T20 World Cup 2024: ಟಿ20 ವಿಶ್ವಕಪ್ಗೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ್
T20 World Cup 2024: ಈ ಬಾರಿಯ ಟಿ20 ವಿಶ್ವಕಪ್ ಜೂನ್ 2 ರಿಂದ ಶುರುವಾಗಲಿದೆ. ಯುಎಸ್ಎ-ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸುತ್ತಿರುವ ಟಿ20 ವಿಶ್ವಕಪ್ 19ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಜೂನ್ 9 ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ನ್ಯೂಯಾರ್ಕ್ನ ನೂತನ ಕ್ರಿಕೆಟ್ ಮೈದಾನದ ಆತಿಥ್ಯವಹಿಸಲಿದೆ.
1 / 6
T20 World Cup 2024: ಟಿ20 ವಿಶ್ವಕಪ್ಗಾಗಿ ಪಾಕಿಸ್ತಾನ್ ತಂಡವನ್ನು (Pakistan T20 Squad) ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಬಾಬರ್ ಆಝಂ ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಿಂದ ವೇಗಿ ಹಸನ್ ಅಲಿ ಅವರನ್ನು ಕೈ ಬಿಡಲಾಗಿದ್ದು, ಅವರ ಸ್ಥಾನದಲ್ಲಿ ಹ್ಯಾರಿಸ್ ರೌಫ್ಗೆ ಸ್ಥಾನ ಕಲ್ಪಿಸಲಾಗಿದೆ.
2 / 6
ಈ ಬಾರಿಯ ಏಕದಿನ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಕಳಪೆ ಪ್ರದರ್ಶನದ ಕಾರಣ ಹ್ಯಾರಿಸ್ ರೌಫ್ ಅವರನ್ನು ಪಾಕ್ ತಂಡದಿಂದ ಕೈ ಬಿಡಲಾಗಿತ್ತು. ಇದೀಗ ಮತ್ತೊಮ್ಮೆ ಐಸಿಸಿ ಟೂರ್ನಿಯ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಘಾತಕ ವೇಗಿ ಯಶಸ್ವಿಯಾಗಿದ್ದಾರೆ.
3 / 6
ಇನ್ನು ಈ ಹಿಂದೆ ನಿವೃತ್ತರಾಗಿದ್ದ ಎಡಗೈ ವೇಗಿ ಮೊಹಮ್ಮದ್ ಅಮೀರ್ ಹಾಗೂ ಆಲ್ರೌಂಡರ್ ಇಮಾದ್ ವಾಸಿಂ ಕೂಡ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಮೀರ್ 4 ವರ್ಷಗಳ ಹಿಂದೆ ನಿವೃತ್ತಿ ಘೋಷಿಸಿದ್ದರು. ಹಾಗೆಯೇ ಇಮಾದ್ ವಾಸಿಂ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು.
4 / 6
ಆದರೆ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಮೀರ್ ಹಾಗೂ ಇಮಾದ್ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಇಬ್ಬರನ್ನು ನಿವೃತ್ತಿಯಿಂದ ಹೊರಬರುವಂತೆ ಮನವೊಲಿಸುವಲ್ಲಿ ಪಾಕ್ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿದೆ. ಅದರಂತೆ ಇದೀಗ ಇಬ್ಬರು ಅನುಭವಿ ಆಟಗಾರರು ಪಾಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
5 / 6
ಹಾಗೆಯೇ ಹೊಸ ಆಟಗಾರರಾಗಿ ಉಸ್ಮಾನ್ ಖಾನ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಮುಹಮ್ಮದ್ ಇರ್ಫಾನ್ ಖಾನ್ ಪಾಕ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಪಾಕಿಸ್ತಾನ್ ಟಿ20 ವಿಶ್ವಕಪ್ ತಂಡ ಈ ಕೆಳಗಿನಂತಿದೆ...
6 / 6
ಪಾಕಿಸ್ತಾನ್ ಟಿ20 ವಿಶ್ವಕಪ್ ತಂಡ: ಬಾಬರ್ ಆಝಂ (ನಾಯಕ), ಅಬ್ರಾರ್ ಅಹ್ಮದ್, ಆಝಂ ಖಾನ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಂ, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಝ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ಖಾನ್.