‘ಪಾಕ್ ತಂಡಕ್ಕೆ ಗೌತಮ್ ಗಂಭೀರ್ ಅವರಂತಹ ಕೋಚ್ ಬೇಕು’; ಮಾಜಿ ಪಾಕ್ ಆಟಗಾರ
Danish Kaneria: ಪಾಕ್ ತಂಡದ ಬಗ್ಗೆ ಮಾತನಾಡಿರುವ ಡ್ಯಾನಿಶ್ ಕನೇರಿಯಾ, ಪಾಕಿಸ್ತಾನಿ ಕ್ರಿಕೆಟ್ ಸುಧಾರಿಸಲು ಬಯಸಿದರೆ ಅವರಿಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಗೌತಮ್ ಗಂಭೀರ್ ಅವರಂತಹ ಕೋಚ್ ಅಗತ್ಯವಿದೆ ಎಂದಿದ್ದಾರೆ. ಇದಲ್ಲದೆ ಡ್ಯಾನಿಶ್ ಕನೇರಿಯಾ, ಗೌತಮ್ ಗಂಭೀರ್ ಅವರ ವರ್ತನೆ ಮತ್ತು ಶೈಲಿಯನ್ನು ಸಹ ಸಾಕಷ್ಟು ಹೊಗಳಿದ್ದಾರೆ.
1 / 7
ತವರಿನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಸೋಲನುಭವಿಸಿದಾಗಿನಿಂದ, ಈ ತಂಡದ ಮೇಲೆ ನಿರಂತರವಾಗಿ ಟೀಕಾ ಪ್ರಹಾರ ನಡೆಯುತ್ತಿದೆ. ಅದರಲ್ಲೂ ತಂಡದ ಆಟಗಾರರನ್ನು ತೀವ್ರವಾಗಿ ನಿಂದಿಸಲಾಗುತ್ತಿದೆ. ಈ ನಡುವೆ ತಂಡದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಕೂಡ ಪಾಕಿಸ್ತಾನ ತಂಡದ ಕಳಪೆ ಸ್ಥಿತಿಗೆ ಪಿಸಿಬಿ ಮತ್ತು ತಂಡದ ನೀತಿಗಳನ್ನು ದೂಷಿಸಿದ್ದಾರೆ.
2 / 7
ಅಲ್ಲದೆ ತಂಡದ ಬಗ್ಗೆ ಮಾತನಾಡಿರುವ ಡ್ಯಾನಿಶ್ ಕನೇರಿಯಾ, ಪಾಕಿಸ್ತಾನಿ ಕ್ರಿಕೆಟ್ ಸುಧಾರಿಸಲು ಬಯಸಿದರೆ ಅವರಿಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಗೌತಮ್ ಗಂಭೀರ್ ಅವರಂತಹ ಕೋಚ್ ಅಗತ್ಯವಿದೆ ಎಂದಿದ್ದಾರೆ. ಇದಲ್ಲದೆ ಡ್ಯಾನಿಶ್ ಕನೇರಿಯಾ, ಗೌತಮ್ ಗಂಭೀರ್ ಅವರ ವರ್ತನೆ ಮತ್ತು ಶೈಲಿಯನ್ನು ಸಹ ಸಾಕಷ್ಟು ಹೊಗಳಿದ್ದಾರೆ.
3 / 7
ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಕನೇರಿಯಾ, ಗೌತಮ್ ಗಂಭೀರ್ ಅತ್ಯುತ್ತಮ ಕ್ರಿಕೆಟಿಗ, ಅವರು ಒಳ್ಳೆಯ ವ್ಯಕ್ತಿ. ಅವರು ಎಂದಿಗೂ ಬೆನ್ನ ಹಿಂದೆ ಮಾತನಾಡುವ ವ್ಯಕ್ತಿ ಅಲ್ಲ. ಏನೇ ಇದ್ದರೂ ಗಂಭೀರ್ ಆಟಗಾರರ ಮುಂದೆಯೇ ಹೇಳುತ್ತಾರೆ. ಒಬ್ಬ ಕೋಚ್ ಆದವರು ಹಾಗೆ ಇರಬೇಕು.
