PAK vs NZ: ನಾಯಕ ಬದಲಾದರೂ ಪಾಕ್ ತಂಡ ಹಣೆಬರಹ ಬದಲಾಗಲಿಲ್ಲ..!
PAK vs NZ: ಪ್ರಸ್ತುತ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಏಪ್ರಿಲ್ 25 ರಂದು ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ 4 ರನ್‌ಗಳಿಂದ ಆತಿಥೇಯ ಪಾಕ್ ತಂಡವನ್ನು ಮಣಿಸಿ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.
1 / 6
ಪ್ರಸ್ತುತ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಏಪ್ರಿಲ್ 25 ರಂದು ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ 4 ರನ್‌ಗಳಿಂದ ಆತಿಥೇಯ ಪಾಕ್ ತಂಡವನ್ನು ಮಣಿಸಿ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.
2 / 6
ಇದರೊಂದಿಗೆ ತವರು ನೆಲದಲ್ಲೇ ಪಾಕ್ ತಂಡ ಇನ್ನೊಂದು ಸರಣಿ ಕಳೆದುಕೊಳ್ಳುವ ಆತಂಕದಲ್ಲಿದೆ. ಅಲ್ಲದೆ ಮತ್ತೊಮ್ಮೆ ನಾಯಕತ್ವವಹಿಸಿಕೊಂಡ ಬಾಬರ್ ಆಝಂ ನೇತೃತ್ವದಲ್ಲೂ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನದಲ್ಲಿ ಬದಲಾವಣೆ ಕಂಡುಬರುತ್ತಿಲ್ಲ.
3 / 6
ವಾಸ್ತವವಾಗಿ ಸತತ ಸರಣಿ ಸೋಲುಗಳಿಂದ ಕಂಗೆಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್ಗೂ ಮೊದಲು ತನ್ನ ತಂಡದ ನಾಯಕನನ್ನು ಬದಲಾಯಿಸಿತು. ಅದರಂತೆ ಮತ್ತೊಮ್ಮೆ ತಂಡದ ನಾಯಕತ್ವವನ್ನು ಬಾಬರ್ ಆಝಂಗೆ ಹಸ್ತಾಂತರಿಸಲಾಗಿದೆ. ಅದಾಗ್ಯೂ ತಂಡದ ಪ್ರದರ್ಶನ ಸುಧಾರಿಸುತ್ತಿಲ್ಲ.
4 / 6
ಅದರಲ್ಲೂ ನ್ಯೂಜಿಲೆಂಡ್ನ ಸ್ಟಾರ್ ಆಟಗಾರರೆಲ್ಲ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ಬಿ ತಂಡವನ್ನು ಪಾಕ್ ಪ್ರವಾಸಕ್ಕೆ ಕಳುಹಿಸಲಾಗಿದೆ. ಇತ್ತ ಸ್ಟಾರ್ ಆಟಗಾರರನ್ನೇಲ್ಲ ಕಟ್ಟಿಕೊಂಡು ಅಖಾಡಕ್ಕಿಳಿಯುತ್ತಿರುವ ಪಾಕ್ ತಂಡಕ್ಕೆ ಮಾತ್ರ ಗೆಲುವು ದಕ್ಕುತ್ತಿಲ್ಲ.
5 / 6
ಸರಣಿಯ ನಾಲ್ಕನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ನ್ಯೂಜಿಲೆಂಡ್ ಪರ ಟಿಮ್ ರಾಬಿನ್ಸನ್ 4 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 51 ರನ್ ಕಲೆಹಾಕಿದರು.
6 / 6
179 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನ ಪರ ಫಖರ್ ಜಮಾನ್ 4 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 61 ರನ್ ಬಾರಿಸಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.