ಪಾಕಿಸ್ತಾನದಲ್ಲಿ 118 ವರ್ಷಗಳ ಹಳೆಯ ಟೆಸ್ಟ್ ದಾಖಲೆ ಉಡೀಸ್

|

Updated on: Jan 26, 2025 | 10:31 AM

Pakistan vs West Indies, 2nd Test: ಪಾಕಿಸ್ತಾನ್ ಮತ್ತು ವೆಸ್ಟ್ ಇಂಡೀಸ್ ನಡುವಣ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ಮೊದಲ ದಿನದಾಟದಲ್ಲೇ ಮುಗಿದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 163 ರನ್​ಗಳಿಗೆ ಆಲೌಟ್ ಆದರೆ, ಆತಿಥೇಯ ಪಾಕಿಸ್ತಾನ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 154 ರನ್​ಗೆ ಸರ್ವಪತನ ಕಂಡಿದೆ.

1 / 7
ಪಾಕಿಸ್ತಾನ್ ಹಾಗೂ ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಪಂದ್ಯವು ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಿದೆ. ಅದು ಕೂಡ ಮೊದಲ ದಿನದಾಟದಲ್ಲೇ 20 ವಿಕೆಟ್ ಪತನಗೊಳ್ಳುವ ಮೂಲಕ. ಮುಲ್ತಾನ್​ನ ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

2 / 7
ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ನೊಮಾನ್ ಅಲಿ ಅವರ ಸ್ಪಿನ್ ಮೋಡಿಗೆ ತತ್ತರಿಸಿದ ವಿಂಡೀಸ್ ಕೇವಲ 58 ರನ್​​ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಗುಡಾಕೇಶ್ ಮೋಟಿ 55 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು 163 ರನ್​ಗಳಿಸಿ ಆಲೌಟ್ ಆಯಿತು.

3 / 7
ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ಕೂಡ ರನ್​ಗಳಿಸಲು ಪರದಾಡಿದರು. ಇದರ ನಡುವೆ ಮೊಹಮ್ಮದ್ ರಿಝ್ವಾನ್ 49 ರನ್​ ಬಾರಿಸಿದ್ದು ಗರಿಷ್ಠ ಸ್ಕೋರ್​. ಅಲ್ಲದೆ ಪಾಕಿಸ್ತಾನ್ ತಂಡವು ಕೇವಲ 154 ರನ್​ಗಳಿಗೆ ಆಲೌಟ್ ಆಗುವ ಮೂಲಕ 9 ರನ್​ಗಳ ಹಿನ್ನಡೆ ಅನುಭವಿಸಿತು.

4 / 7
ವಿಶೇಷ ಎಂದರೆ ಮೊದಲ ದಿನದಾಟದಲ್ಲೇ ಉರುಳಿದ 20 ವಿಕೆಟ್​ಗಳಲ್ಲಿ 16 ವಿಕೆಟ್ ಕಬಳಿಸಿದ್ದು ಸ್ಪಿನ್ನರ್​ಗಳು. ಪಾಕಿಸ್ತಾನ್ ಪರ ಸ್ಪಿನ್ನರ್​ಗಳಾದ ನೊಮಾನ್ ಅಲಿ (6), ಸಾಜಿದ್ ಖಾನ್ (2), ಅಬ್ರಾರ್ ಅಹ್ಮದ್ (1) ಒಟ್ಟು 9 ವಿಕೆಟ್ ಕಬಳಿಸಿದರೆ, ವೆಸ್ಟ್ ಇಂಡೀಸ್ ಸ್ಪಿನ್ನರ್​ಗಳಾದ ಗುಡಾಕೇಶ್ ಮೋಟಿ (3), ಜೋಮೆಲ್ ವಾರಿಕನ್ (4) ಒಟ್ಟು 7 ವಿಕೆಟ್ ಪಡೆದರು.

5 / 7
ಈ 16 ವಿಕೆಟ್​​ಗಳೊಂದಿಗೆ ಪಾಕಿಸ್ತಾನ್ ಮತ್ತು ವೆಸ್ಟ್ ಇಂಡೀಸ್ ಸ್ಪಿನ್ನರ್​ಗಳು ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದರು. ಅಂದರೆ ಟೆಸ್ಟ್ ಇತಿಹಾಸದಲ್ಲಿ ಮೊದಲ ದಿನದಾಟದಲ್ಲಿ ಸ್ಪಿನ್ನರ್​ಗಳು ಕಬಳಿಸಿದ ಗರಿಷ್ಠ ವಿಕೆಟ್​ಗಳ ಸಂಖ್ಯೆ 14. ಇಂತಹದೊಂದು ದಾಖಲೆ ನಿರ್ಮಾಣವಾಗಿದ್ದು 1907 ರಲ್ಲಿ.

6 / 7
1907ರಲ್ಲಿ ಇಂಗ್ಲೆಂಡ್​ನ ಲೀಡ್ಸ್​​ನಲ್ಲಿ ನಡೆದ ಪಂದ್ಯದಲ್ಲಿ ಸೌತ್ ಆಫ್ರಿಕಾ-ಇಂಗ್ಲೆಂಡ್ ಸ್ಪಿನ್ನರ್​ಗಳು ಜೊತೆಗೂಡಿ ಮೊದಲ ದಿನದಾಟದಲ್ಲಿ 14 ವಿಕೆಟ್ ಉರುಳಿಸಿದ್ದರು. ಇದು ಈವರೆಗಿನ ಶ್ರೇಷ್ಠ ದಾಖಲೆಯಾಗಿತ್ತು. ಅಲ್ಲದೆ ಕಳೆದ ಒಂದು ಶತಮಾನದಲ್ಲಿ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ.

7 / 7
ಆದರೀಗ ಪಾಕಿಸ್ತಾನ್-ವೆಸ್ಟ್ ಇಂಡೀಸ್ ಸ್ಪಿನ್ನರ್​ಗಳು ಜೊತೆಗೂಡಿ 118 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಅಲ್ಲದೆ ಮುಲ್ತಾನ್ ಪಿಚ್​ನಲ್ಲಿ 16 ವಿಕೆಟ್​ ಕಬಳಿಸಿ, ಟೆಸ್ಟ್​ನಲ್ಲಿ ಐತಿಹಾಸಿಕ ಸಾಧನೆ ಮಾಡುವಲ್ಲಿ ನೊಮಾನ್ ಅಲಿ, ಸಾಜಿದ್ ಖಾನ್, ಅಬ್ರಾರ್ ಅಹ್ಮದ್, ಗುಡಾಕೇಶ್ ಮೋಟಿ , ಜೋಮೆಲ್ ವಾರಿಕನ್ ಯಶಸ್ವಿಯಾಗಿದ್ದಾರೆ.

Published On - 10:30 am, Sun, 26 January 25