AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಕತ್ವ ಸಿಕ್ಕ ಬಳಿಕ ಸೂರ್ಯನ ಬ್ಯಾಟ್ ಸೈಲೆಂಟ್

Suryakumar Yadav: ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 19 ಪಂದ್ಯಗಳನ್ನಾಡಿದೆ. ಈ ವೇಳೆ ಭಾರತ ತಂಡವು 16 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಆದರೆ ಈ ಗೆಲುವಿನಲ್ಲಿ ಸೂರ್ಯನ ಬ್ಯಾಟ್​ನಿಂದ ನಿರೀಕ್ಷಿತ ಕೊಡುಗೆ ಮೂಡಿಬಂದಿಲ್ಲ. ಏಕೆಂದರೆ ಕಳೆದ 12 ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಕಲೆಹಾಕಿರುವುದು 242 ರನ್​​ಗಳು ಮಾತ್ರ.

ಝಾಹಿರ್ ಯೂಸುಫ್
|

Updated on: Jan 26, 2025 | 11:53 AM

Share
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಟಿ20 ಕ್ರಿಕೆಟ್​ನಲ್ಲಿ ರುದ್ರನರ್ತನ ತೋರಿದ್ದ ಸೂರ್ಯ ಇದೀಗ ರನ್​ಗಳಿಸಲು ಪರದಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಅವರು ಕಳೆದ 10 ಇನಿಂಗ್ಸ್​ಗಳಲ್ಲಿ ಕಲೆಹಾಕಿರುವ ಒಟ್ಟು ಸ್ಕೋರ್.

1 / 5
ಟಿ20 ವಿಶ್ವಕಪ್ 2024ರ ಬಳಿಕ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಸೂರ್ಯ 12 ಪಂದ್ಯಗಳನ್ನಾಡಿದ್ದಾರೆ. ಆದರೆ ಒಮ್ಮೆಯೂ 360 ಡಿಗ್ರಿ ನರ್ತನ ತೋರಿಲ್ಲ ಎಂಬುದು ವಿಶೇಷ. ಏಕೆಂದರೆ ಈ 12 ಇನಿಂಗ್ಸ್​ಗಳಲ್ಲಿ ಅವರು ಕಲೆಹಾಕಿರುವ ರನ್​ ಸರಾಸರಿ ಕೇವಲ 24.50 ಮಾತ್ರ.

2 / 5
ಅಂದರೆ ಕಳೆದ 12 ಇನಿಂಗ್ಸ್​ಗಳಿಂದ ಸೂರ್ಯಕುಮಾರ್ ಯಾದವ್ 242 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. 2022 ರಲ್ಲಿ 1164 ರನ್​ ಬಾರಿಸಿದ್ದ ಸೂರ್ಯ, 2023 ರಲ್ಲಿ 17 ಇನಿಂಗ್ಸ್​ಗಳಿಂದ 773 ರನ್​ ಕಲೆಹಾಕಿದ್ದರು. ಆದರೀಗ 12 ಇನಿಂಗ್ಸ್ ಆಡಿದರೂ ಸೂರ್ಯನಿಗೆ 250 ರನ್​ಗಳಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.

3 / 5
ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೊನ್ನೆಗೆ ಔಟಾಗಿದ್ದ ಸೂರ್ಯ, ದ್ವಿತೀಯ ಪಂದ್ಯದಲ್ಲಿ ಕೇವಲ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ 2025 ರಲ್ಲೂ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ.

4 / 5
ಇನ್ನು ಸೂರ್ಯಕುಮಾರ್ ಯಾದವ್ ಫಾರ್ಮ್ ಅವರ ಹದಗೆಡಲು ಪ್ರಮುಖ ಕಾರಣ ಅವರ ಮೇಲಿರುವ ಹೆಚ್ಚುವರಿ ಜವಾಬ್ದಾರಿ ಎಂದು ವಿಶ್ಲೇಷಿಸಲಾಗುತ್ತಿದೆ. ಅಂದರೆ ಟಿ20 ವಿಶ್ವ ಚಾಂಪಿಯನ್ ತಂಡವನ್ನು ಮುನ್ನಡೆಸುತ್ತಿರುವ ಒತ್ತಡ ಅವರ ಮೇಲಿದ್ದು, ಇದರಿಂದಾಗಿ ರನ್​ಗಳಿಸಲು ಪರದಾಡುತ್ತಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳಲ್ಲಿ ವಿಫಲರಾಗಿರುವ ಸೂರ್ಯ ಮುಂದಿನ 3 ಪಂದ್ಯಗಳ ಮೂಲಕ ಹಳೆಯ ಲಯಕ್ಕೆ ಮರಳಲಿದ್ದಾರಾ ಕಾದು ನೋಡಬೇಕಿದೆ.

5 / 5
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