4 / 7
ಸದ್ಯ ಪಾಕಿಸ್ತಾನ ತಂಡಕ್ಕೆ ಬಲವಾದ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೋಚ್ ಅಗತ್ಯವಿದೆ. ಅದಕ್ಕೆ ಹೇಳಿ ಮಾಡಿಸಿದ ವ್ಯಕ್ತಿಯಾಗಿ ಗಂಭೀರ್ ಇದ್ದಾರೆ. ಕಳಪೆ ಪ್ರದರ್ಶನ ನೀಡುವ ಆಟಗಾರರನ್ನು ತಂಡದಿಂದ ಕೈಬಿಡಲು ಹಿಂದೆ ಮುಂದೆ ನೋಡದಂತಹ ಕೋಚ್ ಪಾಕಿಸ್ತಾನಕ್ಕೂ ಬೇಕು ಎಂದು ಕನೇರಿಯಾ ಹೇಳಿದ್ದಾರೆ.
5 / 7
ಡ್ಯಾನಿಶ್ ಕನೇರಿಯಾ ಅವರ ಈ ಹೇಳಿಕೆಗೆ ಕಾರಣವೂ ಇದ್ದು, ಪಾಕಿಸ್ತಾನ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಸೋತಿದ್ದಲ್ಲದೆ, ಟಿ20 ವಿಶ್ವಕಪ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಇದರಲ್ಲಿ ಅಮೆರಿಕ ವಿರುದ್ಧದ ಸೋಲು ಪಾಕಿಸ್ತಾನ ತಂಡವನ್ನು ಸಾಕಷ್ಟು ಟೀಕೆಗಳಿಗೆ ಗುರಿ ಮಾಡಿತು. ಇದಾದ ಬಳಿಕ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನೂ ಪಾಕಿಸ್ತಾನ ಕಳೆದುಕೊಂಡಿತ್ತು.
6 / 7
ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಪಾಕಿಸ್ತಾನ 0-2 ಅಂತರದಲ್ಲಿ ಕಳೆದುಕೊಂಡಿತ್ತು. ಅಂದರೆ, ಪಾಕಿಸ್ತಾನ ತನ್ನ ಸ್ವಂತ ನೆಲದಲ್ಲಿ ಕ್ಲೀನ್ ಸ್ವೀಪ್ ಮುಜುಗರಕ್ಕೆ ಒಳಗಾಯಿತು. ಇದಲ್ಲದೆ ಪಾಕ್ ತಂಡ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ರೇಸ್‌ನಿಂದ ಹೊರಗುಳಿದಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಶ್ನಾರ್ಥಕ ಚಿಹ್ನೆಗಳು ಖಂಡಿತವಾಗಿಯೂ ಉದ್ಭವಿಸುತ್ತವೆ.
7 / 7
ಬಾಂಗ್ಲಾದೇಶದ ಸೋಲಿನ ನಂತರ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕತ್ವದಿಂದ ಮತ್ತು ಬಾಬರ್ ಆಝಂ ಅವರನ್ನು ಟಿ20 ನಾಯಕತ್ವದಿಂದ ತೆಗೆದುಹಾಕಬಹುದು ಎಂಬ ಸುದ್ದಿ ಇದೀಗ ಪಾಕಿಸ್ತಾನದಲ್ಲಿ ಹರಿದಾಡುತ್ತಿದೆ. ಅವರ ಸ್ಥಾನದಲ್ಲಿ ಮೊಹಮ್ಮದ್ ರಿಜ್ವಾನ್ ಅವರು ಎಲ್ಲಾ ಮೂರು ಮಾದರಿಗಳ ನಾಯಕರಾಗಬಹುದು ಎಂದು ಹೇಳಲಾಗುತ್ತಿದೆ.