್, ಬಾಬರ್ ಆಝಂ, ಮೊಹಮ್ಮದ್ ಹುರೈರಾ, ಸೈಮ್ ಅಯೂಬ್, ಸೌದ್ ಶಕೀಲ್, ಅಘಾ ಸಲ್ಮಾನ್, ಕಮ್ರಾನ್ ಗುಲಾಮ್, ಮೊಹಮ್ಮದ್ ರಿಜ್ವಾನ್, ಸರ್ಫರಾಜ್ ಅಹ್ಮದ್, ಮೀರ್ ಹಮ್ಜಾ, ಅಬ್ರಾರ್ ಅಹ್ಮದ್, ಮೊಹಮ್ಮದ್ ಅಲಿ, ಖುರ್ರಂ ಶಹಜಾದ್, ನಸೀಮ್ ಶಹಜಾದ್, ಶಾಹೀನ್ ಅಫ್ರಿದಿ
6 / 6
ಬಾಂಗ್ಲಾದೇಶ ತಂಡ: ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮೊಮಿನುಲ್ ಹಕ್, ಶದ್ಮನ್ ಇಸ್ಲಾಂ, ಮಹಮ್ಮದುಲ್ ಹಸನ್ ಜಾಯ್, ಶಕೀಬ್ ಅಲ್ ಹಸನ್, ಮೆಹದಿ ಹಸನ್ ಮಿರಾಜ್, ಜಾಕಿರ್ ಹಸನ್, ಲಿಟನ್ ದಾಸ್, ಮುಶ್ಫಿಕರ್ ರಹೀಮ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್ ಇಸ್ಲಾಂ, ನಹೀದ್ ರಾಣಾ, ನಯೀಮ್ ಹಸನ್